Hedding ; Current Affairs 2024
ವಿಶ್ವ ಆಹಾರ ಸುರಕ್ಷತಾ ದಿವಸ
ಪ್ರತಿವರ್ಷ ಜೂನ್ 7 ನೇ ತಾರೀಕಿನಂದು ವಿಶ್ವ ಆಹಾರ ಸುರಕ್ಷತಾ ದಿವಸವನ್ನು ಜಾಗತಿಕ ಮಟ್ಟದಲ್ಲಿ
ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು 5 ನೇ ರಾಜ್ಯಮಟ್ಟದಆಹಾರ ಸುರಕ್ಷತಾ ಸೂಚ್ಯಂಕವನ್ನು ಬಿಡುಗಡೆ ಮಾಡಿದರು.
ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತದ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಪರಾಮರ್ಶಿಸುವ ವರದಿಯಾಗಿದ್ದು, ಈ ವರದಿಯನ್ನು ಬಿಡುಗಡೆ ಮಾಡಲು ಕೆಲ ಮಾನದಂಡಗಳನ್ನುಅಳವಡಿಸಲಾಗುತ್ತದೆ.
ಅಳವಡಿಸಲಾಗುವ ಮಾನದಂಡಗಳು :
ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ಲಭ್ಯವಿರುವ ಮಾನವ ಸಂಪನ್ಮೂಲದ ಪ್ರಮಾಣ.
ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಸರ್ಕಾರದ ಬಳಿಯಿರುವ ದತ್ತಾಂಶದ ಮಾಹಿತಿ.
ಸುರಕ್ಷಿತ ಆಹಾರವನ್ನು ಕಲ್ಪಿಸಲು, ಆಹಾರ ಉತ್ಪನ್ನಗಳನ್ನು ಪರೀಕ್ಷಿಸಲು ರಾಜ್ಯ ಸರ್ಕಾರಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿಯಿರುವ ಮೂಲಭೂತ ಸವಲತ್ತುಗಳು.
ರಾಜ್ಯ ಮಟ್ಟದಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಗ್ರಾಹಕರ ಸಬಲೀಕರಣಕ್ಕೆ ಕೈಗೊಂಡಿರುವ ಕ್ರಮಗಳು.
ಸರ್ಕಾರದ ವತಿಯಿಂದ ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮಗಳು ಹಾಗೂ ಸಾಮರ್ಥ್ಯ ಅಭಿವೃದ್ಧಿ
ಕಾರ್ಯಕ್ರಮಗಳು.
ಮೇಲಿನ ಮಾನದಂಡಗಳ ಆಧಾರದ ಮೇಲೆ ಆಹಾರ ಸುರಕ್ಷತಾ ಸೂಚ್ಯಂಕವನ್ನು 2018-19 ರಿಂದ ಬಿಡುಗಡೆ ಮಾಡಲಾಗುತ್ತಿದೆ. ಈ ಸೂಚ್ಯಂಕದ ಪ್ರಮುಖ ಉದ್ದೇಶವೇನೆಂದರೆ ರಾಷ್ಟ್ರಮಟ್ಟದಲ್ಲಿ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಸೂಕ್ತ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು, ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಗೆ ಅವಕಾಶವನ್ನು ಕಲ್ಪಿಸುವುದು ಹಾಗೂ ಆಹಾರ ಸುರಕ್ಷತಾ ವಲಯದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಉಪಯುಕ್ತವಾಗುತ್ತದೆ.
ಪ್ರಸ್ತುತ ವರ್ಷ ಬಿಡುಗಡೆಯಾದ ಸೂಚ್ಯಂಕದಲ್ಲಿ ಕೇರಳ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ, ಕ್ರಮವಾಗಿ ಪಂಜಾಬ್ ಮತ್ತು ತಮಿಳುನಾಡು ಎರಡನೇ ಹಾಗೂ ಮೂರನೇ ಸ್ಥಾನವನ್ನು ಅಲಂಕರಿಸಿದೆ.
ಸಣ್ಣರಾಜ್ಯಗಳ ವರ್ಗದಲ್ಲಿ ಗೋವಾ ಮೊದಲನೇ ಸ್ಥಾನವನ್ನು ಪಡೆದುಕೊಂಡರೆ, ಮಣಿಪುರ ಮತ್ತು ಸಿಕ್ಕಿಂ ರಾಜ್ಯಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನವನ್ನು ಪಡೆದುಕೊಂಡಿತು.
ಕೇಂದ್ರಾಡಳಿತ ಪ್ರದೇಶಗಳ ಶ್ರೇಯಾಂಕವನ್ನು ಗಮನಿಸುವುದಾದರೆ, ಜಮ್ಮು ಕಾಶ್ಮೀರ ಮೊದಲನೇ ಸ್ಥಾನದಲ್ಲಿದ್ದರೆ ಕ್ರಮವಾಗಿ ದೆಹಲಿ ಮತ್ತು ಚಂದಿಗಡ ಎರಡನೇ ಮತ್ತು ಮೂರನೇ ಸ್ಥಾನವನ್ನು ಅಲಂಕರಿಸಿದೆ.
ಸೂಚ್ಯಂಕ ಬಿಡುಗಡೆಯಾದ ನಂತರ ತ್ವರಿತ ಆಹಾರ ಪರೀಕ್ಷಾ ಕಿಟ್ ಪೋರ್ಟಲ್ ಅನ್ನು ಅನಾವರಣಗೊಳಿಸಲಾಯಿತು. ಈ ಪೋರ್ಟಲ್ ಮೂಲಕ ಭಾರತದ ಆಹಾರ ಉತ್ಪನ್ನಗಳ ಸುರಕ್ಷತೆಯ ವಿಚಾರದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಕಾಪಾಡಿಕೊಳ್ಳಲು ಈ ಪೋರ್ಟಲ್ ಸಹಕಾರಿಯಾಗಲಿದೆ.

No comments:
Post a Comment