Thursday, November 7, 2024

Committee Meeting on Demands of Karnataka State Primary School Teachers, Regarding Entry of Qualification Information of Primary School Teachers in E.E.D.S.

  Wisdom News       Thursday, November 7, 2024
Hedding ; Regarding Entry of Qualification Information of Primary School Teachers in EEDS


ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಕುರಿತು ಸಮಿತಿ ಸಭೆ, ಪ್ರಾಥಮಿಕ ಶಾಲಾ ಶಿಕ್ಷಕರ ವಿದ್ಯಾರ್ಹತೆ ಮಾಹಿತಿಗಳನ್ನು ಇ.ಇ.ಡಿ.ಎಸ್ ನಲ್ಲಿ ಇಂದೀಕರಿಸುವ ಬಗ್ಗೆ ಜ್ಞಾಪನ.

ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಕುರಿತು ಪರಿಶೀಲಿಸಿ ವರದಿ ನೀಡಲು ಸರ್ಕಾರವು ದಿನಾಂಕ: 23-09-2024 ರ ಆದೇಶದಲ್ಲಿ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.

ಈ ಸಂಬಂಧ ದಿನಾಂಕ: 16-10-2024 ರಂದು ಸಮಿತಿಯ ಅಧ್ಯಕ್ಷರಾದ ಮಾನ್ಯ ಆಯುಕ್ತರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೇಡಿಕೆಗಳ ಕುರಿತು ಸಮಿತಿ ಸದಸ್ಯರೊಂದಿಗೆ ಚರ್ಚಿಸಿರುತ್ತಾರೆ. ಸದರಿ ಸಂದರ್ಭದಲ್ಲಿ 2017ಕ್ಕಿಂತ ಹಿಂದೆ ನೇಮಕವಾದ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರುಗಳ ವಿದ್ಯಾರ್ಹತೆ ಮಾಹಿತಿಗಳನ್ನು ಮತ್ತು ಸಂಬಂಧಿತ ಅಂಕಿ ಅಂಶಗಳನ್ನು ಮುಂದಿನ ಸಭೆಯಲ್ಲಿ ಚರ್ಚೆಗೆ ಪ್ರಸ್ತುತ ಪಡಿಸಲು ಸೂಚನೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರುಗಳ ವಿದ್ಯಾರ್ಹತೆ ಕುರಿತಾದ ಪೂರ್ಣ ಮಾಹಿತಿಗಳನ್ನು ಇ.ಇ.ಡಿ.ಎಸ್ ನಲ್ಲಿ ಇಂದೀಕರಿಸಲು ಸಂಬಂಧಿಸಿದ ಡಿ.ಡಿ.ಓ ರವರಿಗೆ ಉಲ್ಲೇಖ-03 ರಲ್ಲಿ ಸೂಚಿಸಲಾಗಿತ್ತು ಆದರೆ, ಇದುವರೆವಿಗೂ ಯಾವುದೇ ಮಾಹಿತಿ ಸ್ವೀಕೃತಿಯಾಗಿರುವುದಿಲ್ಲ.

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು, ಪದವಿ ವಿದ್ಯಾರ್ಹತೆ ಹೊಂದಿದ್ದಲ್ಲಿ ಆ ಬಗ್ಗೆ, ಪೂರ್ಣ ವಿವರಗಳನ್ನು ಅಂದರೆ, ಯಾವ ಪದವಿ, ಪದವಿಯ ಅವಧಿ, ಪದವಿ ಪಡೆದ ವರ್ಷ, ಯಾವ ವಿಶ್ವವಿದ್ಯಾಲಯದಿಂದ ಪಡೆದಿದೆ. ಅಭ್ಯಾಸಿಸಿರುವ ವಿಷಯದ ಮಾಹಿತಿ, ಇತ್ಯಾದಿ ಸಂಪೂರ್ಣ ಮಾಹಿತಿಗಳನ್ನು ಇ.ಇ.ಡಿ.ಎಸ್ ನಲ್ಲಿ ಇಂದೀಕರಿಸತಕ್ಕದ್ದು ಹಾಗೆಯೇ ಸದರಿ ಪದವಿಯ ಕುರಿತಾದ ದಾಖಲೆಗಳ ನೈಜತೆಯನ್ನು ಪರಿಶೀಲಿಸಿ ಇಂದೀಕರಿಸತಕ್ಕದ್ದು. ಇದಕ್ಕಾಗಿ ದಿನಾಂಕ: 14-11-2024 ರವರೆಗೆ ಅವಧಿಯನ್ನು ಅಂತಿಮವಾಗಿ ನಿಗದಿಪಡಿಸಿದೆ. ಆಯಾ ಜಿಲ್ಲಾ ಉಪನಿರ್ದೇಶಕರು ಮೇಲಿನಂತೆ ವಿವರಗಳನ್ನು ಅತೀ ತುರ್ತಾಗಿ ಇ.ಇ.ಡಿ.ಎಸ್ ನಲ್ಲಿ ಎಲ್ಲಾ ಶಿಕ್ಷಕರ ಮಾಹಿತಿಯನ್ನು ಡಿ.ಡಿ.ಒ ರವರು ಇಂದೀಕರಿಸಿರುವ ಬಗ್ಗೆ, ಮೇಲುಸ್ತುವಾರಿ ವಹಿಸಲು ಸೂಚಿಸಲಾಗಿದೆ.


logoblog

Thanks for reading Committee Meeting on Demands of Karnataka State Primary School Teachers, Regarding Entry of Qualification Information of Primary School Teachers in E.E.D.S.

Previous
« Prev Post

No comments:

Post a Comment