Hedding ; 2025- 26th class textbook, routine and practice book demand is allowed in SATS from this day...
2025-26ನೇ ಶೈಕ್ಷಣಿಕ ಸಾಲಿಗೆ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳ ಬೇಡಿಕೆಯನ್ನು SATS ತಂತ್ರಾಂಶದಲ್ಲಿ ದಾಖಲಿಸುವ ಪ್ರಕ್ರಿಯೆಯು, ಹಿಂದಿನ ಸಾಲಿನಂತೆ ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ಅನುಷ್ಠಾನಗೊಳ್ಳಲಿದೆ. ಅದರಂತೆ ಅನುಪಾಲಿಸಿ ನಿರ್ದೇಶಿಸುವ (ಉಸ್ತುವಾರಿ ಮಾಡುವ) ಜವಾಬ್ದಾರಿಯನ್ನು ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ಆಯಾ ಹಂತದ ಅಧಿಕಾರಿ/ ಸಿಬ್ಬಂದಿಗಳಿಗೆ ನಿಗದಿಪಡಿಸಲಾಗಿದೆ.
2025-26ನೇ ಶೈಕ್ಷಣಿಕ ಸಾಲಿಗೆ 1 ರಿಂದ 10ನೇ ತರಗತಿಗಳ ಪಠ್ಯಪುಸ್ತಕ, 4 ರಿಂದ 9ನೇ ತರಗತಿಗಳ ಅಭ್ಯಾಸ ಪುಸ್ತಕ ಹಾಗೂ 1 ರಿಂದ 10ನೇ ತರಗತಿಗಳ ದಿನಚರಿಗಳ ಬೇಡಿಕೆಯನ್ನು ದಾಖಲಿಸುವ ಪ್ರಕ್ರಿಯೆಯು ದಿನಾಂಕ:29.11.2024 ರಿಂದ 09.12.2024ರವರೆಗೆ ನಡೆಯಲಿದೆ. ಇದಕ್ಕೆ ಪೂರಕವಾಗಿ ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಹಂತದಿಂದ ಪರಿಶೀಲನೆ ಹಾಗೂ ಅನುಪಾಲನೆಯ ಚಟುವಟಿಕೆಯು ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ.
ಪಠ್ಯ ಪುಸ್ತಕ ಬೇಡಿಕೆ ಸಂಬಂಧ ಪೂರ್ವಸಿದ್ರತಾ ಕಾರ್ಯ ಚಟುವಟಿಕೆಗಳು:
1. SATS ತಂತ್ರಾಂಶಕ್ಕೆ ಒಳಪಟ್ಟಿರುವ ಸರ್ಕಾರಿ, ಅನುದಾನಿತ ಶಾಲೆಗಳು ಹಾಗೂ ಸರ್ಕಾರದಿಂದ ಅನುಮೋದಿಸಲ್ಪಟ್ಟಿರುವ ಅನುದಾನ ರಹಿತ ಶಾಲೆಗಳು ಹಾಗೂ ಇತರೇ ಇಲಾಖೆಗಳಿಂದ ನಡೆಯುವ ಮತ್ತು ಅಗತ್ಯಕ್ಕನುಗುಣವಾಗಿ ಹೊರರಾಜ್ಯಗಳ ಶಾಲೆಗಳನ್ನು ಒಳಗೊಂಡಂತೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ತಾಲ್ಲೂಕಿನಲ್ಲಿರುವ ಯಾವ ಶಾಲೆಯೂ ಕ ಬಿಡದಂತೆ ಖಾತ್ರಿ ಪಡೆಸಿಕೊಳ್ಳುವುದು.
2. ಶಾಲಾವಾರು ಬೇಡಿಕೆಯನ್ನು ಸಲ್ಲಿಸುವಾಗ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಗೆ ಅನುಗುಣವಾಗಿ ಅವಶ್ಯವಿರುವ ಶೀರ್ಷಿಕೆಗಳಿಗೆ ಮಾತ್ರ ಪ್ರಥಮ,ದ್ವಿತೀಯ, ತೃತೀಯ ಭಾಷೆ ಹಾಗೂ ಕೋರ್ ವಿಷಯಗಳ)
ಸಂಖ್ಯೆ ಸಮನಾಗಿರಬೇಕು. ಬೇಡಿಕೆಯನ್ನು ಸಲ್ಲಿಸುವ ಬಗ್ಗೆ, ಕ್ಲಸ್ಟರ್ ಹಂತದಲ್ಲಿ ಸಿ.ಆರ್.ಪಿ ಮತ್ತು ಬ್ಲಾಕ್ ಹಂತದಲ್ಲಿ BEO, BRC ಹಾಗೂ ತಾಲ್ಲೂಕು ನೋಡಲ್ ಅಧಿಕಾರಿಗಳು ಪರಿಶೀಲಿಸಿ, ಉಲ್ಲೇಖಿತ ಆದೇಶಗಳನ್ನಯ ಬೇಡಿಕೆಯು ಆಯಾ ಶಾಲಾ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇರುವುದರ ಬಗ್ಗೆ, ಪರಿಶೀಲಿಸಿಕೊಂಡು ಅನುಮೋದಿಸುವುದು.
3. ಸರ್ಕಾರಿ (ಆದರ್ಶ ಶಾಲೆಗಳು, ಸ್ಥಳೀಯ ಸಂಸ್ಥೆ/ಕಾರ್ಪೋರೇಷನ್) ಶಾಲೆಗಳು, ಅನುದಾನಿತ ಶಾಲೆಗಳು, ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳು ಅಗತ್ಯವಿರುವ ಬೇರೆ ರಾಜ್ಯಗಳ ಶಾಲೆಗಳು ಹಾಗೂ ಗಡಿನಾಡು ಶಾಲೆಗೆ (ಗಡಿ ರಾಜ್ಯಗಳ ಶಾಲೆಗಳಿಗೆ ಅವಶ್ಯವಿದ್ದಲ್ಲಿ ಕನ್ನಡ ಭಾಷಾ ಪಠ್ಯಪುಸ್ತಕಗಳು ಮಾತ್ರ) ಉಚಿತ ವಿಭಾಗದಡಿಯಲ್ಲಿ ಬೇಡಿಕೆಯನ್ನು ದಾಖಲಿಸಬೇಕು.
4. ಅನುದಾನ ರಹಿತ ಶಾಲೆಗಳು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪ ಸಂಖ್ಯಾತ ಇಲಾಖೆ ಹಾಗೂ ಇತರೆ ಸರ್ಕಾರಿ ಇಲಾಖೆಯಡಿಯಲ್ಲಿ ನಡೆಯುವ ಶಾಲೆಗಳು ಮಾರಾಟ ವಿಭಾಗದಡಿಯಲ್ಲಿ ಬೇಡಿಕೆಯನ್ನು ಸಲ್ಲಿಸುವುದು.
5. ಪ್ರಸಕ್ತ ಸಾಲಿಗೆ ದ್ವಿಭಾಷಾ (ಬೈಲಿಂಗ್ನಲ್) ಮತ್ತು ಆದರ್ಶ ಶಾಲೆಗಳಿಗೆ ಬೇಡಿಕೆಯನ್ನು ದಾಖಲಿಸುವಾಗ ಸದರಿ ಶಾಲೆಗಳಿಗೆ ನಿಗದಿಪಡಿಸಿರುವ ಶೀರ್ಷಿಕೆಗಳನ್ನು ಪರಿಶೀಲಿಸಿ ದಾಖಲಿಸುವುದು.
6. ಎಲ್ಲಾ ಶಾಲೆಗಳು ನಿಗದಿತ ಸಮಯದೊಳಗೆ ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸಲು ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ನಿರಂತರವಾಗಿ ಪರಿಶೀಲಿಸಿ, ನಿಖರವಾದ ಬೇಡಿಕೆಯನ್ನು ಪಡೆಯಲು ಅಗತ್ಯ ಕ್ರಮವಹಿಸುವುದು.
7. ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರುಗಳಿಗೆ ಮತ್ತು ಸಿ.ಆರ್.ಪಿ.ಗಳಿಗೆ ಎಸ್.ಎ.ಟಿ.ಎಸ್-ಕೆ.ಟಿ.ಬಿ.ಎಸ್. ಮಾಡ್ಯೂಲ್‌ನ ಕುರಿತಂತೆ ತರಬೇತಿಯನ್ನು ಆಯೋಚಿಸುವುದು ಹಾಗೂ ಪ್ರಸಕ್ತ ಸಾಲಿನಲ್ಲಿ ಎಸ್.ಎ.ಟಿ.ಎಸ್.ಕೆ.ಟಿ.ಬಿ.ಎಸ್. ಮಾಡ್ಯೂಲ್‌ನಲ್ಲಿ ಅಳವಡಿಸಿರುವ ಬದಲಾವಣೆಗಳ ಬಗ್ಗೆ ಮಾಹಿತಿಯನ್ನು ನೀಡುವುದು. ತಾಲ್ಲೂಕು ಹಂತದಲ್ಲಿ ಹಾಗೂ ಕ್ಲಸ್ಟರ್ ಹಂತದಲ್ಲಿ ಎಲ್ಲಾ ಮುಖ್ಯ ಶಿಕ್ಷಕರು ಮತ್ತು ಸಿ.ಆರ್. ಪಿ ರವರಿಗೆ ಈ ಸಂಬಂಧ ತರಬೇತಿ ನೀಡುವುದು.
8. ಪ್ರಮುಖವಾಗಿ ನಲಿ-ಕಲಿ ಶಾಲೆಗಳು, ಆದರ್ಶಶಾಲೆಗಳು, ಕನ್ನಡ ಮಾಧ್ಯಮ ಮತ್ತು ಉರ್ದು ಮಾಧ್ಯಮ ಶಾಲೆಗಳಲ್ಲಿ ಅನುಷ್ಠಾನಗೊಂಡಿರುವ ಆಂಗ್ಲ ಮಾಧ್ಯಮ ವಿಭಾಗಗಳಿಗೆ (ದ್ವಿಭಾಷಾ ಪಠ್ಯಪುಸ್ತಕ) ಮೀಸಲಾದ ಶೀರ್ಷಿಕಗಳ ಬಗ್ಗೆ, ಸ್ಪಷ್ಟವಾದ ಅರಿವನ್ನು ಮೂಡಿಸುವುದು.
2025-26ನೇ ಶೈಕ್ಷಣಿಕ ಸಾಲಿಗೆ SATS ತಂತ್ರಾಂಶದಲ್ಲಿ ಶಾಲೆಗಳಿಂದ ಪಡೆಯುವ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳ ಬೇಡಿಕೆಗೆ ಸಂಬಂಧಿಸಿದಂತೆ, ವಿವಿದ ಹಂತದ ಕಾರ್ಯ ಚಟುವಟಿಕೆಗಳು ಮತ್ತು ಜವಾಬ್ದಾರಿಯನ್ನು ಈ ಕೆಳಕಂಡಂತೆ ನಿರ್ವಹಿಸಲು ಎಲ್ಲಾ ಹಂತದ ಅಧಿಕಾರಿಗಳಿಗೆ ಸೂಚಿಸಿದೆ.
1. 05 (:29.11.2024 806 09.12.20240)
1) ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸುವ ಮೊದಲು ಆ ಶಾಲೆ ಯಾವ ಆಡಳಿತ ವ್ಯಾಪ್ತಿಗೆ ಒಳಪಡುತ್ತದೆ. ಶಾಲೆಯಲ್ಲಿರುವ ಮಾಧ್ಯಮಗಳು ಹಾಗೂ ಬೋಧಿಸುತ್ತಿರುವ ಭಾಷೆಗಳು(ಪ್ರಥಮ/ದ್ವಿತೀಯ/ಪ್ರತೀಯ ಭಾಷೆ) ಹಾಗೂ ಶಾಲೆಗೆ ಅಗತ್ಯವಿರುವ ಶೀರ್ಷಿಕೆಗಳನ್ನು ಖಾತ್ರಿಪಡಿಸಿಕೊಳ್ಳ ಬೇಕು.
2) ಆಯಾ ಶಾಲೆಗಳ ಮುಖ್ಯ ಶಿಕ್ಷಕರೇ ತರಗತಿವಾರು ಶೀರ್ಷಿಕವಾರು ಮಾಧ್ಯಮವಾರು ಅವಶ್ಯವಿರುವ ಪಠ್ಯಪುಸ್ತಕಗಳ ಬೇಡಿಕೆಯನ್ನು 2024-25ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ದಾಖಲಾತಿಗೆ ಅನುಗುಣವಾಗಿ ಮಾತ್ರ SATS ತಂತ್ರಾಂಶದಲ್ಲಿ ನಿಖರವಾಗಿ ದಾಖಲಿಸುವುದು.

No comments:
Post a Comment