Hedding ; Regarding conducting counseling for placing Group-B Head Teachers and equivalent cadre officers of the School Education Department in independent charge in the Education Officer cadre under KCRS Rule-32...
ಶಾಲಾ ಶಿಕ್ಷಣ ಇಲಾಖೆಯ ಗ್ರೂಪ್-ಬಿ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳನ್ನು ಕನಾಸೇ ನಿಯಮ-32ರಡಿ ಶಿಕ್ಷಣಾಧಿಕಾರಿ ವೃಂದದಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸಲು ಕೌನ್ಸಿಲಿಂಗ್ ನಡೆಸುವ ಬಗ್ಗೆ ಜ್ಞಾಪನ.
ವಿಷಯಕ್ಕೆ ಸಂಬಂಧಿಸಿದಂತೆ, ಗ್ರೂಪ್-ಬಿ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 78 ಅಧಿಕಾರಿಗಳಿಗೆ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದಕ್ಕೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು, 1958ರ ನಿಯಮ-32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಲು ಅನುವಾಗುವಂತೆ, ಖಾಲಿ ಇರುವ ಹುದ್ದೆಗಳನ್ನು ಪರಿಗಣನೆಗೆ ತೆಗೆದುಕೊಂಡು ಪ್ರಾಶಸ್ತ್ರದಂತೆ ಹುದ್ದೆಗಳನ್ನು ಕೌನ್ಸಲಿಂಗ್ ನಡೆಸಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲು ಉಲ್ಲೇಖಿತ ಜ್ಞಾಪನದಲ್ಲಿ (ಪ್ರತಿ ಲಗತ್ತಿಸಿದೆ) ನಿಗಧಿ ಮಾಡಲಾದ ದಿನಾಂಕವನ್ನು ಕಾರಣಾಂತರಗಳಿಂದ ದಿನಾಂಕ: 30.12.2024ರ ಪೂರ್ವಾಹ್ನ 10:30ಕ್ಕೆ ಶಿಕ್ಷಕರ ಕಲ್ಯಾಣ ನಿಧಿ, ಶಿಕ್ಷಕರ ಸಧನ, ಕೆ ಜಿ ರಸ್ತೆ, ಬೆಂಗಳೂರು ಇಲ್ಲಿ ನಡೆಸಲು ಮರುನಿಗದಿಗೊಳಿಸಿದೆ. ಸದರಿ ಕೌನ್ಸಿಲಿಂಗ್ ಪ್ರಕ್ರಿಯೆಗೆ ಕಡ್ಡಾಯವಾಗಿ ಭಾವಚಿತ್ರ ಸಹಿತ ಗುರುತಿನ ದಾಖಲೆಯೊಂದಿಗೆ ಸಕಾಲದಲ್ಲಿ ಹಾಜರಾಗಲು ತಿಳಿಸಿದೆ.

No comments:
Post a Comment