Wednesday, October 23, 2024

Regarding withdrawal of promotion of teachers from Primary School Teacher to High School Hindi Associate Teacher with Hindi Equivalent Degree and BED Equivalent promoted as High School Hindi Associate Teacher...

  Wisdom News       Wednesday, October 23, 2024
Hedding ; Regarding withdrawal of promotion of teachers from Primary School Teacher to High School Hindi Associate Teacher with Hindi Equivalent Degree and BED Equivalent promoted as High School Hindi Associate Teacher...


2016ರ ವೃಂದ ಮತ್ತು ನೇಮಕಾತಿ ನಿಯಮಗಳು ಜಾರಿಗೆ ಬಂದ ನಂತರ 2003ರ ವೃಂದ ಮತ್ತು ನೇಮಕಾತಿ ನಿಯಮಗಳಡಿ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಪ್ರೌಢಶಾಲಾ ಹಿಂದಿ ಸಹ ಶಿಕ್ಷಕರಾಗಿ ಹಿಂದಿ ತತ್ಸಮಾನ ಪದವಿ ಮತ್ತು ಬಿ.ಇಡಿ ತತ್ಸಮಾನ ಪಡೆದ ಶಿಕ್ಷಕರುಗಳಿಗೆ ಬಡ್ತಿ ನೀಡಿರುವುದನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ: 2772/2011 ಮತ್ತು ರಿಟ್ ಅರ್ಜಿ ಸಂಖ್ಯೆ: 69822-69826/2012 ದಿನಾಂಕ: 30.07.2015ರ ಆದೇಶದ ಹಿನ್ನಲೆಯಲ್ಲಿ ಬಡ್ತಿಯನ್ನು ಹಿಂಪಡೆಯುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಉಲ್ಲೇಖ-1 ರಲ್ಲಿ ಆದೇಶವಾಗಿದ್ದು, ಅದರಂತೆ ಉಲ್ಲೇಖ-2ರ ಈ ಕಛೇರಿಯ ಜ್ಞಾಪನದಲ್ಲಿ 2016ರ ವೃಂದ ಮತ್ತು ನೇಮಕಾತಿ ನಿಯಮಗಳಂತೆ ದಿನಾಂಕ:23.03.2015 ರಿಂದ ಅನ್ವಯವಾಗುವಂತೆ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಪ್ರೌಢಶಾಲಾ ಹಿಂದಿ ಸಹ ಶಿಕ್ಷಕರಾಗಿ ಹಿಂದಿ ತತ್ಸಮಾನ ಪದವಿ ಮತ್ತು ಬಿಇಡಿ ತತ್ಸಮಾನ ಪಡೆದ ಶಿಕ್ಷಕರುಗಳು ಪ್ರೌಢಶಾಲಾ ಹಿಂದಿ ಸಹ ಶಿಕ್ಷಕರಾಗಿ ಬಡ್ತಿ ಹೊಂದಿರುವ ಪ್ರಕರಣಗಳನ್ನು ಗುರುತಿಸಿ ಕೂಡಲೇ ಹಿಂಪಡೆಯಲು ಹಾಗೂ ಸದರಿ ಬಡ್ತಿ ಹಿಂಪಡೆದ ಶಿಕ್ಷಕರಿಗೆ ಆಯಾ ಜಿಲ್ಲೆಗಳಲ್ಲಿ ಖಾಲಿ ಇರುವ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ (PST) ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ನಿಯಮಾನುಸಾರ ಸ್ಥಳ ನಿಯುಕ್ತಿಗೊಳಿಸಲು ತಿಳಿಸಲಾಗಿರುತ್ತದೆ.

ಈ ಸಂಬಂಧವಾಗಿ ಮಾನ್ಯ

ಇಲಾಬಾ

ಸಚಿವರು

ಎಫ್

ದಿನಾಂಕ: 14.03.2024ರ ಟಿಪ್ಪಣಿಯಲ್ಲಿ ದಿನಾಂಕ:23.02.2024 ರಂದು ಹೊರಡಿಸಿರುವ ಜ್ಞಾಪನವನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲು ಸೂಚಿಸಿದ್ದ ಮೇರೆಗೆ ಈ ಸಂಬಂಧ ಕ್ರಮವಹಿಸುವ ಬಗ್ಗೆ ಉಲ್ಲೇಖ- 4ರಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ಕೋರಲಾಗಿತ್ತು.

ಈ ಕುರಿತು ಉಲ್ಲೇಖ-5 ರ ಸರ್ಕಾರದ ಪತ್ರದಲ್ಲಿ 2016ರ ವೃಂದ ಮತ್ತು ನೇಮಕಾತಿ ನಿಯಮಗಳು ಜಾರಿಗೆ ಬಂದ ನಂತರ 2003ರ ವೃಂದ ಮತ್ತು ನೇಮಕಾತಿ ನಿಯಮಗಳಡಿ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಪ್ರೌಢಶಾಲಾ ಹಿಂದಿ ಸಹ ಶಿಕ್ಷಕರಾಗಿ ಹಿಂದಿ ತತ್ಸಮಾನ ಪದವಿ ಮತ್ತು ಬಿ.ಇಡಿ ತತ್ಸಮಾನ ಪಡೆದ ಶಿಕ್ಷಕರುಗಳಿಗೆ ಬಡ್ತಿ ನೀಡಿರುವುದನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ: 2772/2011 ಮತ್ತು ರಿಟ್ ಅರ್ಜಿ ಸಂಖ್ಯೆ: 69822- 69826/2012 ದಿನಾಂಕ: 30.07.2015ರ ಆದೇಶದ ಹಿನ್ನಲೆಯಲ್ಲಿ ಬಡ್ತಿಯನ್ನು ಹಿಂಪಡೆಯುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಮಗೆ ತಿಳಿಸಿದ್ದು,ಮಾನ್ಯ ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸಬೇಕಾಗಿರುವುದರಿಂದ ದಿನಾಂಕ:03.01.2024ರ ಪತ್ರದ ಸೂಚನೆಗಳನ್ವಯ ಮುಂದಿನ ಕ್ರಮವಹಿಸಲು ನಿರ್ದೇಶಿಸಲಾಗಿರುತ್ತದೆ. ಆದ್ದರಿಂದ ಈಗಾಗಲೇ ದಿನಾಂಕ: 23.02.2024ರ ಈ ಕಛೇರಿಯ ಜ್ಞಾಪನದಲ್ಲಿ ಆದೇಶಿಸಿರುವಂತೆ ಕ್ರಮವಹಿಸಿ ದಿನಾಂಕ: 30.10.2024ರ ಒಳಗೆ ವರದಿ ಸಲ್ಲಿಸಲು ತಿಳಿಸಿದೆ.







🟧🟧🟥🟥🟩🟩🟨🟨🟫🟫🟪🟪🟦🟦⬜⬜🟤🟤🟢🟢⚪⚪🟣🟣🔵🔵🟡🟡🟠🟠🔴🔴🟧🟧⬜⬜🟦🟦🟪🟪🟫🟫🟨🟨🟩🟩🟥🟥🟤🟤🟢🟢⚪⚪🟣🟣🔵🔵🟡🟡🟠🟠🔴🔴

logoblog

Thanks for reading Regarding withdrawal of promotion of teachers from Primary School Teacher to High School Hindi Associate Teacher with Hindi Equivalent Degree and BED Equivalent promoted as High School Hindi Associate Teacher...

Previous
« Prev Post

No comments:

Post a Comment