Hedding ; KPTCL Recruitment 2022 Important Notice
ಸಹಾಯಕ ಇಂಜಿನಿಯರ್(ವಿದ್ಯುತ್/ಸಿವಿಲ್) ಮತ್ತು ಕಿರಿಯ ಇಂಜಿನಿಯರ್(ವಿದ್ಯುತ್/ಸಿವಿಲ್) ಹುದ್ದೆಗಳಿಗೆ ಆಯ್ಕೆಯಾಗಿ, ನಿಗದಿತ ಅವಧಿಯೊಳಗೆ ಮೂಲ ದಾಖಲಾತಿಗಳ ನೈಜತೆ/ದೃಢೀಕರಣ ಸ್ವೀಕೃತಗೊಳ್ಳದೇ ಇರುವ, ನೇಮಕಾತಿ ಆದೇಶ ಪಡೆಯಲು ಕೌನ್ಸಿಲಿಂಗ್‌ಗೆ ಗೈರುಹಾಜರಾಗಿರುವ ಮತ್ತು ನೇಮಕಾತಿ ಆದೇಶ ಸ್ವೀಕರಿಸಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಇರುವ ಅಭ್ಯರ್ಥಿಗಳ ಬಗ್ಗೆ KPTCL ಮಹತ್ವದ ಸೂಚನೆ ನೀಡಿದೆ.
ನಿಗಮದ ಉದ್ಯೋಗ ಪ್ರಕಟಣೆ ಸಂಖ್ಯೆ: ಕವಿಪ್ರನಿನಿ/ಬಿ16/ 21723/2021-22, ದಿನಾಂಕ: 01.02.2022 ಕ್ಕನುಗುಣವಾಗಿ ಸಹಾಯಕ ಇಂಜಿನಿಯರ್(ವಿದ್ಯುತ್/ಸಿವಿಲ್) ಮತ್ತು ಕಿರಿಯ ಇಂಜಿನಿಯರ್(ವಿದ್ಯುತ್/ಸಿವಿಲ್) ಹುದ್ದೆಗಳಿಗೆ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಉಲ್ಲೇಖ-2 ರಿಂದ 5 ವರೆಗೆ ತಿಳಿಸಿರುವ ಅಧಿಸೂಚನೆಗಳ ಮೂಲಕ ಪ್ರಕಟಿಸಲಾಗಿತ್ತು.
ತದನಂತರ, ಆಯ್ಕೆಗೊಂಡ ಅಭ್ಯರ್ಥಿಗಳ ಪೊಲೀಸ್ ಪೂರ್ವ ಚರಿತ್ರಾ ವರದಿ, ಜಾತಿ ಮೀಸಲಾತಿ ಸಿಂಧುತ್ವ ಪ್ರಮಾಣ ಪತ್ರ, ಅಂಕಪಟ್ಟಿ ಮತ್ತು ಪದವಿ/ಡಿಪ್ಲೊಮಾ ಪ್ರಮಾಣ ಪತ್ರಗಳ ನೈಜತೆ, ಇತರೆ ಸಮತಳ ಮೀಸಲಾತಿ ಪ್ರಮಾಣ ಪ್ರಮಾ ಪತ್ರಗಳ ನೈಜತೆಯನ್ನು ಸಕ್ಷಮ ಪ್ರಾಧಿಕಾರಗಳಿಂದ ಪಡೆದ ನಂತರ ಸ್ಥಳ ನಿಯುಕ್ತಿ ಮತ್ತು ನೇಮಕಾತಿ ಆದೇಶಗಳನ್ನು ಜಾರಿಗೊಳಿಸುವ ಸಲುವಾಗಿ ಹಂತಹಂತವಾಗಿ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿರುತ್ತದೆ.
2
ಆಯ್ಕೆ ಹೊಂದಿದ ಅಭ್ಯರ್ಥಿಗಳ ಪೈಕಿ, ಕೆಲವು ಅಭ್ಯರ್ಥಿಗಳ ಪೊಲೀಸ್ ಪೂರ್ವ ಚರಿತ್ರಾ ವರದಿ, ಜಾತಿ ಮೀಸಲಾತಿ ಸಿಂಧುತ್ವ ಪ್ರಮಾಣ ಪತ್ರ, ಅಂಕಪಟ್ಟಿ ಮತ್ತು ಪದವಿ/ಡಿಪ್ಲೊಮಾ ಪ್ರಮಾಣ ಪತ್ರಗಳ ನೈಜತೆ, ಇತರೆ ಸಮತಳ ಮೀಸಲಾತಿ ಪ್ರಮಾಣ ಪತ್ರಗಳ ನೈಜತೆ ಸಕ್ಷಮ ಪ್ರಾಧಿಕಾರಗಳಿಂದ ಈವರೆವಿಗೂ ಸ್ವೀಕೃತಗೊಂಡಿರುವುದಿಲ್ಲ. ಇಂತಹ ಅಭ್ಯರ್ಥಿಗಳಿಗೆ ಇದುವರೆವಿಗೂ ನೇಮಕಾತಿ ಆದೇಶ ಜಾರಿಗೊಳಿಸಿರುವುದಿಲ್ಲ.
ಕೆಲವು ಅಭ್ಯರ್ಥಿಗಳು ಕೌನ್ಸಿಲಿಂಗ್ ಪ್ರಕ್ರಿಯೆಗೆ ಕಾರಣಾಂತರಗಳಿಂದ ಗೈರುಹಾಜರಾಗಿರುತ್ತಾರೆ. ಇಂತಹ ಅಭ್ಯರ್ಥಿಗಳಿಗೆ ಹಲವಾರು ಅವಕಾಶಗಳನ್ನು ಕಲ್ಪಿಸಿದ್ದರೂ ಸಹ, ಕೌನ್ಸಿಲಿಂಗ್ ಪ್ರಕ್ರಿಯೆಗೆ ಗೈರುಹಾಜರಾಗಿದ್ದು, ಇವರುಗಳಿಗೆ ಈವರೆವಿಗೂ ನೇಮಕಾತಿ ಆದೇಶ ಜಾರಿಗೊಳಿಸಿರುವುದಿಲ್ಲ.
ಮುಂದುವರೆದು, ನೇಮಕಾತಿ ಆದೇಶ ಪಡೆದ ಕೆಲವು ಅಭ್ಯರ್ಥಿಗಳು ನೇಮಕಾತಿ ಆದೇಶಗಳನ್ನು ಪಡೆದು ನಿಗದಿತ ಅವಧಿಯೊಳಗೆ ನಿಯುಕ್ತಿಗೊಳಿಸಿದ ಸ್ಥಳಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವುದಿಲ್ಲ. ಆದುದರಿಂದ ಇಂತಹ ಅಭ್ಯರ್ಥಿಗಳು ನೇಮಕಾತಿ ಮೇಲಿನ ಹಕ್ಕನ್ನು ಕಳೆದುಕೊಂಡಿರುತ್ತಾರೆ.
ಮೇಲೆ ತಿಳಿಸಿರುವ ಅಭ್ಯರ್ಥಿಗಳ ವಿವರಗಳು ಈ ಕೆಳಗಿನ ಪಟ್ಟಿಯಲ್ಲಿ ಇರುತ್ತದೆ.

No comments:
Post a Comment