Hedding ; About conducting preparatory examination for SSLC students of 2024-25...
2024-25ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತಾ ಪರೀಕ್ಷೆ ನಡೆಸುವ ಬಗ್ಗೆ
ಉಲ್ಲೇಖ : ಮಾನ್ಯ ನಿರ್ದೇಶಕರು, KSEAB ರವರ ಸಭೆ ದಿನಾಂಕ : 10.12.2024
ಈ ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖದನ್ವಯ ಪ್ರಸ್ತುತ ಸಾಲಿನಲ್ಲಿ ಸರಕಾರಿ/ಅನುದಾನಿತ/ಅನುದಾನರಹಿತ ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬರವಣಿಗೆ ಕೌಶಲ್ಯ ವರ್ಧನೆ ಹಾಗೂ ಪರೀಕ್ಷಾ ಭಯ ನಿವಾರಣೆಗಾಗಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಎರಡು ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದ್ದು,ವೇಳಾಪಟ್ಟಿಯನ್ನು ಈ ಕೆಳಕಂಡಂತೆ ನಿಗದಿಪಡಿಸಿದೆ. ಅನಿವಾರ್ಯ ಕಾರಣಗಳಿಂದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬೇಕಾಗಿ ಬಂದಲ್ಲಿ ಮುಂಚಿತವಾಗಿ ತಿಳಿಸಲಾಗುವುದು.
ಎಸ್.ಎಸ್.ಎಲ್.ಸಿ ಮೊದಲ ಪೂರ್ವಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ-ಜನೆವರಿ 2025
ತಾಲೂಕಾ ಮಟ್ಟದ ಪರೀಕ್ಷೆಗೆ ಈಗಾಗಲೇ ತಾಲೂಕಾ ಪ್ರಶ್ನೆ ಪತ್ರಿಕೆ ಕಾರ್ಯಾಗಾರದಲ್ಲಿ ತಯಾರಿಸಲಾದ 3 ಸೆಟ್ ಪ್ರಶ್ನೆ ಪತ್ರಿಕೆಯಲ್ಲಿ ಒಂದು ಸೆಟ್ ಪ್ರಶ್ನೆ ಪತ್ರಿಕೆ ಬಳಸಿಕೊಳ್ಳುವುದು.ಜಿಲ್ಲಾ ಮಟ್ಟದ ಪರೀಕ್ಷೆಗೆ ಜಿಲ್ಲಾ ಹಂತದಲ್ಲಿ ತಯಾರಿಸಲಾದ ಒಂದು ಸೆಟ್ ಪ್ರಶ್ನೆ ಪತ್ರಿಕೆ ಬಳಸಲಾಗುತ್ತದೆ.
ತಾಲೂಕು ಮತ್ತು ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ತಯಾರಿಸಲಾದ ಉಳಿದ ಎರಡು ಸೆಟ್ ಪ್ರಶ್ನೆ ಪತ್ರಿಕೆಗಳನ್ನು ಬಳಸಿಕೊಂಡು ಶಾಲಾ ಹಂತದಲ್ಲಿ 'ತೆರೆದ ಪುಸ್ತಕ' ಪರೀಕ್ಷೆ ನಡೆಸುವುದು.
ಪ್ರತಿ ಸರಣಿ ಪರೀಕ್ಷೆ ಮುಗಿದ ನಂತರ ಕಡ್ಡಾಯವಾಗಿ ಫಲಿತಾಂಶ ವೀಶ್ಲೇಷಣೆ ಮಾಡಿ ಮೇಲಧಿಕಾರಿಗಳಿಗೆ ನಿಗದಿತ ದಿನಾಂಕದೊಳಗೆ ಸಲ್ಲಿಸುವುದು.
> ಪ್ರತಿ ವಿಷಯದ ಪರೀಕ್ಷೆ ಮುಗಿದ ತಕ್ಷಣ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿ ಕಡ್ಡಾಯವಾಗಿ ಪಾಲಕರ ಸಭೆ ನಡೆಸಿ ಫಲಿತಾಂಶ ವೀಶ್ಲೇಷಣೆ ಮಾಡುವುದು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಿದಲ್ಲಿ ಮಂಡಳಿಯ ವೇಳಪಟ್ಟಿಯ ಪ್ರಕಾರ ನಡೆಸುವುದು.
ಮೊದಲನೇ ಪೂ.ಸಿ. ಪರೀಕ್ಷೆ ಮುಗಿದ ತಕ್ಷಣ ತಾಲೂಕಾ ಟಾಪ್ 10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಜಿಲ್ಲಾ ಮಟ್ಟದ ಪ್ರೇರಣಾ ಶಿಬಿರಕ್ಕೆ ಹೆಸರು ಕಳಿಸುವುದು.
> ಸಂಭವನೀಯ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವಾರು ಅಥವಾ ತಾಲೂಕಾ ಹಂತದಲ್ಲಿ ಉತ್ತೀರ್ಣತಾ ಶಿಬಿರಗಳನ್ನು ಆಯೋಜಿಸುವುದು.
ಎಲ್ಲರಿಗೂ ಶೇರ್ ಮಾಡಿ ತಪ್ಪದೆ 🙏🙏

No comments:
Post a Comment