Hedding ; SSLC Exam Tentative Time Table 2025
ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆ 2025ರ ತಾತ್ಕಾಲಿಕ ವೇಳಾಪಟ್ಟಿಯನ್ನು kseab.karnataka.gov.in ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿದೆ. 2025 ರ ಮಾರ್ಚ್ 20ರಿಂದ ಆರಂಭಗೊಂಡು ಏಪ್ರಿಲ್ 2ರವರೆಗೆ ಪರೀಕ್ಷೆಗಳು ನಡೆಯಲಿವೆ.
25 ದಿನಗಳ ಅವಧಿಯಲ್ಲಿ ಪರೀಕ್ಷೆಯನ್ನು ನಡೆಸಲು ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ನಿರ್ಧರಿಸಿದೆ. ಹದಿನೈದು ದಿನಗಳ ಆಕ್ಷೇಪಣೆ ಅವಧಿ ನಂತರ ಅಂತಿಮ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಿದೆ. ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸುಮಾರು 3-4 ತಿಂಗಳು ಮಾತ್ರ ಉಳಿದಿರುವುದರಿಂದ ವಿದ್ಯಾರ್ಥಿಗಳು ಓದಲು ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಶಿಸ್ತಿನಿಂದ ಅಧ್ಯಯನ ನಡೆಸಿದರೆ ಅತ್ಯುತ್ತಮ ಅಂಕ ಪಡೆಯಬಹುದು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯು ಪರೀಕ್ಷೆಯ ದಿನಾಂಕ, ಸಮಯ ಮತ್ತು ಪರೀಕ್ಷೆಗಳಿಗೆ ಸೂಚನೆಗಳಂತಹ ವಿವರಗಳನ್ನು ಒಳಗೊಂಡಿದ್ದು, ಶಾಲಾ ಅಭ್ಯರ್ಥಿಗಳು, ಪುನಾರವರ್ತಿತ ಅಭ್ಯರ್ಥಿಗಳು, ಖಾಸಗಿ ಅಭ್ಯರ್ಥಿಗಳಿಗೆ ಈ ವೇಳಾಪಟ್ಟಿ ಅನ್ವಯವಾಗುತ್ತದೆ. SSLC ಪರೀಕ್ಷೆಗೆ ಇನ್ನು 3 ತಿಂಗಳಿಗಿಂತ ತುಸು ಹೆಚ್ಚು ಸಮಯವಿದ್ದು, ವಿದ್ಯಾರ್ಥಿಗಳು ಈಗಲೇ ಓದಲು ವೇಳಾಪಟ್ಟಿ ಹಾಕಿಕೊಳ್ಳಬಹುದು. ಕರ್ನಾಟಕ SSLC ಅಂತಿಮ ವೇಳಾಪಟ್ಟಿ 2025 pdf ಈ ಸುದ್ದಿಯ ಕೊನೆಗೆ ಇದೆ. ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರ ತಾತ್ಕಾಲಿಕ ವೇಳಾಪಟ್ಟಿ
ಮಾ.20ರಂದು ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲಿಷ್(ಎನ್‌ಸಿಇಆರ್‌ಟಿ), ಸಂಸ್ಕೃತ
ಮಾ.24ರಂದು ದ್ವಿತೀಯ ಭಾಷೆ ಕನ್ನಡ, ಇಂಗ್ಲೀಷ್ ಪರೀಕ್ಷೆಗಳು ಜರುಗಲಿವೆ.
ಮಾ.27ರಂದು ತೃತೀಯ ಭಾಷೆ ಹಿಂದಿ(ಎನ್‌ಸಿಇಆರ್‌ಟಿ), ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮಾಹಿತಿ ತಂತ್ರಜ್ಞಾನ, ರೀಟೇಲ್ , ಆಟೋಮೊಬೈಲ್ , ಬ್ಯೂಟಿ ಅಂಡ್ ವೆಲ್‌ನೆಸ್, ಅಪರೆಲ್ ಮೇಡ್ ಆಪ್ಸ್ ಮತ್ತು ಹೋಮ್ ಫರ್ನಿಸಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಹಾರ್ಡ್‌ವೇರ್ ಪರೀಕ್ಷೆಗಳು ನಡೆಯಲಿವೆ.
ಏ.1ರಂದು ಎಲಿಮೆಂಟ್‌್ಸ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್-4, ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಇಂಜಿನಿಯರಿಂಗ್-4, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್-4, ಪ್ರೋಗ್ರಾಮಿಂಗ್ ಇನ್ ಎನ್‌ಎಸ್‌ಐ ಸಿ, ಅರ್ಥಶಾಸ್ತ್ರ.
ಏ.2ರಂದು ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ ಪರೀಕ್ಷೆಗಳು ನಡೆಯಲಿವೆ ಎಂದು ಮಂಡಳಿ ತಿಳಿಸಿದೆ.
ವೇಳಾಪಟ್ಟಿ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್

No comments:
Post a Comment