Saturday, November 16, 2024

Assistant Professor Placement Counseling

  Wisdom News       Saturday, November 16, 2024
Hedding ; Assistant Professor Placement Counseling 


ಇಲಾಖೆಯ ವಿವಿಧ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಆದೇಶ ನೀಡುವ ಸಂಬಂಧ ಸ್ಥಳ/ಕಾಲೇಜು ಆಯ್ಕೆಗಾಗಿ Online ಮೂಲಕ ಸ್ಥಳ ಆಯ್ಕೆ ಕೌನ್ಸಿಲಿಂಗ್‌ ನಡೆಸುವ ಬಗ್ಗೆ.

ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಉಲ್ಲೇಖ-(1) ರಿಂದ (4) ರ ಸರ್ಕಾರದ ಅಧಿಸೂಚನೆಗಳಲ್ಲಿ

ನೇಮಕಾತಿ ಆದೇಶವನ್ನು ಹೊರಡಿಸಿ, ನೇಮಕ ಹೊಂದಿರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ಜೇಷ್ಠತೆಯ ಆಧಾರದ ಮೇಲೆ ಕೌನ್ಸಲಿಂಗ್ ಪ್ರಕ್ರಿಯೆಯನ್ನು ನಡೆಸಿ ಸ್ಥಳ ನಿಯುಕ್ತಿ ಆದೇಶವನ್ನು ನೀಡುವಂತೆ ಸೂಚಿಸಲಾಗಿರುತ್ತದೆ. ಅದರಂತೆ ಹೊಸದಾಗಿ ನೇಮಕಗೊಂಡ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳಿಗೆ ಉಲ್ಲೇಖ-(5) ರ ನಿಯಮ 9 ರಂತೆ ಸ್ಥಳ ಆಯ್ಕೆ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನಡೆಸಬೇಕಿರುತ್ತದೆ. ಅದರನ್ವಯ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳಿಗೆ ಸ್ಥಳ/ಕಾಲೇಜು ಆಯ್ಕೆಗಾಗಿ ದಿನಾಂಕ:16-11-2024 ರಂದು Online ಮೂಲಕ ಸ್ಥಳ ಆಯ್ಕೆ ಕೌನ್ಸಿಲಿಂಗ್ ಅನ್ನು ಆಯೋಜಿಸಲಾಗಿದೆ.


logoblog

Thanks for reading Assistant Professor Placement Counseling

Previous
« Prev Post

No comments:

Post a Comment