2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ 20 ಹೋಬಳಿಗಳಲ್ಲಿ ಹೊಸ ವಸತಿ ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರದ ಆದೇಶ ಸಂಖ್ಯೆ:ಸಕಇ 108 ಎಂಡಿಎಸ್ 2024, ದಿನಾಂಕ:24.06.2024ರಲ್ಲಿ ಮಂಜೂರು ಮಾಡಿ ಆದೇಶಿಸಲಾಗಿರುತ್ತದೆ. ಸದರಿ ಆದೇಶದಲ್ಲಿನ 20 ಶಾಲೆಗಳನ್ನು ವಿಧಾನಸಭಾ ಕ್ಷೇತ್ರವಾರು ಪ್ರತಿ ಹೋಬಳಿಯಲ್ಲಿ ವಸತಿ ಶಾಲೆಗಳನ್ನು ಪ್ರಾರಂಭಿಸಲು ಒಟ್ಟಾರೆ ಹೋಬಳಿಗಳ ಸಂಖ್ಯೆಯಷ್ಟು ವಸತಿ ಶಾಲೆಗಳನ್ನು ಪರಿಗಣಿಸಲಾಗಿದ್ದು, ಅದರಂತೆ ವಿಧಾನಸಭಾ ಕ್ಷೇತ್ರವಾರು ಒಟ್ಟಾರೆ ಹೋಬಳಿ ಸಂಖ್ಯೆಯಲ್ಲಿ ಹೋಬಳಿಗಳ ಸಂಖ್ಯೆಗಿಂತ ಕಡಿಮೆ ವಸತಿ ಶಾಲೆಗಳು ಇರುವ ವಿಧಾನಸಭಾ ಕ್ಷೇತ್ರಗಳಲ್ಲಿನ ಹೋಬಳಿಗಳಲ್ಲಿ ಹೊಸದಾಗಿ ವಸತಿ ಶಾಲೆಗಳನ್ನು ಪ್ರಾರಂಭಿಸಬೇಕಾಗಿರುತ್ತದೆ. ಅದರಂತೆ, ವಿಧಾನ ಸಭಾ ಕ್ಷೇತ್ರದ ಹೋಬಳಿಗಳ ಸಂಖ್ಯೆಗಳಿಗನುಗುಣವಾಗಿ ಒಟ್ಟು ಶಾಲೆಗಳನ್ನು ಪರಿಗಣಿಸಿದಾಗ 21 ಹೋಬಳಿಗಳಲ್ಲಿ ವಸತಿ ಶಾಲೆಗಳು ಇರುವುದಿಲ್ಲ. ಆದುದರಿಂದ, 21 ಹೋಬಳಿಗಳಲ್ಲಿನ 20 ಹೋಬಳಿಗಳಲ್ಲಿ ವಸತಿ ಶಾಲೆಗಳನ್ನು ಆಯ್ಕೆ ಮಾಡಬೇಕಾಗಿರುತ್ತದೆ.
ಈಗಾಗಲೇ ಆದೇಶವನ್ನು ಹೊರಡಿಸಲಾಗಿರುವ ಪಟ್ಟಿಯಲ್ಲಿನ ವಸತಿ ಶಾಲೆಗಳು ವಿಧಾನ ಸಭಾ ಕ್ಷೇತ್ರವಾರು ಒಟ್ಟಾರೆ ಹೋಬಳಿಗಳಲ್ಲಿನ ಸಂಖ್ಯೆಯಷ್ಟು ಶಾಲೆಗಳು ಈಗಾಗಲೇ ಸದರಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಇರುವುದರಿಂದ ಮತ್ತು ಸದರಿ ವಿಧಾನ ಸಭಾ ಕ್ಷೇತ್ರಗಳಿಗೆ ವಸತಿ ಶಾಲೆಗಳು ಹೆಚ್ಚುವರಿಯಾಗುವುದರಿಂದ ಪ್ರಸ್ತುತ ಆಯ್ಕೆ ಮಾಡಲಾಗಿರುವ ಹೋಬಳಿಗಳಲ್ಲಿ ಹೊಸದಾಗಿ ಶಾಲೆಗಳನ್ನು ಪ್ರಾರಂಭಿಸಬೇಕಾಗಿರುತ್ತದೆ. ಅದರಂತೆ, 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ 20 ಹೋಬಳಿಗಳಲ್ಲಿ ಹೊಸ ಶಾಲೆಗಳನ್ನು ಪ್ರಾರಂಭಿಸಲು

No comments:
Post a Comment