Thursday, January 16, 2025

DDPI Suspension Order

  Wisdom News       Thursday, January 16, 2025
Hedding ; DDPI Suspension Order...



ಶ್ರೀ ಹೆಚ್. ಕೆ. ಪಾಂಡು, ಉಪನಿರ್ದೇಶಕರು(ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಹಾಸನ ಮತ್ತು ಶ್ರೀ ವೇಣುಗೋಪಾಲ್ ರಾವ, ಅಧೀಕ್ಷಕರು, ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಹಾಸನ ಇವರುಗಳ ವಿರುದ್ಧದ ಲೋಕಾಯುಕ್ತ ಟ್ರಾಪ್ ಪ್ರಕರಣದಲ್ಲಿ ಅಮಾನತ್ತುಗೊಳಿಸುವ ಬಗ್ಗೆ.

ಓದಲಾಗಿದೆ:-

ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಕಡತ :DPI-CPI0C2-4(CCA)/1/2025-SEC-EST 1A- COMMISSIONER OFFICE OF PUBLIC INSTRUCTION (Computer No. 1641605)

ಪ್ರಸ್ತಾವನೆ:-

ಮೇಲೆ ಓದಲಾದ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಏಕ ಕಡತದಲ್ಲಿ ಶ್ರೀ ಹೆಚ್. ಕೆ. ಪಾಂಡು, ಉಪನಿರ್ದೇಶಕರು(ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಹಾಸನ ಇವರ ವಿರುದ್ಧ ಹಾಸನ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ:01/2025, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988(ತಿದ್ದುಪಡಿ ಕಾಯ್ದೆ 2018) ಕಲಂ7(a), ಆಫ್ pc act 1988 (ತಿದ್ದುಪಡಿ ಕಾಯ್ದೆ-2018) ರಡಿ ದಿನಾಂಕ:03-01-2025ರಂದು ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣದಲ್ಲಿ ಆಪಾದಿತ ಸರ್ಕಾರಿ ಅಧಿಕಾರಿಯಾದ ಎ -1 ಶ್ರೀ ಹೆಚ್. ಕೆ. ಪಾಂಡು, ಉಪನಿರ್ದೇಶಕರು(ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಹಾಸನ ಜಿಲ್ಲೆ ಮತ್ತು ಎ-2 ಶ್ರೀ ವೇಣುಗೋಪಾಲ್ ರಾವ್ ಎ.ಎಸ್., ಅಧೀಕ್ಷಕರು, ಉಪನಿರ್ದೇಶಕರ ಕಛೇರಿ, ಶಾ.ಶಿ.ಇ., ಹಾಸನ ಇವರು ಪಿರ್ಯಾದುದಾರರಾದ ಶ್ರೀ ಜೆ. ಅಭಿಜಿತ್ ಎಂಬುವವರಿಂದ ದಿ:04/01/2025ರಂದು ಲಂಚ ಸ್ವೀಕರಿಸುವಾಗ ಲಂಚದ ಹಣದ ಸಮೇತ ಪಂಚ ಸಾಕ್ಷಿದಾರರ ಸಮ್ಮುಖದಲ್ಲಿ ಸಿಕ್ಕಿಬಿದ್ದಿರುತ್ತಾರೆ. ಆದ್ದರಿಂದ, ಸದರಿ ಆರೋಪಿತ ಅಧಿಕಾರಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತ ಅಧಿಕಾರಿಯವರನ್ನು ದಿ:17/01/2025ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿರುತ್ತದೆ ಎಂಬ ಮಾಹಿತಿಯನ್ನು ಪೊಲೀಸ್ ನಿರೀಕ್ಷಕರು ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ, ಹಾಸನ ಇವರು ನೀಡಿರುತ್ತಾರೆ.

ಮುಖ್ಯ ಕಾರ್ಯನಿರ್ವಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಹಾಸನ ಇವರು ಶ್ರೀ ಹೆಚ್. ಕೆ. ಪಾಂಡು, ಉಪನಿರ್ದೇಶಕರು(ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಹಾಸನ ಜಿಲ್ಲೆ ಇವರು ದಿ:04/01/2025ರಂದು ಲೋಕಾಯುಕ್ತ ಟ್ಯಾಪ್ ಪ್ರಕರಣಕ್ಕೆ ಬಂಧನಕ್ಕೊಳಗಾಗಿರುವುದರಿಂದ ಶ್ರೀ ಹೆಚ್. ಎಸ್. ಚಂದ್ರಶೇಖರ್, ಶಿಕ್ಷಣಾಧಿಕಾರಿ, ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಹಾಸನ ಇವರನ್ನು ಉಪನಿರ್ದೇಶಕರು(ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಹಾಸನ ಜಿಲ್ಲೆ, ಹಾಸನ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿರಿಸಲಾಗಿದೆ ಎಂದು ಮಾಹಿತಿಯನ್ನು ನೀಡುತ್ತಾ, ಮುಂದಿನ ಕ್ರಮಕ್ಕಾಗಿ ಎಫ್. ಐ.ಆರ್. ಪ್ರತಿ ಮತ್ತು ಇತರೆ ದಾಖಲೆಗಳನ್ನು ಸಲ್ಲಿಸಿರುತ್ತಾರೆ.


logoblog

Thanks for reading DDPI Suspension Order

Previous
« Prev Post

No comments:

Post a Comment