Monday, October 21, 2024

Subject: Date:04-11-2024 to 11-02-2025 Regarding the implementation of "100 Days Reading Movement" program in all pre-primary and primary schools of the state.

  Wisdom News       Monday, October 21, 2024
Hedding :Subject: Date:04-11-2024 to 11-02-2025 Regarding the implementation of "100 Days Reading Movement" program in all pre-primary and primary schools of the state.


ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದರೊಂದಿಗೆ ಭಾಷಾ ಕೌಶಲ್ಯವನ್ನು ಅಭಿವೃದ್ಧಿಗೊಳಿಸಬೇಕಿದೆ. ಹಾಗಾಗಿ 100 ದಿನಗಳ ಓದುವ ಆಂದೋಲನವನ್ನು ರಾಜ್ಯವ್ಯಾಪಿ ಎಲ್ಲಾ ಬಾಲವಾಟಕ/ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿನ 01 ರಿಂದ 08ನೇ ತರಗತಿಯ ವಿದ್ಯಾರ್ಥಿಗಳಿಗೆ ಅನ್ವಯಿಸುವಂತೆ 3 ಗುಂಪುಗಳಲ್ಲಿ ಅನುಷ್ಠಾನಗೊಳಿಸಲು 2023-24ನೇ ಸಾಲಿನ PAB Plan Document ನಲ್ಲಿ ಯೋಚಿಸಲಾಗಿದೆ.

NIPUN ಭಾರತ ಮಿಷನ್‌ ಆಶಯದಂತೆ FLN ಚಟುವಟಿಕೆಗಳನ್ನು ನಿರ್ವಹಿಸುವುದರ ಮೂಲಕ ಮಕ್ಕಳಲ್ಲಿ ಓದುವ, ಬರೆಯುವ ಹಾಗೂ ಅರ್ಥೈಸಿಕೊಳ್ಳುವ ಹಾಗೂ ಸಂತೋಷದಿಂದ ಭಾಷಾ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಬೇಕಾಗಿದೆ.

ಮೇಲ್ಕಂಡ ಉದ್ದೇಶದಿಂದ ಓದುವ ಆಂದೋಲನದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಉಲ್ಲೇಖದಲ್ಲಿ ಯೋಜಿಸಿರುವಂತೆ ಕೈಗೊಳ್ಳಬೇಕಾಗಿರುವ ಕಾರ್ಯ ಚಟುವಟಿಕೆಗಳ ವಿವರಗಳನ್ನೊಳಗೊಂಡ ವೇಳಾಪಟ್ಟಿಯನ್ನು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಂಬಂಧ ಸವಿವರ ಮಾರ್ಗಸೂಚಿಯನ್ನು ಈ ಸುತ್ತೋಲೆಯೊಂದಿಗೆ ಲಗತ್ತಿಸಿದ್ದು, ಶಾಲಾ ಶಿಕ್ಷಕರು ಅದರಂತೆ ವ್ಯವಸ್ಥಿತವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದೆ.

. ಅನುಷ್ಠಾನಗೊಳಿಸಬೇಕಾದ ಗುಂಪುಗಳು/ ತರಗತಿವಾರು ಮಕ್ಕಳು (Target group)

1: ಬಾಲವಾಟಕದಿಂದ 02ನೇ ತರಗತಿಯವರೆಗೆ

> ಗುಂಪು 2: > 2 3: 03ನೇ ತರಗತಿಯಿಂದ 05ನೇ ತರಗತಿಯವರೆಗೆ 06ನೇ ತರಗತಿಯಿಂದ 08ನೇ ತರಗತಿಯವರೆಗೆ

• ಆಂದೋಲನದ ಅವಧಿ: 100 ದಿನಗಳು (14 ವಾರಗಳು) ದಿನಾಂಕ: 04-11-2024 ໖໐໖ 11-02-2025.

ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗಾಗಿ ರಾಜ್ಯ ಮಟ್ಟದ ನೋಡಲ್ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಹಂತದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕಾರ್ಯಕ್ರಮದ ಅನುಷ್ಠಾನವನ್ನು ಅವಲೋಕಿಸುವರು.

ರಾಜ್ಯದ ಎಲ್ಲಾ ಸಿಟಿಇ ಪ್ರಾಂಶುಪಾಲರು ಹಾಗೂ ಅಧಿಕಾರಿವರ್ಗದವರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಎಲ್ಲಾ ಅನುಷ್ಠಾನ ಅಧಿಕಾರಿಗಳು ಶಾಲಾ ಭೇಟಿ ಸಂದರ್ಭದಲ್ಲಿ ಈ ಕಾರ್ಯಕ್ರಮದ ಅನುಷ್ಠಾನವನ್ನು ಅವಲೋಕಿಸುವುದು.



ಉಪನಿರ್ದೇಶಕರು(ಆಡಳಿತ),ಶಾಲಾ ಶಿಕ್ಷಣ ಇಲಾಖೆ, ಇವರು ತಮ್ಮ ಕಛೇರಿಯ ಎಲ್ಲಾ. ಅಧಿಕಾರಿಗಳಿಗೂ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸುವುದು. ತಮ್ಮ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಸೂಕ್ತ ಸೂಚನೆ ನೀಡಿ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವುದು.

ಉಪನಿರ್ದೇಶಕರು(ಅಭಿವೃದ್ಧಿ), ಶಾಲಾ ಶಿಕ್ಷಣ ಇಲಾಖೆ, ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರು ಇವರುಗಳು ಶಾಲೆಗಳಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸಕ್ರಿಯವಾಗಿ ಪಾಲ್ಗೊಂಡು ಸೂಕ್ತ ಸೂಚನೆ ಹಾಗೂ ಮಾರ್ಗದರ್ಶನ ನೀಡುವುದು.

ಉಪನಿರ್ದೇಶಕರು(ಅಭಿವೃದ್ಧಿ) కాలా ಶಿಕ್ಷಣ ಇಲಾಖೆರವರು ಡಯಟ್‌ನ ಉಪನ್ಯಾಸಕರುಗಳನ್ನು ಪ್ರತಿ ತಾಲ್ಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವುದು. ಈ ರೀತಿ ನೇಮಿಸಲ್ಪಟ್ಟ ನೋಡಲ್ ಅಧಿಕಾರಿಗಳು ಓದುವ ಆಂದೋಲನದಲ್ಲಿ ಪ್ರತಿವಾರವು ಪಾಲ್ಗೊಂಡ ಮೂರು ಗುಂಪುಗಳ ಪ್ರಗತಿಯ ವರದಿ ಹಾಗೂ ಕಾರ್ಯಕ್ರಮಕ್ಕೆ ಸಂಬಂಧಿಸಿದ ಉತ್ತಮವಾದ ಫೋಟೋ ಮತ್ತು ವಿಡಿಯೋಗಳನ್ನು 

ಸದರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿ ವಿದ್ಯಾರ್ಥಿಗಳಲ್ಲಿ ಓದುವ 'ಹವ್ಯಾಸವನ್ನು ಹೆಚ್ಚಿಸಲು ಅವಕಾಶ ಕಲ್ಪಿಸಲು ಸೂಚಿಸಿದೆ.






🟨🟩⬜🟫🟪🟦🟧🟥⚪🟤🟣🔵🟢🟡🟠🔴🟨🟩⬜🟫🟪🟦🟧🟥⚪🟤🟣🔵🟢🟡🟠🔴🟨🟩⬜🟫🟪🟦🟧🟥⚪🟤🟣🔵🟢🟡🟠🔴

logoblog

Thanks for reading Subject: Date:04-11-2024 to 11-02-2025 Regarding the implementation of "100 Days Reading Movement" program in all pre-primary and primary schools of the state.

Previous
« Prev Post

No comments:

Post a Comment