Hedding ; Regarding Conduct of NNMS Examination on Date,:19-01-2025...
2024-25 ನೇ ಸಾಲಿನ NMMS ಪರೀಕ್ಷೆಯನ್ನು ದಿನಾಂಕ: 19.01.2025 ರಂದು ನಡೆಸುವ ಬಗ್ಗೆ.
ಉಲ್ಲೇಖ
:- 1. Department of school Education & Literacy ನವದೆಹಲಿ ರವರ ಪತ್ರ ಸಂಖ್ಯೆ:F.No.1- -9/2023-SS, Dated: 13-04-2023.
2. ಈ ಕಛೇರಿ ಪತ್ರದ ಸಮ ಸಂಖ್ಯೆ ದಿನಾಂಕ:11.11.2024
3. ಈ ಕಛೇರಿ ಪತ್ರದ ಸಮ ಸಂಖ್ಯೆ ದಿನಾಂಕ:06.12.2024
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ 2024-25ನೇ ಸಾಲಿನಲ್ಲಿ ನ್ಯಾಷನಲ್ ಮೀನ್ಸ್-ಕಮ್ ಮೆರಿಟ್ ವಿದ್ಯಾರ್ಥಿ ವೇತನ(NMMS) ಪರೀಕ್ಷೆಯನ್ನು ದಿನಾಂಕ:05.01.2025 (ಭಾನುವಾರ) ರಂದು ನಡೆಸುವುದಾಗಿ ಉಲ್ಲೇಖ(2) ರ ಈ ಕಛೇರಿ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.
ಕಾರಣಾಂತರಗಳಿಂದ ಸದರಿ ಪರೀಕ್ಷೆಯನ್ನು ದಿನಾಂಕ: 19.01.2025 (ಭಾನುವಾರ) ಕ್ಕೆ ನಿಗದಿಪಡಿಸಲಾಗಿದೆ. ಈ ಬಗ್ಗೆ ಜಿಲ್ಲೆ, ತಾಲ್ಲೂಕು, ಶಾಲಾ ಹಂತದಲ್ಲಿ ವ್ಯಾಪಕ ಪ್ರಚಾರ ನೀಡಿ, ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸಲು ಅಗತ್ಯ ಕ್ರಮವಹಿಸಲು ತಿಳಿಸಿದೆ.
ಮುಂದುವರೆದು ಉಲ್ಲೇಖ-3 ರಂತೆ ಈಗಾಗಲೇ ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ತಮ್ಮ ಹಂತದಿಂದ ದೃಢೀಕರಿಸಿ ಸಲ್ಲಿಸಿದ್ದು, NMMS ಪರೀಕ್ಷೆಯನ್ನು ದಿನಾಂಕ:19.01.2025 ಕ್ಕೆ ಮುಂದೂಡಲಾಗಿರುವುದರಿಂದ ಈಗಾಗಲೇ ಸಲ್ಲಿಸಲಾಗಿರುವ ಪರೀಕ್ಷಾ ಕೇಂದ್ರಗಳ ಮಾಹಿತಿಯಲ್ಲಿ ಯಾವುದೇ ಬದಲಾವಣೆಯಿದ್ದಲ್ಲಿ ದಿನಾಂಕ:26.12.2024 ರೊಳಗೆ ಈ ಕಛೇರಿಗೆ ದೃಢೀಕರಿಸಿ ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸಲು ಸೂಚಿಸಿದೆ.
ನಿಗದಿತ ದಿನಾಂಕದೊಳಗೆ ಯಾವುದೇ ಮಾಹಿತಿಯನ್ನು ಸಲ್ಲಿಸದಿದ್ದಲ್ಲಿ ಈಗಾಗಲೇ ಸಲ್ಲಿಸಿರುವ ಮಾಹಿತಿಯನ್ನು ಅಂತಿಮ ಎಂದು ಪರಿಗಣಿಸಲಾಗುವುದು.

No comments:
Post a Comment