Hedding ; Regarding issue of Life Membership Identity Cards online
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಕಛೇರಿ ವತಿಯಿಂದ ಒದಗಿಸಲಾಗುತ್ತಿರುವ ಎಲ್ಲ ಸೌಲಭ್ಯಗಳನ್ನು Online ಸೇವೆಗೆ ಒಳಪಡಿಸಲಾಗುತ್ತಿದ್ದು, ಪ್ರಥಮ ಹಂತವಾಗಿ ಆಜೀವ ಸದಸ್ಯತ್ವ Online ನೋಂದಣಿ ಕಾರ್ಯವನ್ನು ದಿನಾಂಕ: 13.10.2022ರಿಂದ ಲೋಕಾರ್ಪಣೆಗೊಳಿಸಲಾಗಿದೆ. ಇನ್ನು ಮುಂದೆ ಶಿಕ್ಷಕರ ಕಲ್ಯಾಣ ನಿಧಿ ಕಛೇರಿಯಲ್ಲಿ ಆಜೀವ ಸದಸ್ಯತ್ವ ನೋಂದಣಿ ಪಡೆಯಲು ಇಚ್ಛಿಸುವ ಸರ್ಕಾರಿ/ಅನುದಾನಿತ ಶಿಕ್ಷಕರು/ಉಪನ್ಯಾಸಕರು ಆನ್‌ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ ಈಗಾಗಲೇ ನಿಧಿ ಕಛೇರಿಯಿಂದ ಆಜೀವ ಸದಸ್ಯತ್ವ ನೋಂದಣಿ ಸಂಖ್ಯೆ ಪಡೆದು ಭೌತಿಕ ಕಾರ್ಡ ಹೊಂದಿರುವ ಶಿಕ್ಷಕರು/ಉಪನ್ಯಾಸಕರೂ ಸಹ ಕಡ್ಡಾಯವಾಗಿ ತಮ್ಮ ವಿವರಗಳನ್ನು ಸಂಬಂಧಿಸಿದ Online Portalನಲ್ಲಿ ಗಣಕೀಕರಿಸಿ ಹೊಸದಾಗಿ ಆಜೀವ ಸದಸ್ಯತ್ವ ಸಂಖ್ಯೆಯನ್ನು ಪಡೆಯುವಂತೆ ಈ ಮೂಲಕ ಸೂಚಿಸಿದೆ.
ಆಜೀವ ಸದಸ್ಯತ್ವ ನೋಂದಣಿಗಾಗಿ ಬರುವ ಯಾವುದೇ ಭೌತಿಕ ಅರ್ಜಿಗಳನ್ನು ಈ ಕಛೇರಿಯಲ್ಲಿ ಪರಿಗಣಿಸಲಾಗುವುದಿಲ್ಲ. ಶಿಕ್ಷಕರ ಕಲ್ಯಾಣ ನಿಧಿಯ ಜಾಲತಾಣ kstbfonline.karnataka.gov.in URL www.schooleducation.kar.nic.in TWF SWF Online Services ಲಿಂಕ್ ನಮೂಲಕ ಆಜೀವ ಸದಸ್ಯತ್ವದ ಆನ್‌ಲೈನ್ ನೋಂದಣಿ ಪಡೆಯಬಹುದಾಗಿದೆ.
ಈ ಸಂಬಂಧ ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಎಲ್ಲಾ ಸರ್ಕಾರಿ/ಅನುದಾನಿತ ಶಾಲಾ ಶಿಕ್ಷಕರಿಗೆ, ಈಗಾಗಲೇ ನಿಧಿಯ ಸದಸ್ಯತ್ವ ಪಡೆದು ಆಜೀವ ಸದಸ್ಯತ್ವ ಕಾರ್ಡ್ ಪಡೆದಿದ್ದಲ್ಲಿ ಯಾವುದೇ ಶುಲ್ಕವಿಲ್ಲದೆ Onlineನಲ್ಲಿ ನೋಂದಣಿ ಮಾಡಿಕೊಂಡು ಹೊಸ ನೋಂದಣಿ ಸಂಖ್ಯೆಯೊಂದಿಗೆ ಕಾರ್ಡ್ ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ. ಹಾಗೂ ಇದುವರೆವಿಗೂ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಕಛೇರಿಯಲ್ಲಿ ಆಜೀವ ಸದಸ್ಯತ್ವ ಪಡೆಯದಿರುವ ಶಿಕ್ಷಕರಿಗೆ ಕಡ್ಡಾಯವಾಗಿ Online ಮೂಲಕ ನಿಧಿಯಲ್ಲಿ ಸದಸ್ಯತ್ವ ಪಡೆಯುವಂತೆ ಸೂಚಿಸುವುದು. ಆಜೀವ ಸದಸ್ಯತ್ವ ಶುಲ್ಕ ರೂ. 3000/-ಗಳನ್ನು ಆನ್‌ಲೈನ್‌ನಲ್ಲಿ ವೆಬ್‌ಸೈಟ್‌ಗೆ ಲಿಂಕ್ ಮಾಡಿರುವ ಶಿಕ್ಷಕರ ಕಲ್ಯಾಣ ನಿಧಿ ಕಛೇರಿಯ ಖಾತೆಗೆ ಪಾವತಿಸಬೇಕಾಗಿರುತ್ತದೆ. ಹಾಗೂ ನಿಮ್ಮ ತಾಲ್ಲೂಕಿನಲ್ಲಿರುವ ಎಲ್ಲಾ ಸರ್ಕಾರಿ/ಅನುದಾನಿತ ಶಾಲಾ ಶಿಕ್ಷಕರ ಆಜೀವ ಸದಸ್ಯತ್ವ Online ನೋಂದಣಿ ಕಾರ್ಯದ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದೆ.
ಈಗಾಗಲೇ ನಿಧಿಯ ಸದಸ್ಯತ್ವ ಪಡೆದು ಆಜೀವ ಸದಸ್ಯತ್ವ ಕಾರ್ಡ್ ಹೊಂದಿರುವ ಶಿಕ್ಷಕರು ಮತ್ತು ಆಜೀವ ಸದಸ್ಯತ್ವ ಶುಲ್ಕವನ್ನು ಚಲನ್ ಮೂಲಕ ಪಾವತಿಸಿ, ನಿಧಿ ಕಛೇರಿಯಿಂದ ಕಾರ್ಡ್ ಪಡೆಯದೇ ಇರುವ ಶಿಕ್ಷಕರೂ ಸಹ ಯಾವುದೇ ಹಣ ಪಾವತಿಸದೇ, ಇತರೆ ದಾಖಲೆಗಳೊಂದಿಗೆ ಚಲನ್ ಪ್ರತಿ/ಭೌತಿಕ ಕಾಡ್ ಪ್ರತಿಯನ್ನು Online portalನಲ್ಲಿ upload ಮಾಡಿ ನೋಂದಣಿ ಪಡೆದು ಹೊಸ ಕಾರ್ಡ್ ಪಡೆಯಬಹುದಾಗಿದೆ. ಸದರಿ ಶಿಕ್ಷಕರ ಆನ್‌ಲೈನ್ ಅರ್ಜಿಗಳು ನೇರವಾಗಿ ಶಿಕ್ಷಕರ ಕಲ್ಯಾಣ ನಿಧಿ ಕಛೇರಿಯ ಲಾಗಿನ್ ಬರುತ್ತವೆ. ಹಾಗೂ ಹೊಸದಾಗಿ ಆಜೀವ ಸದಸ್ಯತ್ವ ಪಡೆಯಲು ಇಚ್ಛಿಸುವ ಸರ್ಕಾರಿ/ಅನುದಾನಿತ ಶಿಕ್ಷಕರು/ಉಪನ್ಯಾಸಕರು ಆನ್‌ಲೈನ್ ಪೇಮೆಂಟ್ ವಿಧಾನಗಳಾದ Net Banking/UPI/Debit card ಮುಖಾಂತರ ಅರ್ಜಿ ಶುಲ್ಕ ರೂ. 3000/-ಗಳನ್ನು (ಮೂರು ಸಾವಿರ ರೂಪಾಯಿಗಳು) ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಸದರಿ ಅರ್ಜಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ಲ್ಲಿ ಸ್ವೀಕೃತವಾಗುತ್ತವೆ. ಈ ಸಂಬಂಧ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪ್ರತ್ಯೇಕವಾಗಿ User-Id ಮತ್ತು Common Password ನೀಡಲಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಥಮವಾಗಿ ಲಾಗಿನ್ ಆದ ನಂತರ ತಮ್ಮ Password ಬದಲಾವಣೆ ಮಾಡಿಕೊಂಡು ಸ್ವೀಕೃತವಾಗುವ ಅರ್ಜಿ/ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮವಹಿಸಬಹುದಾಗಿದೆ. Onlineನಲ್ಲಿ ಅನುಸರಿಸಬೇಕಾದ ಕ್ರಮಗಳು ಹಾಗೂ ಸಲ್ಲಿಸಬೇಕಾಗಿರುವ ದಾಖಲೆಗಳ ಕುರಿತು User-Manual ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ User-Id ಮತ್ತು Common Password ವಿವರಗಳನ್ನು ಈ ಸುತ್ತೋಲೆಯೊಂದಿಗೆ ಮುಂದಿನ ಅಗತ್ಯ ಕ್ರಮಕ್ಕಾಗಿ ಲಗತ್ತಿಸಿದೆ.
ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರನ್ನು ಹೊರತುಪಡಿಸಿ, ಉಳಿದಂತೆ ఎల్లా ಸರ್ಕಾರಿ/ಅನುದಾನಿತ ಸಂಸ್ಥೆಗಳ ಉಪನ್ಯಾಸಕರೂ ಸಹ ಮೇಲೆ ತಿಳಿಸಿರುವ ಕ್ರಮವನ್ನು ಅನುಸರಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ನೋಂದಣಿ ಪಡೆಯಬೇಕಾಗಿರುತ್ತದೆ. ಸರ್ಕಾರಿ/ಅನುದಾನಿತ ಸಂಸ್ಥೆಗಳ ಉಪನ್ಯಾಸಕರು ಸಲ್ಲಿಸುವ ಆನ್‌ಲೈನ್ ಅರ್ಜಿಗಳು ನೇರವಾಗಿ ಶಿಕ್ಷಕರ ಕಲ್ಯಾಣ ನಿಧಿ ಕಛೇರಿಯ ಲಾಗಿನ್‌ಗೆ ಬರುತ್ತವೆ. ನಂತರ ಸದರಿ ಅರ್ಜಿಗಳನ್ನು ಪರಿಶೀಲಿಸಿ ಆನ್‌ಲೈನ್ ನೋಂದಣಿ ಸಂಖ್ಯೆಯನ್ನು ನೀಡಲಾಗುತ್ತದೆ ಎಂದು ಈ ಮೂಲಕ ತಿಳಿಯಪಡಿಸಿದೆ.
ಸೂಚನೆ: ಶಿಕ್ಷಕರ ಕಲ್ಯಾಣ ನಿಧಿ ಕಛೇರಿಯ ಎಲ್ಲ ಸೌಲಭ್ಯಗಳನ್ನು ಇನ್ನು ಮುಂದೆ Online ಮೂಲಕವೇ ಒದಗಿಸಲಾಗುವುದು. ಅಜೀವ ಸದಸ್ಯತ್ವ ವಿವರಗಳನ್ನು ಗಣಕೀಕರಿಸಿ ಹೊಸ ಸದಸ್ಯತ್ವ ಸಂಖ್ಯೆಯನ್ನು ಪಡೆದ ನಂತರವೇ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಅವಕಾಶವಿರುತ್ತದೆ




No comments:
Post a Comment