Friday, October 4, 2024

KSP 402 PSI Exam paper 2 Key answer 2024

  Wisdom News       Friday, October 4, 2024
Hedding ; 402 PSI Exam Key Answer 2024

ಪೋಲಿಸ್ ಇಲಾಖೆಯಲ್ಲಿನ ಪಿ.ಎಸ್.ಐ (402) ಹುದ್ದೆಗಳಿಗೆ ದಿನಾಂಕ 03.10.2024 ರಂದು ಪರೀಕ್ಷೆಯನ್ನು ನಡೆಸಲಾಗಿದ್ದು, ಸದರಿ ಪರೀಕ್ಷೆಯ ಪತ್ರಿಕೆ-2 ರ ಕೀ ಉತ್ತರಗಳನ್ನು ಕೆಇಎ ವೆಬ್‌ ಸೈಟ್‌ನಲ್ಲಿ http://kea.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಪ್ರಕಟಿಸಿರುವ ಕೀ ಉತ್ತರಗಳಿಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ, ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್‌ನಲ್ಲಿ ಒದಗಿಸಲಾದ ಆನ್‌ಲೈನ್ ಲಿಂಕ್‌ನಲ್ಲಿ ಮಾತ್ರ ದಿನಾಂಕ 06.10.2024ರ ಸಂಜೆ 5.00 ಗಂಟೆಯೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.

ಆಕ್ಷೇಪಣೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆಗಳ ವಿವರಗಳನ್ನು ಹಾಗೂ ಪೂರಕ ದಾಖಲೆಗಳನ್ನು PDF ರೂಪದಲ್ಲಿ ಸಲ್ಲಿಸಬೇಕು. ಸಲ್ಲಿಸಲಾಗುವ ಪ್ರತಿ ಆಕ್ಷೇಪಣೆಗೆ ರೂ. 100 ನ್ನು ಪಾವತಿಸತಕ್ಕದ್ದು ಹಾಗೂ ಆಕ್ಷೇಪಣೆ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. ಮೇಲ್ಕಂಡ ನಿಗದಿತ ಮಾಹಿತಿಗಳನ್ನು ಸಲ್ಲಿಸದ ಅಥವಾ ಶುಲ್ಕ ಪಾವತಿಸದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ವಿಷಯ ತಜ್ಞರ ಸಮಿತಿಯು ನಿರ್ಧರಿಸಿ, ತೀರ್ಮಾನಿಸುವ ಕೀ-ಉತ್ತರಗಳು ಅಂತಿಮವಾಗಿರುತ್ತವೆ.



logoblog

Thanks for reading KSP 402 PSI Exam paper 2 Key answer 2024

Previous
« Prev Post

No comments:

Post a Comment