Monday, November 11, 2024

Treatment at an unaccredited private hospital: Govt employees eligible for reimbursement of medical bills- Karnataka High Court landmark ruling

  Wisdom News       Monday, November 11, 2024
Hedding ; Treatment at an unaccredited private hospital: Govt employees eligible for reimbursement of medical bills- Karnataka High Court landmark ruling


ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963 ರನ್ವಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಯ ಮರುಪಾವತಿ ವೆಚ್ಚವನ್ನು ಸಕ್ಷಮ ಮಂಜೂರಾತಿ ಪ್ರಾಧಿಕಾರಿಗಳು ಸಿಜಿಹೆಚ್‌ಎಸ್ ದರಪಟ್ಟಿಯನುಸಾರ ಮಂಜೂರು ಮಾಡಲು ಅಧಿಕಾರ ಹೊಂದಿರುತ್ತಾರೆ.

ಆದರೆ, ಸರ್ಕಾರಿ ಆದೇಶ ಸಂಖ್ಯೆ:ಸಿಆಸುಇ 31 ఎనో ఎంఆరో 2014 ದಿನಾಂಕ:05.11.2014ರಲ್ಲಿ ಕೆಲವು ತುರ್ತು ಸಂದರ್ಭಗಳಲ್ಲಿ ಸರ್ಕಾರಿ ನೌಕರರು ಸರ್ಕಾರದಿಂದ ಮಾನ್ಯತೆ ಹೊಂದಿರದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಯ ಮರುಪಾವತಿ ಪ್ರಕರಣಗಳನ್ನು ಅಪವಾದಾತ್ಮಕ/ವಿಶೇಷ ಪ್ರಕರಣಗಳೆಂದು ಪರಿಗಣಿಸಿ, ಸಿ.ಜಿ.ಹೆಚ್.ಎಸ್ ದರಗಳನ್ನು ಅಥವಾ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರು ನಿಗದಿಪಡಿಸುವ ಅರ್ಹತಾ ಮೊತ್ತವನ್ನು ನಿಯಮ ಸಡಿಲಿಸಿ ಮಂಜೂರು ಮಾಡಲು ಇಲಾಖಾ ಕಾರ್ಯದರ್ಶಿಗಳಿಗೆ ಮಾತ್ರ ಅಧಿಕಾರ ಪ್ರತ್ಯಾಯೋಜನೆ ಮಾಡಲಾಗಿದೆ.

ಸರ್ಕಾರಿ ನೌಕರರು ಸರ್ಕಾರದಿಂದ ಮಾನ್ಯತೆ ಹೊಂದಿರದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ವೆಚ್ಚದ ಕ್ಷೇಮುಗಳ ಅರ್ಹತಾದಾಯಕ ಮೊತ್ತದ ಬಗ್ಗೆ ಹಲವಾರು ಇಲಾಖೆಗಳು ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರಿಗೆ ಪ್ರಸ್ತಾವನೆಗಳನ್ನು ಸಲ್ಲಿಸುತ್ತಿದ್ದು, ಅವರಿಂದ ಇಂತಹ ಪ್ರಸ್ತಾವನೆಗಳನ್ನು ಪರಿಶೀಲಿಸಿ ಅರ್ಹತಾದಾಯಕ ಮೊತ್ತವನ್ನು ಸಂಬಂಧಪಟ್ಟ ಇಲಾಖೆಗಳಿಗೆ ಸಕಾಲದಲ್ಲಿ ತಿಳಿಸಲು ಸಾಧ್ಯವಾಗದೇ, ವೈದ್ಯಕೀಯ ವೆಚ್ಚಗಳನ್ನು ಮರುಪಾವತಿಸುವಲ್ಲಿ ಅನಗತ್ಯ ವಿಳಂಬ ಉಂಟಾಗುತ್ತಿರುವುದನ್ನು ಸರ್ಕಾರವು ಗಮನಿಸಿದೆ.

ಈ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರ ಇಂತಹ ವೈದ್ಯಕೀಯ ವೆಚ್ಚದ ಭೀಮುಗಳನ್ನು ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರ ಬದಲಾಗಿ ಸುವರ್ಣ ಸುರಕ್ಷಾ ಸಲ್ಲಿಸಿ ಸದರಿ ಸಂಸ್ಥೆಯಿಂದ ಮರುಪಾವತಿಸಬಹುದಾದ ಅರ್ಹತಾದಾಯಕ ಮೊತ್ತದ ಮಾಹಿತಿಯನ್ನು ಪಡೆಯುವಂತೆ ಎಲ್ಲಾ ಇಲಾಖೆಗಳಿಗೆ ಸೂಚಿಸಲು ಸರ್ಕಾರವು ನಿರ್ಧರಿಸಿ ಈ ಕೆಳಕಂಡಂತೆ ಆದೇಶಿಸಿದೆ.


ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಸರ್ಕಾರದಿಂದ ಮಾನ್ಯತೆ ಹೊಂದಿರದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಯ ಮರುಪಾವತಿಯ ಅರ್ಹತಾದಾಯಕ ಮೊತ್ತದ ಬಗ್ಗೆ ಪ್ರಸ್ತಾವನೆಗಳನ್ನು ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, 4ನೇ ಮಹಡಿ, ಕೆ.ಹೆಚ್.ರಸ್ತೆ, ಶಾಂತಿನಗರ, ಬೆಂಗಳೂರು-560027 ಇವರಿಗೆ ಸಲ್ಲಿಸುವಂತೆ ಎಲ್ಲಾ ಇಲಾಖೆಗಳಿಗೆ ಸೂಚಿಸಲಾಗಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇಂತಹ ಪ್ರತಿಯೊಂದು ಕ್ಷೇಮುಗಳನ್ನು ಸಿ.ಜಿ.ಹೆಎಸ್ ದರಪಟ್ಟಿಯಂತೆ ಪರಿಶೀಲಿಸಿ ಮರುಪಾವತಿಸಬಹುದಾದ ಅರ್ಹತಾದಾಯಕ ಮೊತ್ತದ ಮಾಹಿತಿಯನ್ನು ಸಕಾಲದಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸುವಂತೆ ಆದೇಶಿಸಿದೆ.

logoblog

Thanks for reading Treatment at an unaccredited private hospital: Govt employees eligible for reimbursement of medical bills- Karnataka High Court landmark ruling

Previous
« Prev Post

No comments:

Post a Comment