Hedding ; Regarding the organization of co-curricular activities competitions conducted separately for primary and high school teachers at taluk level and district level in the year 2024-25...
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ 2024-25ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಪ್ರತ್ಯೇಕವಾಗಿ ನಡೆಸಲಾಗುವ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳನ್ನು ತಾಲ್ಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲು ತಾಲ್ಲೂಕು ಮಟ್ಟಕ್ಕೆ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ರೂ.57,700/-ಗಳು ಅನುಬಂಧ-1ರಂತೆ ಮತ್ತು ಜಿಲ್ಲಾ ಮಟ್ಟಕ್ಕೆ ತಾಲ್ಲೂಕುಗಳ ಸಂಖ್ಯೆಗಳ ಆಧಾರದ ಉಪನಿರ್ದೇಶಕರು(ಆಡಳಿತ), ಶಾ.ಶಿ.ಇ ರವರಿಗೆ (ಅನುಬಂಧ-I(ಎ)ರಲ್ಲಿ ವಿವರಿಸಿರುವಂತೆ) ಆಯೋಜನಾ ವೆಚ್ಚವನ್ನು ಬಿಡುಗಡೆ ಮಾಡಲಾಗಿದೆ. ಸ್ಪರ್ಧೆಗಳನ್ನು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕೆಳಗಿನ ವೇಳಾಪಟ್ಟಿಯಂತೆ ನಡೆಸಿ ವಿಜೇತರಾದ ಶಿಕ್ಷಕರಿಗೆ ಪ್ರತ್ಯೇಕ ಪ್ರಶಸ್ತಿ ಪತ್ರಗಳನ್ನು, ನಗದು ಬಹುಮಾನವನ್ನು ವಿತರಿಸುವುದು.
2024-25ನೇ ಸಾಲಿನಲ್ಲಿ ನಡೆಸಬೇಕಾದ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳ ವೇಳಾಪಟ್ಟಿ :
ಹಂತಗಳು
ಸ್ಪರ್ಧೆಗಳನ್ನು ನಡೆಸುವ ದಿನಾಂಕ
ಸ್ಪರ್ಧೆಗಳನ್ನು ಆಯೋಜಿಸುವ
ವಿಜೇತರ ಪಟ್ಟಿಯನ್ನು ಸಲ್ಲಿಸುವ ಅಂತಿಮ ದಿನಾಂಕ
ತಾಲ್ಲೂಕು ಮಟ್ಟದ ಸ್ಪರ್ಧೆಗಳು
25-10-2024
ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು
ತಾಲ್ಲೂಕು ಮಟ್ಟದಲ್ಲಿ ಆಯ್ಕೆಯಾದ ಶಿಕ್ಷಕರ ಪಟ್ಟಿಯನ್ನು ಜಿಲ್ಲಾ ಉಪನಿರ್ದೇಶಕರಿಗೆ ಕಳುಹಿಸಲು అంతిమ దినాంక: 04-11-2024 ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಶಿಕ್ಷಕರ ಪಟ್ಟಿಯನ್ನು ನಿಧಿಗಳ ಕಛೇರಿಗೆ
ಮಟ್ಟದ ಸ್ಪರ್ಧೆಗಳು
06-11-2024
ಆಯಾ ಜಿಲ್ಲಾ ಉಪನಿರ್ದೇಶಕರು(ಆಡಳಿತ)
EC: 13-11-2024
ಮಟ್ಟದ
21-11-2024
ಮತ್ತು 22-11-2024
ಉಪನಿರ್ದೇಶಕರು ಹಾಗೂ ప్రభారాభికారిగళు, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಬೆಂಗಳೂರು.
ಸ್ಥಳ ಹಾಗೂ ಇತರೆ ವಿವರಗಳನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು.
ಸರ್ಕಾರಿ/ಅನುದಾನಿತ/ಸರ್ಕಾರದಿಂದ ಮಾನ್ಯತೆ ಹೊಂದಿರುವ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಎಲ್ಲಾ ಶಿಕ್ಷಕರು ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ, ತಾತ್ಕಾಲಿಕವಾಗಿ ಇಲಾಖೆಯ ಬೇರೆ ಹುದ್ದೆಗಳಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ CRP, BRP, ECO, HM ಹಾಗೂ BRC ರವರು ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಒಬ್ಬ ಶಿಕ್ಷಕರು ಒಂದು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಬಹುದು. ಪ್ರಥಮ ಸ್ಥಾನ ಪಡೆದ ಶಿಕ್ಷಕರು ಮಾತ್ರ ಮುಂದಿನ ಹಂತಕ್ಕೆ ಅರ್ಹರಾಗುತ್ತಾರೆ.
2024-25ನೇ ಸಾಲಿನ ಸಹಪಠ್ಯ ಚಟುವಟಿಕೆಗಳ ಸುತ್ತೋಲೆ ಸ್ವೀಕರಿಸಿದ ಕೂಡಲೇ ಎಲ್ಲಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಉಪನಿರ್ದೇಶಕರು. ನೋಡಲ್ ಅಧಿಕಾರಿಗಳನ್ನು ನೇಮಿಸಿ ಸಭೆ ನಡೆಸುವುದು, ಸ್ಪರ್ಧೆಗಳಿಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ವ್ಯವಸ್ಥಿತವಾಗಿ ಪ್ರಾರಂಭಿಸಲು/ನಿರ್ವಹಿಸಲು ಜ್ಞಾಪನಾ ನೀಡುವುದು. ಏನಾದರೂ ಸಮಸ್ಯೆಗಳಿದ್ದಲ್ಲಿ ಪ್ರಾರಂಭದ ಹಂತದಲ್ಲೇ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು. ಸ್ಪರ್ಧೆಗಳನ್ನು ನಿಧಿಗಳ ವತಿಯಿಂದ ನಿಗಧಿಪಡಿಸಿರುವ ವೇಳಾಪಟ್ಟಿಯಂತೆ ಕಡ್ಡಾಯವಾಗಿ ಪೂರ್ಣಗೊಳಿಸುವುದು ಹಾಗೂ ವಿಜೇತ ಶಿಕ್ಷಕರ ಪಟ್ಟಿಯನ್ನು ಸಲ್ಲಿಸುವುದು. ಜಿಲ್ಲಾ ಉಪನಿರ್ದೇಶಕರು ತಮ್ಮ ವ್ಯಾಪ್ತಿಯ ತಾಲ್ಲೂಕುವಾರು ನೋಡಲ್ ಅಧಿಕಾರಿಗಳ ವಿವರ, ದೂರವಾಣಿ ಸಂಖ್ಯೆಯನ್ನು ನಿಧಿಗಳ ಕಛೇರಿಗೆ ಈ ಸುತ್ತೋಲೆ ತಲುಪಿದ ಒಂದು ವಾರದೊಳಗೆ ಕಡ್ಡಾಯವಾಗಿ ಕಳುಹಿಸಲು ತಿಳಿಸಿದೆ.
ತಾಲ್ಲೂಕು ಮತ್ತು ಜಿಲ್ಲಾ ಹಂತದ ಸ್ಪರ್ಧೆಗಳನ್ನು ಆಯೋಜಿಸುವವರು ಸಹಪಠ್ಯ ಚಟುವಟಿಕೆ ಸ್ಪರ್ಧೆಗಳು ನಡೆಯುವ ದಿನಾಂಕ, ಸ್ಥಳ ಮತ್ತು ವೇಳಾಪಟ್ಟಿ ನೀಡಿ, ಕಛೇರಿಯ ಸೂಚನಾ ಫಲಕದಲ್ಲಿ ಮತ್ತು ಸ್ಥಳೀಯ ದಿನಪತ್ರಿಕೆಗಳಲ್ಲಿ ವ್ಯಾಪಕ ಪ್ರಕಟಣೆ ನೀಡುವುದು. ಶಿಕ್ಷಣ ಸಂಯೋಜಕರು ಮತ್ತು ಸಿ.ಆರ್.ಪಿ ರವರ ಮುಖಾಂತರ ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳ ಶಿಕ್ಷಕರಿಗೂ ಸಕಾಲಕ್ಕೆ ಮಾಹಿತಿ ನೀಡುವುದು. (ಸ್ಪರ್ಧೆಗಳ ವಿವರಗಳಿಗೆ ಅನುಬಂಧ-3ನ್ನು ನೋಡಿ). ಶಿಕ್ಷಕರ ಪ್ರತಿಭೆಗಳನ್ನು ಗುರುತಿಸಲು ನಡೆಸಲಾಗುತ್ತಿರುವ ಎಲ್ಲಾ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ/ ಆನುದಾನಿತ ಹಾಗೂ ಮಾನ್ಯತೆ ಪಡೆದ ಅನುದಾನ ರಹಿತ ಎಲ್ಲಾ ಸಂಸ್ಥೆಯ ಶಾಲಾ ಶಿಕ್ಷಕರು ಪಾಲ್ಗೊಳ್ಳುವಂತೆ ಅಗತ್ಯ ಕ್ರಮವಹಿಸುವುದು. ಹಾಗೂ ನೀಡಲಾದ ವೇಳಾಪಟ್ಟಿಯಂತೆ ಸ್ಪರ್ಧೆಗಳನ್ನು ನಡೆಸುವುದು. ತಾಲ್ಲೂಕು ಮಟ್ಟದ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು ಎಂಬ ಮಾಹಿತಿಯನ್ನು ಎಲ್ಲಾ ಶಿಕ್ಷಕರಿಗೆ ನೀಡುವುದು.
ಸ್ಪರ್ಧೆಗಳನ್ನು ನಡೆಸುವ ಮುನ್ನ ಸೂಕ್ತವಾದ ಹಾಗೂ ಅನುಭವಿ ತೀರ್ಪುಗಾರರನ್ನು ಆಯ್ಕೆ ಮಾಡುವುದು, ತೀರ್ಪುಗಾರರನ್ನು ಆಯ್ಕೆ ಮಾಡುವಾಗ ಆಯಾ ವಿಷಯಗಳಲ್ಲಿ ಪರಿಣಿತಿ ಪಡೆದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡುವುದು. ನಿರ್ಣಯಕ್ಕೆ ಅನುಸರಿಸಲಾಗುವ ಮಾನದಂಡಗಳನ್ನು ಕಾರ್ಯಕ್ರಮಕ್ಕೆ ಪೂರ್ವದಲ್ಲಿ ಪ್ರಕಟಣೆ ಮಾಡುವುದು ಮೂವರು ತೀರ್ಪುಗಾರರು ನೀಡುವ ಅಂಕಗಳ ಸರಾಸರಿಯ ಆಧಾರವೆ ಮೇಲೆ ವಿಜೇತರನ್ನು ಆಯ್ಕೆ ಮಾಡಬೇಕು. ತಾಲ್ಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನವನ್ನು ಕಾರ್ಯಕ್ರಮದ ದಿನವೇ ವಿತರಿಸಬೇಕು.
ತಾಲ್ಲೂಕು ಹಂತದಲ್ಲಿ ಆಯ್ಕೆಯಾದ ವಿಜೇತರ ಪಟ್ಟಿಯನ್ನು ಪೂರ್ಣ ವಿಳಾಸದೊಂದಿಗೆ ಕ್ಷೇತ್ರ
ಶಿಕ್ಷಣಾಧಿಕಾರಿಗಳು ತಮ್ಮ ಜಿಲ್ಲೆಯ ಉಪನಿರ್ದೇಶಕರು(ಆಡಳಿತ) ಇವರಿಗೆ ಅನುಬಂಧ-2(ಎ) ಮತ್ತು
ಅನುಬಂಧ-2(ಬಿ)ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಮಾತ್ರ ಭರ್ತಿ ಮಾಡಿ ನಿಗದಿಪಡಿಸಿದ ವೇಳೆಗೆ
ಸಲ್ಲಿತಕ್ಕದ್ದು, ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ವಿಜೇತರ ಪಟ್ಟಿಯನ್ನು ಸುತ್ತೋಲೆಯಲ್ಲಿ ತಿಳಿಸಿರುವಂತೆ ರಾಜ್ಯ
ಮಟ್ಟದ ಕಾರ್ಯಕ್ರಮವನ್ನು ಆಯೋಜಿಸುವ ಉಪನಿರ್ದೇಶಕರು(ಆಡಳಿತ) ಇವರಿಗೆ ಕಳುಹಿಸತಕ್ಕದ್ದು,
ಯಾವುದೇ ಕಾರಣಕ್ಕೂ ಸ್ಪರ್ಧೆಗಳು ನಿಗದಿತ ಅವಧಿ ಮೀರಿ ನಡೆಸಬಾರದು. ಈ ರೀತಿ ಆಗಿದ್ದಲ್ಲಿ ಸಂಬಂಧಿಸಿದ
ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು(ಆಡಳಿತ) ರವರು ಪೂರ್ಣ ಜವಾಬ್ದಾರರಾಗಿರುತ್ತಾರೆ. ಈ
ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು.
ನಿಗದಿತ ದಿನಾಂಕದೊಳಗೆ ಬಿಡುಗಡೆ ಮಾಡಿದ ಮೊತ್ತಕ್ಕೆ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸುವುದು.
ಮೂಲ ವೋಚರ್‌ಗಳನ್ನು ತಮ್ಮ ಕಛೇರಿಯಲ್ಲಿಯೇ ಉಳಿಸಿಕೊಂಡು ಮೇಲಾಧಿಕಾರಿಗಳು ತಪಾಸಣೆಗೆ ಬಂದಾಗ
ಕಡ್ಡಾಯವಾಗಿ ಹಾಜರುಪಡಿಸುವುದು. ಹಾಗೂ ಉಪಯೋಗಿತಾ ಪ್ರಮಾಣ ಪತ್ರವನ್ನು ಮಾತ್ರ ಈ ಕಛೇರಿಗೆ
ಸಲ್ಲಿಸತಕ್ಕದ್ದು.
🟩🟧🟥🟦🟪🟫⬜🟨🔴🟠🟡🟢🔵🟣🟤⚪🟩🗃️🟥🟦🟪🟫🔴🟠🟡🟢🔵🟣⚪⚪⬜🟨

No comments:
Post a Comment