Hedding ; Revision of travel allowance rates for specially-abled employees of the State Government...
ರಾಜ್ಯ ಸರ್ಕಾರದ ವಿಶೇಷ-ಚೇತನ ನೌಕರರುಗಳಿಗೆ ಪ್ರಯಾಣ ಭತ್ಯೆ ದರಗಳ ಪರಿಷ್ಕರಣೆ ಆದೇಶ.
ಈ ಮೊದಲು ಚಾಲ್ತಿಯಲ್ಲಿದ್ದ ರಾಜ್ಯ ಸರ್ಕಾರದ ನೀತಿಯಂತೆ, ಮೇಲೆ (1) ಮತ್ತು (2)ರಲ್ಲಿ ಓದಲಾದ ದಿನಾಂಕ: 14.02.1979 ಮತ್ತು ದಿನಾಂಕ: 17.07.1979ರ ಸರ್ಕಾರಿ ಆದೇಶಗಳಲ್ಲಿ ಅಂಧ ಮತ್ತು ಅಂಗವಿಕಲ ರಾಜ್ಯ ಸರ್ಕಾರಿ ನೌಕರರಿಗೆ ಆದೇಶದ ನಿಬಂಧನೆಗಳ ಪೂರೈಕೆಗೊಳಪಟ್ಟು ಪ್ರಯಾಣ ಭತ್ಯೆಯನ್ನು ಮಂಜೂರು ಮಾಡಿ ಆದೇಶಗಳನ್ನು ಹೊರಡಿಸಲಾಗಿತ್ತು. ಸದರಿ ಸೌಲಭ್ಯವನ್ನು ನಿರ್ದಿಷ್ಟ ಬದಲಾವಣೆಗಳೊಂದಿಗೆ ಕಾಲದಿಂದ ಕಾಲಕ್ಕೆ ಮುಂದುವರೆಸಿಕೊಂಡು ಬರಲಾಗಿರುತ್ತದೆ. ಮುಂದುವರೆದು, 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳ ಬೆಳಕಿನಲ್ಲಿ, ಮೇಲೆ (3)ರಲ್ಲಿ ಓದಲಾದ ದಿನಾಂಕ: 11.01.2019ರ ಸರ್ಕಾರಿ ಆದೇಶದಲ್ಲಿ ರಾಜ್ಯ ಸರ್ಕಾರದ ವಿಶೇಷ-ಚೇತನ ನೌಕರರುಗಳಿಗೆ ಸದರಿ ಆದೇಶದಲ್ಲಿನ ನಿಬಂಧನೆಗಳ ಪೂರೈಕೆಗೊಳಪಟ್ಟು ಪ್ರಯಾಣ ಭತ್ಯೆಯನ್ನು ಮಂಜೂರು ಮಾಡಲು ವಿಸ್ತತ ಆದೇಶಗಳನ್ನು ಹೊರಡಿಸಲಾಗಿರುತ್ತದೆ.
ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ಮೇಲೆ (4)ರಲ್ಲಿ ಓದಲಾದ ದಿನಾಂಕ: 23.08.2024ರ ಸರ್ಕಾರಿ ಆದೇಶದಲ್ಲಿ 2024ರ ಪರಿಷ್ಕೃತ ವೇತನ ಶ್ರೇಣಿಗಳನ್ನು ದಿನಾಂಕ: 01.08.2024 ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲಾಗಿರುತ್ತದೆ. ರಾಜ್ಯ ಸರ್ಕಾರದ ವಿಶೇಷ-ಚೇತನ ನೌಕರರುಗಳಿಗೆ ಪ್ರಯಾಣ ಭತ್ಯೆಯ ಮಂಜೂರಾತಿ ಕುರಿತಂತೆ ಪ್ರಸ್ತುತ ಚಾಲ್ತಿಯಲ್ಲಿರುವ ಪದ್ದತಿಗೆ ಕೆಲವು ಬದಲಾವಣೆಗಳನ್ನು ಮಾಡಲು 7ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿರುತ್ತದೆ ಮತ್ತು ವಿಶೇಷ-ಚೇತನ ನೌಕರರುಗಳಿಗೆ ಪ್ರಸ್ತುತ
ಚಾಲ್ತಿಯಲ್ಲಿರುವ ಮೂಲ ವೇತನದ 62 ರಷ್ಟು ಪ್ರಯಾಣ ಭತ್ಯೆಯ ಸೌಲಭ್ಯವನ್ನು ಮುಂದುವರೆಸಲು ಸಹ ಆಯೋಗವು ಶಿಫಾರಸ್ಸು ಮಾಡಿರುತ್ತದೆ.
ರಾಜ್ಯ ಸರ್ಕಾರದ ವಿಶೇಷ-ಚೇತನ ನೌಕರರುಗಳಿಗೆ ಪ್ರಯಾಣ ಭತ್ಯೆ ಸೌಲಭ್ಯ ಮಂಜೂರು ಮಾಡುವುದನ್ನು ಕ್ರಮಬದ್ಧಗೊಳಿಸುವ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿರುತ್ತದೆ. ಅದರಂತೆ, ಈ ಕೆಳಕಂಡ ಆದೇಶಗಳನ್ನು ಹೊರಡಿಸಿದೆ.
ಸರ್ಕಾರಿ ಆದೇಶ ಸಂಖ್ಯೆ: ಆಇ 52 ಎಸ್‌ಆರ್‌ಪಿ 2024
ಬೆಂಗಳೂರು, ದಿನಾಂಕ 16ನೇ ಡಿಸೆಂಬರ್ 2024
ರಾಜ್ಯ ಸರ್ಕಾರದ ವಿಶೇಷ-ಚೇತನ ನೌಕರರುಗಳಿಗೆ 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಅವರ ಮೂಲ ವೇತನದ 6% ದರದಲ್ಲಿ ಯಾವುದೇ ಗರಿಷ್ಠ ಮಿತಿ ಇಲ್ಲದೇ 1ನೇ ಡಿಸೆಂಬರ್ 2024 ರಿಂದ ಜಾರಿಗೆ ಬರುವಂತೆ ಮಾಹೆಯಾನ ವಿಶೇಷ ಪ್ರಯಾಣ ಭತ್ಯೆಯನ್ನು ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ.
2. ಈ ವಿಶೇಷ ಭತ್ಯೆಯ ಮಂಜೂರಾತಿಯ ಉದ್ದೇಶಕ್ಕಾಗಿ ಅಂಗವಿಕಲತೆ (ವಿಶೇಷ-ಚೇತನ) ಎಂದರೆ ಅದು 'ವಿಶೇಷ ಚೇತನರ ಹಕ್ಕುಗಳ ಅಧಿನಿಯಮ, 2016' ರಲ್ಲಿರುವಂತೆ ಇರತಕ್ಕದ್ದು ಮತ್ತು ಅದರಂತೆ ಅರ್ಥೈಸಿಕೊಳ್ಳತಕ್ಕದ್ದು. ಅದರಂತೆ, ಅಂಧ ಮತ್ತು ಚಲನವಲನ ವೈಕಲ್ಯತೆಯುಳ್ಳ ಹಾಗೂ ವಾಕ್ ಮತ್ತು ಶ್ರವಣ ವೈಕಲ್ಯತೆಯುಳ್ಳ ನೌಕರರನ್ನೂ ಒಳಗೊಂಡಂತೆ ರಾಜ್ಯ ಸರ್ಕಾರದ ಎಲ್ಲಾ ವಿಶೇಷ-ಚೇತನ ನೌಕರರುಗಳು ದಿನಾಂಕ: 01.12.2024 ರಿಂದ ಜಾರಿಗೆ ಬರುವಂತೆ ಈ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ

No comments:
Post a Comment