Hedding ; Regarding grant of earning leave to teachers/lecturers on election duty for Lok Sabha General Election-2024...
ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ನಿಮಿತ್ತ ಚುನಾವಣಾ ವಿವಿಧ ಕರ್ತವ್ಯಗಳಿಗೆ ನಿಯೋಜಿಸಿರುವ ಶಿಕ್ಷಕರು/ಉಪನ್ಯಾಸಕರು ಬೇಸಿಗೆ ರಜೆ ಅವಧಿಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಿದ್ದು, ಸದರಿಯವರಿಗೆ ನಾಗರಿಕ ಸೇವಾ ನಿಯಮ 113 (3) ಎ ಮತ್ತು ಬಿ ಪ್ರಕಾರ ಗಳಿಕೆ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ. ಕಾರಣ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸಿರುವ ದಿನಗಳಿಗೆ ಅನುಗುಣವಾಗಿ ನಿಯಮಾನುಸಾರ ಗಳಿಕೆ ರಜೆಯನ್ನು ಮಂಜೂರು ಮಾಡುವ ಕುರಿತು ಅಗತ್ಯ ಕ್ರಮಕೈಕೊಳ್ಳಲು ನಿರ್ದೇಶಿಸಿದೆ.
ಗಳಿಕೆ ರಜೆಯ ಬಗ್ಗೆ ಇನ್ನಷ್ಟು ಮಾಹಿತಿ 👇👇👇👇👇👇👇👇👇👇👇👇👇👇👇👇👇
ಗಳಿಕೆ ರಜೆಯ ಗರಿಷ್ಠ ಮಿತಿ, ಗಳಿಕೆ ರಜೆ ಅಧ್ಯರ್ಪಿಸಿ ರಜೆ ನಗದೀಕರಣ ಸೌಲಭ್ಯ వాగు ನಿವೃತ್ತಿ ಸಮಯದಲ್ಲಿ ಪಡೆಯಬಹುದಾದ ರಜೆ ನಗದೀಕರಣಕ್ಕಾಗಿ ಅಧ್ಯರ್ಪಿಸುವ ಗಳಿಕೆ ರಜೆಯ ಗರಿಷ್ಠ ಮಿತಿ-ಪರಿಷ್ಕರಿಸುವ ಬಗ್ಗೆ.
ಪ್ರಸ್ತುತ ಜಾರಿಯಲ್ಲಿರುವ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 112(3)ನ್ನು ನಿಯಮ 113(5)ರೊಂದಿಗೆ ಓದಲಾದಂತೆ, ಪ್ರತಿ ಹಿಂದಿನ ವರ್ಷದ ಕೊನೆಯಲ್ಲಿ ಸರ್ಕಾರಿ ನೌಕರನ ಲೆಕ್ಕದಲ್ಲಿರುವ ರಜೆಯನ್ನು ಮುಂದಿನ ಅರ್ಧವರ್ಷಕ್ಕೆ ಮುಂದುವರೆಸತಕ್ಕದ್ದಾಗಿದ್ದು ಹಾಗೆ ಮುಂದುವರೆಸಿದ ರಜೆ ಮತ್ತು ಅರ್ಧವರ್ಷದ ರಜೆ ಇವೆರಡೂ ಸೇರಿ 240 ದಿನಗಳ ಮಿತಿಗೊಳಪಟ್ಟು ಸಂಗ್ರಹಣೆಗೆ ಅವಕಾಶವಿರುತ್ತದೆ ಹಾಗೂ ನಿಯಮ 118 ಎ (1)ರನ್ನಯ ವಯೋನಿವೃತ್ತಿಗೊಳ್ಳುವ ಸರ್ಕಾರಿ ನೌಕರನು ನಿವೃತ್ತಿ ದಿನಾಂಕದಂದು ಆತನ ಲೆಕ್ಕದಲ್ಲಿರುವ ಗಳಿಕೆ ರಜೆಯ ಗರಿಷ್ಠ 240 ದಿನಗಳ ಮಿತಿಗೊಳಪಟ್ಟು ರಜಾ ವೇತನಕ್ಕೆ ಸಮನಾದ ನಗದು ಮಂಜೂರು ಮಾಡಲು ಅವಕಾಶವಿರುತ್ತದೆ. ಮುಂದುವರೆದು ನಿಯಮ 118(2)ರನ್ವಯ ಸರ್ಕಾರಿ ನೌಕರನು ಎರಡು ವರ್ಷಗಳ ಬ್ಲಾಕ್ ಅವಧಿಯಲ್ಲಿ ಆತನ ಜಮೆಯಲ್ಲಿರುವ 30 ದಿನಗಳಿಗೆ ಮೀರದಂತೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ, ರಜಾ ವೇತನಕ್ಕೆ ಸಮನಾದ ನಗದು ತೆಗೆದುಕೊಳ್ಳುವುದಕ್ಕೆ ಅವಕಾಶವಿರುತ್ತದೆ.
2011 ರ ಅಧಿಕಾರಿ ವೇತನ ಸಮಿತಿಯು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 113(5)ರನ್ವಯ ಗಳಿಕೆ ರಜೆಯ ಸಂಗ್ರಹಣೆಯ ಗರಿಷ್ಟ ಮಿತಿ 240 ದಿನಗಳನ್ನು 300 ದಿನಗಳಿಗೆ ಹೆಚ್ಚಿಸಲು ಮತ್ತು ನಿಯಮ 118 ಎ (1)ರನ್ವಯ ವಯೋನಿವೃತ್ತನಾಗುವ ಸರ್ಕಾರಿ ನೌಕರನ ನಿವೃತ್ತಿ ಸಮಯದಲ್ಲಿ ನಗದೀಕರಣಕ್ಕಾಗಿ ಅಧ್ಯರ್ಪಿಸುವ ಗಳಿಕೆ ರಜೆಯ ಗರಿಷ್ಟ ಮಿತಿಯನ್ನು 240 ದಿನಗಳಿಂದ 300 ದಿನಗಳವರೆಗೆ ಹೆಚ್ಚಿಸಲು ಹಾಗೂ ನಿಯಮ 118(2)ರನ್ವಯ ಪ್ರತಿ ವರ್ಷವೂ ಸರ್ಕಾರಿ ನೌಕರನ ಜಮೆಯಲ್ಲಿರುವ ರಜೆಯಲ್ಲಿ 15 ದಿನಗಳಿಗೆ ಮೀರದಂತೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಸೌಲಭ್ಯ ನೀಡಲು ಶಿಫಾರಸ್ಸು ಮಾಡಿದ್ದು, ಈ ಶಿಫಾರಸ್ಸುಗಳನ್ನು ಸರ್ಕಾರವು ಅಂಗೀಕರಿಸಿದೆ. ಮತ್ತು ಅದರಂತೆ ಈ ಕೆಳಕಂಡ ಆದೇಶವನ್ನು ಹೊರಡಿಸಿದೆ.
ಸರ್ಕಾರಿ ಆದೇಶ ಸಂಖ್ಯೆ: ಆಇ 5 ಸೇನಿಸೇ 2012,ಬೆಂಗಳೂರು, ದಿನಾಂಕ: 14.06.2012,
ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 112(3)ಮತ್ತು 113(5)ರನ್ವಯ
ಪ್ರತಿ ಅರ್ಧ ವರ್ಷಗಳಲ್ಲಿ ಜಮೆ ಮಾಡುವ ಗಳಿಕೆ ರಜೆ ಮತ್ತು ಶೇಖರವಾದ ಗಳಿಕೆ ರಜೆಯು ಸೇರಿದಂತೆ ರಜಾ ಸಂಗ್ರಹಣೆಯ ಗರಿಷ್ಟ ಮಿತಿಯನ್ನು ದಿನಾಂಕ 01.04.2012ರಿಂದ ಜಾರಿಗೆ ಬರುವಂತೆ 240 ದಿನಗಳ ಬದಲಾಗಿ 300 ದಿನಗಳಿಗೆ ಹೆಚ್ಚಿಸಲಾಗಿದೆ.
2 ಕ.ನಾ.ಸೇ.ನಿಯಮಾವಳಿ, ನಿಯಮ 118ಎ(1)ರನ್ವಯ ವಯೋನಿವೃತ್ತನಾಗುವ 건영 ನೌಕರನ ನಿವೃತ್ತಿ ಸಮಯದಲ್ಲಿ ನಗದೀಕರಣಕ್ಕಾಗಿ ಅಧ್ಯರ್ಪಿಸುವ ಗಳಿಕೆ ರಜೆಯ ಗರಿಷ್ಠ ಮಿತಿಯನ್ನು ದಿ:1-4-2012 ರಿಂದ ಜಾರಿಗೆ ಬರುವಂತೆ 240 ದಿನಗಳಿಂದ 300 ದಿನಗಳವರೆಗೆ ಹೆಚ್ಚಿಸಲಾಗಿದೆ.
3 ಕ.ನಾ.ಸೇ.ನಿಯಮಾವಳಿ, ನಿಯಮ 118(2) ಸೌಲಭ್ಯ ಪಡೆಯುವ ಬದಲಾಗಿ, ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ (ಆಯಾ ವರ್ಷದ ಜನವರಿ 1ರಿಂದ ಡಿಸೆಂಬರ್ 31ರ ಒಳಗೆ) 15 ದಿನಗಳಿಗೆ ಮೀರದ ಗಳಿಕೆ ರಜೆಯನ್ನು ಅಧ್ಯರ್ಪಿಸಿ ರಜಾ ವೇತನಕ್ಕೆ ಸಮನಾದ ನಗದೀಕರಣ ಪಡೆಯಬಹುದಾದ ಸೌಲಭ್ಯವನ್ನು ದಿನಾಂಕ 01.01.2013ರಿಂದ ಜಾರಿಗೆ ಬರುವಂತೆ ಆದೇಶಿಸಿದೆ.
4 ಕ.ನಾ.ಸೇ.ನಿಯಮಾವಳಿ, ನಿಯಮ 112, 113, 118 ಮತ್ತು 118ಎ ರಲ್ಲಿ ಗಳಿಕೆ ರಜೆ ಮತ್ತು ಗಳಿಕೆ ರಜೆ ನಗದೀಕರಣ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಧಿಸಿರುವ ಇತರೇ ಷರತ್ತುಗಳು ಮುಂದುವರೆಯುತ್ತವೆ.
5 ಈ ಆದೇಶವು ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಸಂಸ್ಥೆಗಳ ನೌಕರರಿಗೂ ಅನ್ವಯಿಸುತ್ತದೆ.
6 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 112, 113, 118 ಮತ್ತು 118ಎ ಗಳಿಗೆ ಅವಶ್ಯಕ ತಿದ್ದುಪಡಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು.

No comments:
Post a Comment