Wednesday, November 6, 2024

Second PUC Hindi Subject Preparatory Exam Various District Model Question Papers:2024

  Wisdom News       Wednesday, November 6, 2024
Hedding ; Second PUC Hindi Subject Preparatory Exam Various District Model Question Papers:2024



ದ್ವಿತೀಯ ಪಿಯುಸಿ ಬೋರ್ಡ್‌ ಎಕ್ಸಾಮ್‌ನಲ್ಲಿ ಶೇಕಡ.90 ರಿಂದ 95 ಅಂಕಗಳನ್ನು ಗಳಿಸುವುದು ಹೇಗೆ, ಈ ಗುರಿ ನನಸು ಮಾಡಲು ಹೇಗೆ ಓದಬೇಕು ಎಂಬ ಪ್ರಶ್ನೆ ಇರುವವರು ಇಂದಿನ ಲೇಖನದಲ್ಲಿನ ಸಲಹೆಗಳನ್ನು ಓದಿಕೊಳ್ಳಿ.

12ನೇ ತರಗತಿ ಬೋರ್ಡ್‌ ಎಕ್ಸಾಮ್‌ / ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮುಂದಿನ ಮಾರ್ಚ್‌ ತಿಂಗಳಲ್ಲಿ ಬರೆಯಲು ಸಿದ್ಧತೆ ನಡೆಸುತ್ತಿದ್ದೀರಾ..? ನಿಮಗೆ ಶೇಕಡ.90 ಕ್ಕೂ ಹೆಚ್ಚು ಅಂಕ ಗಳಿಸುವ ಗುರಿ ಇದೆಯೇ..? ಹಾಗಿದ್ರೆ ಈ ಲೇಖನ ನಿಮಗಾಗಿ. ಪರೀಕ್ಷೆ ಸಿದ್ಧತೆ ನಡೆಸುವ ಮೊದಲ ಉತ್ತಮ ಹಂತ ಯಾವುದು, ಹೇಗೆ ಓದಬೇಕು, ಪುನರಾವರ್ತನೆ ಹೇಗಿರಬೇಕು, ಯಾವೆಲ್ಲ ವಿಷಯಗಳ ಮೇಲೆ ಓದುವ ಸಮಯದಲ್ಲಿ ಗಮನಹರಿಸಬೇಕು, ಆರೋಗ್ಯ / ಏಕಾಗ್ರತೆ ಕಾಪಾಡಿಕೊಳ್ಳುವುದು ಹೇಗೆ, ಹೀಗೆ ಹಲವು ಅಧ್ಯಯನ ಸಲಹೆಗಳನ್ನು ತಪ್ಪದೇ ಕೆಳಗಿನಂತೆ ಫಾಲೋ ಮಾಡಿರಿ.


ಇಂದೇ ಪರೀಕ್ಷೆಗೆ ಎಷ್ಟು ದಿನ ಇದೆ ಎಂದು ಲೆಕ್ಕ ಹಾಕಿಕೊಳ್ಳಿ. ನೀವು ಓದಬೇಕಾದ ಪುಸ್ತಕಗಳು, ಟಾಪಿಕ್‌ಗಳನ್ನು ಕವರ್ ಮಾಡಲು ತಕ್ಕನಾದ ಟೈಮ್‌ ಟೇಬಲ್‌ ರಚಿಸಿಕೊಳ್ಳಿ. ಪ್ರತಿ ವಿಷಯವನ್ನು ಓದಲು ಸಮಯ ನಿಗದಿಮಾಡಿಕೊಳ್ಳಿ. ಓದುವುದರ ನಡುವೆ ಬ್ರೇಕ್‌, ವಿಶ್ರಾಂತಿಗೆ ಸಮಯ, ಇತರೆ ನಿಮ್ಮ ದೈನಂದಿನ ಚಟುವಟಿಕೆಗೆ ಸಮಯ ಎಷ್ಟು ಬೇಕು ಎಂದು ಸಮಯ ಲೆಕ್ಕಾಚಾರ ಹಾಕಿಕೊಂಡು ಓದಲು ಉತ್ತಮ ವೇಳಾಪಟ್ಟಿ ಹಾಕಿಕೊಳ್ಳಿ.


ಮೊದಲಿಗೆ ನಿಮಗೆ ಹೆಚ್ಚು ಕಷ್ಟವಾಗುವ ವಿಷಯಗಳ ಮೇಲೆ ಆಧ್ಯತೆ ನೀಡಿ, ಅವುಗಳನ್ನು ಹೆಚ್ಚು ಓದಿಕೊಳ್ಳಿ. ನಂತರ ಇತರೆ ಸರಳ ವಿಷಯಗಳ ಮೇಲೆ ಕಣ್ಣಾಡಿಸಿಕೊಳ್ಳಿ. ಅಲ್ಲದೇ ಹೆಚ್ಚು ಪ್ರಶ್ನೆಗಳನ್ನು ಕೇಳುವ ಟಾಪಿಕ್, ಹೆಚ್ಚು ಅಂಕಗಳಿಗೆ ಕೇಳುವ ಸಂಭಾವ್ಯ ಟಾಪಿಕ್ ಓದಲು ಆಧ್ಯತೆ ನೀಡಿರಿ.

ಏನಪ್ಪಾ ಆಕ್ಟಿವ್ ರೀಡಿಂಗ್ ಎಂದರೆ? ಈ ಪ್ರಶ್ನೆ ಹಲವರಿಗೆ ಇದೆ. ಓದುವುದು ಎಂದರೆ ಸುಮ್ಮನೆ ಬುಕ್ ಹಿಡಿದು ಕಣ್ಣಾಡಿಸಿಕೊಂಡು ಹೋಗುವುದಲ್ಲ. ಓದಿದ ಪ್ರತಿ ವಾಕ್ಯ ಅರ್ಥ ಮಾಡಿಕೊಂಡು, ಅಲ್ಲಿನ ಪದಗಳು, ವಿಷಯಗಳ ಮೇಲೆ ಏಕಾಗ್ರತೆ ವಹಿಸಿ, ಅಗತ್ಯವಿದ್ದಲ್ಲಿ ಅಂಡರ್‌ಲೈನ್‌ ಮಾಡುವುದು, ನೋಟ್ಸ್‌ ಮಾಡಿಕೊಳ್ಳುವುದು, ಕೀ ಅಂಶಗಳ ಸಾರಾಂಶಗಳನ್ನು ಬರೆದುಕೊಳ್ಳುವುದು. ಆಗ ಮಾತ್ರ ಪ್ರತಿ ಓದಿನ ಸಮಯ ಆಕ್ಟಿವ್ ರೀಡಿಂಗ್ ಆಗುತ್ತದೆ.


ಸಮಸ್ಯೆಗಳನ್ನು ಅಭ್ಯಾಸ ಮಾಡಿರಿ

ಗಣಿತ, ರಸಾಯನಶಾಸ್ತ್ರ, ಭೌತಶಾಸ್ತ್ರ ವಿಷಯಗಳಲ್ಲಿ ಸಾಮಾನ್ಯವಾಗಿ ಲೆಕ್ಕಾಚಾರಗಳು ಇರುತ್ತವೆ. ಇವುಗಳನ್ನು ತಪ್ಪದೇ ಅಭ್ಯಾಸ ಮಾಡಿರಿ. ಸಮಸ್ಯೆಯನ್ನು ಬಹುಬೇಗ ಬಗೆಹರಿಸುವ ವಿಧಾನ ಕಂಡುಕೊಳ್ಳಿ. ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ.

ನೀವು ಓದಿದ್ದು ದೀರ್ಘಕಾಲ ನೆನಪಿನಲ್ಲಿ ಉಳಿಯಬೇಕು ಎಂದರೆ ಜ್ಞಾಪನಶಾಸ್ತ್ರ ಸಾಧನಗಳನ್ನು ಬಳಸಿಕೊಂಡು ಓದುವುದು ಸೂಕ್ತ. ಅವುಗಳೆಂದರೆ ಚಾರ್ಟ್‌, ಚಿತ್ರದ ಸಹಿತ ವಿವರಗಳು, ಹೀಗೆ ಹಲವು.

ನೀವು ಯಾವ ವಿಷಯವನ್ನು ಕಡಿಮೆ ತಿಳಿದುಕೊಂಡಿದ್ದೀರಿ, ಎಷ್ಟು ಓದಿದ್ದೀರಿ, ಎಷ್ಟು ನೆನಪಿನಲ್ಲಿ ಇದೆ ಎಂದು ತಿಳಿಯಬೇಕೆಂದರೆ ನಿಮಗೆ ನೀವೆ ಕೆಲವು ಸ್ವಯಂ ಪ್ರಶ್ನೆಗಳನ್ನು ಕೇಳಿಕೊಳ್ಳಿ. ಉತ್ತರಿಸಲು ಅಥವಾ ಬರೆಯಲು ಆರಂಭಿಸಿ. ಆಗ ನಿಮ್ಮ ವೀಕ್ ಸೆಕ್ಷನ್‌ಗಳ ಮೇಲೆ ಗಮನಹರಿಸಲು ಸಹಾಯವಾಗುತ್ತದೆ.


ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕಲಿಕೆಗೆ ಉತ್ತಮ ನಿದ್ರೆ, ಉತ್ತಮ ದೈಹಿಕ ವ್ಯಾಯಾಮ ಎಲ್ಲವೂ ಮುಖ್ಯ. ಆದ್ದರಿಂದ ಪ್ರತಿ ದಿನ 7-8 ಗಂಟೆ ನಿದ್ರೆ ತಪ್ಪದೇ ಮಾಡಿಕೊಳ್ಳಿ. ಇದರಿಂದ ನಿಮ್ಮ ಫೋಕಸ್ ಹೆಚ್ಚಿಸಿಕೊಳ್ಳಬಹುದು. ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ, ಏಕಾಗ್ರತೆ ಯಿಂದ ಓದಲು ಸಾಕಷ್ಟು ನಿದ್ರೆ ಅತ್ಯಾವಶ್ಯಕವಾಗಿದೆ.


ನೀವು ಓದುವ ಮೆಟೀರಿಯಲ್‌ಗಳು, ನೋಟ್ಸ್‌ಗಳು ಆರ್ಡರ್‌ ಪ್ರಕಾರವಾಗಿರಲಿ. ಅಥವಾ ನಿಮ್ಮ ಟೈಮ್‌ ಟೇಬಲ್‌ಗೆ ತಕ್ಕಂತೆ ಓದಲು ಸುಲಭವಾಗಿ ಸಿಗುವಂತೆ ಜೋಡಿಸಿಕೊಳ್ಳುವುದೇ ವ್ಯವಸ್ಥಿತ ಮಾರ್ಗವಾಗಿದೆ. ಈ ಮೂಲಕ ಓದಲು ನಿಮ್ಮ ಬುಕ್‌ಗಳು ಬೇಗ ಕೈಗೆ ಸಿಗುತ್ತವೆ.

ಯಾವುದೇ ಸಬ್ಜೆಕ್ಟ್‌ / ಸೆಕ್ಷನ್‌ನಲ್ಲಿ ನೀವು ಓದಿದ್ದು ಅರ್ಥವಾಗುತ್ತಿಲ್ಲ ಎಂದಾದಲ್ಲಿ ತಪ್ಪದೇ, ಮುಜುಗರ ಪಡದೇ ಶಿಕ್ಷಕರಲ್ಲಿ ಅಥವಾ ಸಹಪಾಠಿಗಳಲ್ಲಿ ಕೇಳಿ ತಿಳಿಯಿರಿ. ಇದರಿಂದ ನೀವು ಹಿಂದೆ ಉಳಿಯುವುದಿಲ್ಲ.


ದ್ವಿತೀಯ ಪಿಯುಸಿ ಪರೀಕ್ಷೆ ನನಗೇಕೆ ಹೆಚ್ಚು ಮುಖ್ಯ, ಹೇಗೆ ಪಾಸ್‌ ಮಾಡಬೇಕು, ಮುಂದೆ ಓದುವ ಕೋರ್ಸ್‌ಗೆ ಇದರ ಅಂಕಗಳು ಎಷ್ಟು ಮುಖ್ಯ ಎಂದು ತಿಳಿದು, ಸ್ವಯಂ ಜಾಗೃತಿಯಿಂದ ಉತ್ತಮ ಅಧ್ಯಯನ ನಡೆಸಲು ಸದಾ ಪ್ರೇರಿತರಾಗಿರಿ. ಈ ಮೂಲಕ ನಿಮ್ಮ ಅಧ್ಯಯನದ ಗುರಿ ಸಾಧಿಸಿರಿ.


ದಿನನಿತ್ಯ ಟ್ಯೂಷನ್‌ಗೆ ಹೋಗುವುದು.
ದಿನನಿತ್ಯ ಕನಿಷ್ಠ 3 ರಿಂದ 4 ಗಂಟೆ ಓದುವುದು.
ಪ್ರಾಯೋಗಿಕ ಪರೀಕ್ಷೆ, ಪ್ರಾಯೋಗಿಕ ತರಗತಿಗಳಿಗೆ ತಪ್ಪದೇ ಹಾಜರಾಗುವುದು.
ಕೊನೆ 3-5 ತಿಂಗಳಲ್ಲಿ ಪ್ರಮುಖ ಟಾಪಿಕ್‌ಗಳನ್ನು ಓದುವುದು.
ಪಠ್ಯಕ್ರಮಕ್ಕೆ ತಕ್ಕಂತೆ ಓದಿ ಮುಗಿಸಿದ ನಂತರ 4-5 ವರ್ಷಗಳ ಬೋರ್ಡ್‌ ಎಕ್ಸಾಮ್‌ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು.
ಸಂಶಯಗಳಿರುವ ವಿಷಯಗಳ ಕುರಿತು ಸಹಪಾಠಿಗಳು, ಬೋಧಕರಲ್ಲಿ ಕೇಳಿ ತಿಳಿಯುವುದು.
ಈ ಹಂತಗಳನ್ನು ಫಾಲೋ ಮಾಡಿ ಓದಿದರೆ ಖಂಡಿತ ಶೇಕಡ.90 ಕ್ಕಿಂತ ಹೆಚ್ಚು ಅಂಕ ಗಳಿಸಬಹುದು.


logoblog

Thanks for reading Second PUC Hindi Subject Preparatory Exam Various District Model Question Papers:2024

Previous
« Prev Post

No comments:

Post a Comment