Hedding ; Regarding the second round of counseling on merit basis for specified CRP/ BRP/ ECO posts lying vacant in the state...
ರಾಜ್ಯದಲ್ಲಿ ಖಾಲಿ ಉಳಿದಿರುವ ನಿರ್ದಿಷ್ಟಪಡಿಸಿದ ECO/BRP/CPR/BRC/ADP 1/ ಹುದ್ದೆಗಳಿಗೆ ಮೆರಿಟ್ ಆಧಾರದ ಮೇಲೆ ಎರಡನೇ ಸುತ್ತಿನ ಕೌನ್ಸಿಲಿಂಗ್ ನಡೆಸುವ ಬಗ್ಗೆ.
ಉಲ್ಲೇಖ:-
1. ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಸಚಿವರ ಟಿಪ್ಪಣಿ ದಿನಾಂಕ: 08.10.2024.
2. ಶ್ರೀ ಎಂ.ವೈ. ಪಾಟೀಲ, ಮಾನ್ಯ ಶಾಸಕರು, ಅಫಜಲಪೂರ ವಿಧಾನ ಸಭಾ ಮತಕ್ಷೇತ್ರ ಕಲಬುರಗಿ ಜಿಲ್ಲೆ ಇವರ ವತ್ರ : 03.09.2024.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ (1)ರ ಟಿಪ್ಪಣಿ ಹಾಗೂ ಉಲ್ಲೇಖಿತ (2)ರ ಪತ್ರದಲ್ಲಿ 2023 24ನೇ ಸಾಲಿನ ರಾಜ್ಯದ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರುಗಳಿಗೆ ತತ್ಸಮಾನ ವೃಂದದ ನಿರ್ದಿಷ್ಟ ಪಡಿಸಿದ ಹುದ್ದೆಗಳಿಗೆ ದಿನಾಂಕ:25.06.2024 ರಂದು ಮೊದಲನೇ ಸುತ್ತಿನ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸಲಾಗಿದೆ. ತದನಂತರವೂ ರಾಜ್ಯಾದ್ಯಂತ ಸಾಕಮ್ಮ ಹುದ್ದೆಗಳು ಖಾಲಿ ಉಳಿದಿವೆ, ಖಾಲಿ ಉಳಿದಿದ್ದ ಹುದ್ದೆಗಳಿಗೆ ಮೆರಿಟ್ ಆಧಾರದಲ್ಲಿ ಎರಡನೇ ಕೌನ್ಸಲಿಂಗ್ ನಡೆಸುವಂತೆ ತಿಳಿಸಲಾಗಿರುತ್ತದೆ (ಪ್ರತಿಗಳನ್ನು ಲಗತ್ತಿಸಿದೆ).
ಆದುದರಿಂದ ಮೇಲ್ಕಂಡ ವಿಷಯದ ಬಗ್ಗೆ, ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ತಮಗೆ ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನ.

No comments:
Post a Comment