Wednesday, October 16, 2024

Central Government Employees Dearness Allowance Hike

  Wisdom News       Wednesday, October 16, 2024
Hedding ; Central Government Employees Dearness Allowance Hike

ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಸಿಹಿ ಸುದ್ದಿ ಕೊಟ್ಟಿದೆ. ಶೇ 3ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಪ್ರಸ್ತಾವನೆಗೆ ಕೇಂದ್ರದ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಈ ವರ್ಷದ ಜುಲೈ 1ರಿಂದಲೇ ಇದು ಪೂರ್ವಾನ್ವಯವಾಗಲಿದೆ.

ಇದಕ್ಕಾಗಿ ಕೇಂದ್ರಕ್ಕೆ ₹ 9,448 ಕೋಟಿ ಹೊರೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಮೂಲ ವೇತನದ ಶೇ 53ರಷ್ಟಾಗಿದೆ. ಹಣದುಬ್ಬರ ಹೆಚ್ಚಳದ ನಡುವೆ ತುಟ್ಟಿ ಭತ್ಯೆ ಹೆಚ್ಚಳವು ಕೇಂದ್ರದ ನೌಕರರ ಹೊರೆಯನ್ನು ತಗ್ಗಿಸಲಿದೆ ಎಂದು ವರದಿ ತಿಳಿಸಿದೆ.

ಉದಾಹರಣೆಗೆ ಮಾಸಿಕ ₹40,000 ಮೂಲ ವೇತನ ಪಡೆಯುತ್ತಿರುವ ನೌಕರನಿಗೆ ಶೇ 3ರಷ್ಟು ತುಟ್ಟಿ ಭತ್ಯೆ ಹೆಚ್ಚಳದಿಂದ ಮಾಸಿಕ ₹1,200 ಹೆಚ್ಚುವರಿಯಾಗಿ ಸಿಗಲಿದೆ. ಈ ಮೂಲಕ ಒಟ್ಟು ತುಟ್ಟಿ ಭತ್ಯೆ ₹20,000ದಿಂದ ₹21,200ಕ್ಕೆ ಹೆಚ್ಚಳವಾಗಲಿದೆ. ಪಿಂಚಣಿದಾರರಿಗೂ ಇದರ ಅನುಕೂಲ ಸಿಗಲಿದೆ.

ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ನೌಕರರನ್ನು ಬೆಂಬಲಿಸಲು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ (ಎಐಸಿಪಿಐ) ಆಧಾರದ ಮೇಲೆ ತುಟ್ಟಿ ಭತ್ಯೆ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ.

ಈ ವರ್ಷದ ಮಾರ್ಚ್ ತಿಂಗಳಲ್ಲಿ ಶೇ 4ರಷ್ಟು ತುಟ್ಟಿ ಭತ್ಯೆ ಹೆಚ್ಚಳವಾಗಿತ್ತು.

ತುಟ್ಟಿಭತ್ಯೆ ಎನ್ನುವುದು ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಪಾವತಿಸುವ ಜೀವನ ವೆಚ್ಚದ ಹೊಂದಾಣಿಕೆಯ ಮೊತ್ತವಾಗಿದೆ. ಏರುತ್ತಿರುವ ಬೆಲೆಗಳಿಗೆ ಅನುಗುಣವಾಗಿ ಸಂಬಳ ಮತ್ತು ಪಿಂಚಣಿಗಳನ್ನು ಸರಿಹೊಂದಿಸುವ ಮೂಲಕ ಹಣದುಬ್ಬರದ ಪ್ರಭಾವವನ್ನು ತಗ್ಗಿಸಲು ಸಹಾಯ ಮಾಡುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಎಐಸಿಪಿಐನಿಂದ ಅಳೆಯಲಾದ ಹಣದುಬ್ಬರ ದರವನ್ನು ಆಧರಿಸಿ ವರ್ಷಕ್ಕೆ ಎರಡು ಬಾರಿ ತುಟ್ಟಿ ಭತ್ಯೆಯನ್ನು ಪರಿಷ್ಕರಿಸಲಾಗುತ್ತದೆ.





logoblog

Thanks for reading Central Government Employees Dearness Allowance Hike

Previous
« Prev Post

No comments:

Post a Comment