Wednesday, November 13, 2024

SSLC Mark Sheet Correction Last Date Extension

  Wisdom News       Wednesday, November 13, 2024
Hedding ; SSLC Mark Sheet Correction Last Date Extension



ವಿಷಯಕ್ಕೆ ಸಂಬಂಧಿಸಿದಂತೆ 2024 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-01, 02 ಮತ್ತು 03 ರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಮುದ್ರಿಸಿ ಈಗಾಗಲೇ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸಂಬಂಧಿಸಿದ ಶಾಲೆಗಳಿಗೆ ವಿತರಿಸಲಾಗಿರುತ್ತದೆ.

ಸದರಿ ವಿತರಿಸಲಾದ ಅಂಕಪಟ್ಟಿಗಳಲ್ಲಿ ವಿದ್ಯಾರ್ಥಿಯ ಹೆಸರು, ಜನ್ಮ ದಿನಾಂಕ, ತಂದೆ-ತಾಯಿ ಹೆಸರು ಮುಂತಾದ ಮಾಹಿತಿಗಳು ತಪ್ಪಾಗಿ ಮುದ್ರಣವಾಗಿದಲ್ಲಿ ಮುಖ್ಯೋಪಾಧ್ಯಾಯರೇ ನೇರ ಹೊಣೆಗಾರರಾಗಿರುತ್ತಾರೆ. ಅಂತಹ ಅಂಕಪಟ್ಟಿಗಳನ್ನು ಮಂಡಲಿಯಲ್ಲಿ ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಿ ಮತ್ತೊಂದು ಅಂಕಪಟ್ಟಿಯನ್ನು ಪಡೆಯಬೇಕು ಹಾಗೂ ಅಂಕಪಟ್ಟಿ ಹರಿದಿದ್ದಲ್ಲಿ ಮುದ್ರಣದಲ್ಲಿ ದೋಷವಿದ್ದಲ್ಲಿ ಭಾವಚಿತ್ರ ಸರಿಯಾಗಿ ಮುದ್ರಣವಾಗದಿರುವುದು ಕಂಡು ಬಂದಲ್ಲಿ ತಡ ಮಾಡದೆ ಅಂಕಪಟ್ಟಿ ಸ್ವೀಕರಿಸಿದ 05 ದಿನಗಳೊಳಗೆ ಹೊಸ ಅಂಕಪಟ್ಟಿಯನ್ನು ಪಡೆಯಲು ಪ್ರಸ್ತಾವನೆಯೊಂದಿಗೆ ಮೂಲ ಅಂಕಪಟ್ಟಿಯನ್ನು ಲಗತ್ತಿಸಿ ಮಂಡಲಿಯ ಪರಿಶೀಲನಾ ಶಾಖೆಗೆ ಮುಖ್ಯೋಪಾಧ್ಯಾಯರು ಲಿಖಿತವಾಗಿ ಮನವಿಯನ್ನು ಸಲ್ಲಿಸತಕ್ಕದು. ಶುಲ್ಕರಹಿತವಾಗಿ ಮಂಡಲಿ ವತಿಯಿಂದಲೇ ಹೊಸ ಅಂಕಪಟ್ಟಿಯನ್ನು ಮುದ್ರಿಸಿ ಶಾಲೆಗೆ ರವಾನಿಸಲಾಗುವುದು ಎಂದು ತಿಳಿಸಿ ಉಲ್ಲೇಖಿತ ಜ್ಞಾಪನದಲ್ಲಿ ತಿಳಿಸಲಾಗಿತ್ತು.

ಮುಂದುವರದು ಈಗಾಗಲೇ ಮೇಲೆ ವಿವರಿಸಿರುವಂತೆ ಅಂಕಪಟ್ಟಿ ತಿದ್ದುಪಡಿ ಹಾಗೂ ಮರುಮುದ್ರಣಕ್ಕೆ ನಿಗದಿಪಡಿಸಿದ ಅವಧಿ ಮುಗಿದಿದ್ದರೂ ಕೂಡ ಅಂಕಪಟ್ಟಿ ತಿದ್ದುಪಡಿ ಹಾಗೂ ಮರು ಮುದ್ರಣಕ್ಕೆ ಸಂಬಂಧಿಸಿದಂತೆ ಮಂಡಲಿಗೆ ಅರ್ಜಿಗಳು ಸ್ವೀಕೃತಿಯಾಗುತ್ತಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಅಂಕಪಟ್ಟಿಗಳ ದೋಷಗಳನ್ನು ಸರಿಪಡಿಸಲು ಮುಖ್ಯೋಪಾಧ್ಯಾಯರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶೀಘ್ರವೇ ಕ್ರಮಗಳನ್ನು ಕೈಗೊಳ್ಳಲು ತಿಳಿಸುತ್ತಾ, ಸದರಿ 2024 ನೇ ಸಾಲಿನ ಎಸ್.ಎಸ್.ಎಲ್.ಸಿ ಅಂಕಪಟ್ಟಿಗಳ ತಿದ್ದುಪಡಿಗೆ ಸಮಯವನ್ನು ವಿಸ್ತರಿಸಿ ದಿನಾಂಕ:20.11.2024 ವನ್ನು ಅಂತಿಮ ದಿನಾಂಕವನ್ನಾಗಿ ನಿಗದಿಪಡಿಸಲಾಗಿದೆ. ಸದರಿ ದಿನಾಂಕದ ನಂತರ ಸ್ವೀಕೃತಿಯಾಗುವ ಅರ್ಜಿಗಳನ್ನು ಮಂಡಲಿಯಿಂದ ಹೊಸ ಅಂಕಪಟ್ಟಿ ಮರು ಮುದ್ರಣಕ್ಕೆ ಪರಿಗಣಿಸುವುದಿಲ್ಲ ಎಂದು ತಿಳಿಸುತ್ತಾ, ಅಂತಿಮ ದಿನಾಂಕದ ನಂತರ ಅಂಕಪಟ್ಟಿಗಳಲ್ಲಿ ತಿದ್ದುಪಡಿ ಅಗತ್ಯವಿದ್ದಲ್ಲಿ ನಿಗದಿತ ಶುಲ್ಕ ಪಾವತಿಸಿ ತಿದ್ದುಪಡಿ ಅಂಕಪಟ್ಟಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದೆ.




logoblog

Thanks for reading SSLC Mark Sheet Correction Last Date Extension

Previous
« Prev Post

No comments:

Post a Comment