Hedding ; Budget for 2025-26 Rajswa - About preparation of deposit...
2025-26 ನೇ ಸಾಲಿನ ಆಯವ್ಯಯ ರಾಜಸ್ವ - ಜಮೆ ತಯಾರಿಕೆಯ ಬಗ್ಗೆ.
...
2025-26 ನೇ ಸಾಲಿನ ರಾಜಸ್ವ - ಜಮೆ ತಯಾರಿಸಲು ಸೂಚನೆಗಳನ್ನು ಈ ಕೆಳಕಂಡಂತೆ
ನೀಡಲಾಗಿದೆ:-
ಎ. ಜಮೆ ಅಂದಾಜುಗಳು:
1. ತೆರಿಗೆ ರಾಜಸ್ತ್ರ:
৬) ರಾಜ್ಯ ಸರ್ಕಾರದ ಸಂಬಂಧಿಸಿದ ಅಧಿನಿಯಮಗಳ ಅಡಿಯಲ್ಲಿ ವಿಧಿಸಲಾಗುವ ತೆರಿಗೆ ದರ, ಸುಂಕ ಮತ್ತು ಶುಲ್ಕದ ಪ್ರಸಕ್ತ ದರದ ಆಧಾರದ ಮೇಲೆ ರಾಜ್ಯ ತೆರಿಗೆ ಸ್ವೀಕೃತಿಗಳ ಅಂದಾಜುಗಳು ಇರತಕ್ಕದ್ದು. ಈ ಮೊದಲು ರೂಪಿಸಿದ ಅಂದಾಜುಗಳ ಮೇಲೆ ಪ್ರಸಕ್ತ ವರ್ಷದ ಪರಿಷ್ಕೃತ ಅಂದಾಜುಗಳನ್ನು ತಯಾರಿಸುವಾಗ ಅಂದಾಜು ತಯಾರಿಸುವ ಅಧಿಕಾರಿಗಳು, ನಿಗದಿಪಡಿಸಿದ ಗುರಿ, ವಾಸ್ತವಿಕ ಪ್ರಗತಿ ಹಾಗೂ ಆಯವ್ಯಯ ಅಂದಾಜುಗಳನ್ನು ಅಂತಿಮಗೊಳಿಸಿ ಮಂಡಿಸಿದ ತರುವಾಯ ವಿಧಾನ ಮಂಡಲವು ಜಾರಿಗೆ ತಂದ ಕಾನೂನುಗಳಿಂದಾಗಿ ಈಗಿನ ತೆರಿಗೆಗಳನ್ನು ಹೆಚ್ಚಿಸಿದ್ದರ ಪರಿಣಾಮವಾಗಿ ನಿರೀಕ್ಷಿಸಿದ ಹೆಚ್ಚುವರಿ ಆದಾಯ, ತೆರಿಗೆಗಳನ್ನು ರದ್ದುಪಡಿಸಿದ ಅಥವಾ ಇಳಿಸಿದ್ದರ ಪರಿಣಾಮವಾಗಿ ಆಗಿರುವ ರಾಜಸ್ವ ನಷ್ಟದ ಅಂದಾಜು ಮುಂತಾದ ಮುಖ್ಯ ಅಂಶಗಳನ್ನು ಗಮನದಲ್ಲಿಡತಕ್ಕದ್ದು.
ಆ) ಹಾಗೆಯೇ ಮುಂದಿನ ಆರ್ಥಿಕ ವರ್ಷದ ಆಯವ್ಯಯ ಅಂದಾಜುಗಳು ಕೇವಲ ಪ್ರಸಕ್ತ ವರ್ಷಕ್ಕೆ ತಯಾರಿಸಿದ ಪರಿಷ್ಕೃತ ಅಂದಾಜುಗಳ ಪುನರಾವರ್ತನೆಯಾಗಬಾರದು. ಅಂದರೆ, ವಸೂಲಾಗಬೇಕಾದ ಬಾಕಿ ತೆರಿಗೆ, ಮುಂದಿನ ವರ್ಷದ ಅಂದಾಜು, ತೆರಿಗೆ ರಾಜಸ್ವಕ್ಕೆ ಸಂಬಂಧಿಸಿದಂತೆ ಸಾಧಾರಣವಾಗಿ ಹೆಚ್ಚಾಗಬಹುದಾದ ಬೆಳವಣಿಗೆ ಮತ್ತು ಹಿಂದಿನ ವರ್ಷಗಳ ಕಾರ್ಯ ಸಾಧನೆ, ಪ್ರಸಕ್ತ ವರ್ಷದ
ವಾಸ್ತವಿಕಗಳ ಪ್ರಗತಿ / ಪ್ರವೃತ್ತಿ ಮತ್ತು ಹಿಂದಿನ ಕಂಡಿಕೆಯಲ್ಲಿ ಉಲ್ಲೇಖಿಸಲಾದಂತೆ ತೆರಿಗೆ ವ್ಯವಸ್ಥೆಗೆ ಸಂಬಂಧಿಸಿದ ಹೊಸ ಕ್ರಮಗಳಿಂದಾದ ಪರಿಣಾಮ ಮುಂತಾದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
ಇ) ಯಾವುದೇ ವಸೂಲಾತಿಗೆ ಸಂಬಂಧಿಸಿದಂತೆ ಬೇಡಿಕೆ, ವಸೂಲಾತಿ ಮತ್ತು ಶಿಲ್ಕು (Demand, collection & Balance) ವಿವರಣಾ ಪಟ್ಟಿಯನ್ನು ತೆರಿಗೆ ರಾಜಸ್ವ ಅಂದಾಜುಗಳ ಜೊತೆಯಲ್ಲಿ ಕಳುಹಿಸಬೇಕು. ವರ್ಷಾವಾರು ಬಾಕಿಯನ್ನು ಲಗತ್ತಿಸಿರುವ ಅನುಬಂಧ-1ರಂತೆ ಪ್ರತ್ಯೇಕವಾಗಿ ತೋರಿಸಬೇಕು.
ಈ) ಹೊಸ ತೆರಿಗೆಗಳನ್ನು ಪ್ರಸ್ತಾಪಿಸುವ ಮೂಲಕವಾಗಲೀ ಅಥವಾ ಅಸ್ತಿತ್ವದಲ್ಲಿರುವ ತೆರಿಗೆ ಸ್ವರೂಪಗಳ ಪರಿಷ್ಕರಣೆಯಿಂದಾಗಲೀ ಹೆಚ್ಚುವರಿ ಸಂಪನ್ಮೂಲಗಳನ್ನು ಸಂಗ್ರಹಿಸುವ ಬಗ್ಗೆ ಪರಿಶೀಲಿಸಿ ಇಲಾಖಾ ಮುಖ್ಯಸ್ಥರುಗಳು ಸರ್ಕಾರಕ್ಕೆ ತಿಳಿಸಬೇಕು.
2) ತೆರಿಗೆಯೇತರ ರಾಜಸ್ಯ:
(ಅ) ರಾಜಸ್ವ ಸ್ವೀಕೃತಿಯಲ್ಲಿ ತೆರಿಗೆಯೇತರ ರಾಜಸ್ವದ ಪಾಲು ಹಿಂದಿನ ಹಲವಾರು ವರ್ಷಗಳಿಂದಲೂ ಹೆಚ್ಚಳವಾಗುತ್ತಿಲ್ಲ. ಆಡಳಿತ ಇಲಾಖೆಗಳು ಬಳಕೆ ಶುಲ್ಕಗಳನ್ನು ಪರಿಷ್ಕರಿಸದಿರುವುದು, ಕಾಲಕಾಲಕ್ಕೆ ಕ್ರಮಬದ್ಧವಾಗಿ ನಡೆಸಬೇಕಾಗಿದ್ದ ಮೇಲ್ವಿಚಾರಣೆಯ ಕೊರತೆ ಇವುಗಳಿಂದ ತೆರಿಗೆಯೇತರ ರಾಜಸ್ವವು ನಿಶ್ಚಲಗೊಳ್ಳಲು ಮುಖ್ಯ ಕಾರಣಗಳಲ್ಲೊಂದಾಗಿದೆ. ಬಳಕೆ ಶುಲ್ಕಗಳ ಪರಿಷ್ಕರಣೆಯು ಹೂಡುವಳಿ ವೆಚ್ಚಕ್ಕೆ ಸೂಚ್ಯ ಸಂಪರ್ಕ (Index Linked) ಹೊಂದಿರಬೇಕು ಮತ್ತು ಕಾಲ ಕಾಲಕ್ಕೆ ಪರಿಷ್ಕರಿಸುವ ಕಾರ್ಯವಿಧಾನವು ಸ್ವಯಂಚಾಲಿತವಾಗಿರಬೇಕೆಂದು ಹಣಕಾಸು ಆಯೋಗಗಳು ಶಿಫಾರಸ್ಸು ಮಾಡಿರುತ್ತವೆ. ಹಾಗೆಯೇ ಆಡಳಿತ ಸುಧಾರಣಾ ಆಯೋಗದ ವರದಿಯಲ್ಲೂ ಸಹ ಎಲ್ಲಾ ಇಲಾಖೆಗಳು ತಮ್ಮ ಇಲಾಖೆಗಳ ತೆರಿಗೆಯೇತರ ರಾಜಸ್ವಗಳನ್ನು ಪರಿಶೀಲಿಸಿ ಕಳೆದ 3 ವರ್ಷಗಳಿಂದ ಪರಿಷ್ಕರಣೆಯಾಗದೇ ಇದ್ದಲ್ಲಿ, ಕೂಡಲೇ ತೆರಿಗೆಯೇತರ ರಾಜಸ್ವ ದರಗಳನ್ನು ಈಗಿರುವ ಹಣದುಬ್ಬರದ ದರಕ್ಕೆ ಅನುಗುಣವಾಗಿ ಪರಿಷ್ಕರಿಸುವಂತೆ ಶಿಫಾರಸ್ಸು ಮಾಡಿರುತ್ತದೆ.
(ಆ) ಆದ್ದರಿಂದ, ಎಲ್ಲಾ ಇಲಾಖಾ ಮುಖ್ಯಸ್ಥರು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ತೆರಿಗೆಯೇತರ ಆದಾಯದ ದರಗಳನ್ನು ಕಳೆದ ಮೂರು ವರ್ಷಗಳಲ್ಲಿ ಪರಿಷ್ಕರಿಸಿದ್ದಲ್ಲಿ, ಪರಿಷ್ಕರಿಸಿದ ವರ್ಷ, ಪರಿಷ್ಕೃತ ದರ ಮುಂತಾದ ವಿವರಗಳೊಂದಿಗೆ 2025-26 ನೇ ಸಾಲಿನ ತೆರಿಗೆಯೇತರ ರಾಜಸ್ವ ಅಂದಾಜುಗಳನ್ನು ಸಲ್ಲಿಸುವುದು, 2023-24 ಮತ್ತು 2024-25ನೇ ಸಾಲಿನಲ್ಲಿ ಬಹಳ ಇಲಾಖೆಗಳು ಹಲವಾರು ವರ್ಷಗಳ
ನಂತರ ಸೆಸ್ / ಶುಲ್ಕಗಳು / ಬಳಕೆದಾರರ ಶುಲ್ಕಗಳನ್ನು ಪರಿಷ್ಕರಿಸಿವೆ. ಇದನ್ನು 2025-26ರ ತೆರಿಗೆಯೇತರ ಸ್ವೀಕೃತಿಗಳಿಗೆ ಸಹ ಪರಿಗಣಿಸಬೇಕು. ಆದರೆ, ಇನ್ನೂ ಕೆಲವು ಇಲಾಖೆಗಳು ಇದನ್ನು ಮಾಡಿರುವುದಿಲ್ಲ ಮತ್ತು 2025-26 ರ ಆರ್ಥಿಕ ಸಾಲಿನ ಆರಂಭಕ್ಕೂ ಮುನ್ನ ಈ ಚಟುವಟಿಕೆಗಳನ್ನು ಕೈಗೊಳ್ಳಲು ಮತ್ತು 2025-26 ರ ತೆರಿಗೆಯೇತರ ಸ್ವೀಕೃತಿಗಳಿಗೆ ಇದನ್ನು ಪರಿಗಣಿಸುವಂತೆ ಸೂಚಿಸಲಾಗಿದೆ.
(ಇ) ಪ್ರಸ್ತುತ ಮಟ್ಟದ ಸಂಗ್ರಹಣೆಗಿಂತ ತೆರಿಗೆಯೇತರ ಆದಾಯದ ಅಡಿಯಲ್ಲಿ ಸಂಗ್ರಹಣೆಯನ್ನು ಹೆಚ್ಚಿಸಲು ನಿರ್ಧರಿತ ಪ್ರಯತ್ನಗಳನ್ನು ಮಾಡಬೇಕು. ಆದ್ದರಿಂದ, ಎಲ್ಲಾ ಆಡಳಿತ ಇಲಾಖೆಗಳು ತೆರಿಗೆಯೇತರ ಆದಾಯದ ಅಂದಾಜುಗಳನ್ನು ಸಲ್ಲಿಸುವ ಮುನ್ನ ತೆರಿಗೆಯೇತರ ಆದಾಯದ ಮೂಲಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಬೇಕು ಮತ್ತು ದರಗಳು / ಬಳಕೆದಾರ ಶುಲ್ಕಗಳನ್ನು ಪರಿಷ್ಕರಿಸಲು ಕ್ರಮಕೈಗೊಳ್ಳಬೇಕು.
(ಈ) ಅಂತೆಯೇ ಸಾಲ ಮರುಪಾವತಿಯ ಷರತ್ತು ಮತ್ತು ನಿಬಂಧನೆಗಳು ಬಂಡವಾಳ ಹೂಡಿಕೆ ಮತ್ತು ಮರುಪಾವತಿ ಅವಧಿ ಮುಂತಾದ ಅಂಶಗಳನ್ನು ಪರೀಶೀಲಿಸಿ ವಿವಿಧ ಸಾರ್ವಜನಿಕ ಉದ್ದಿಮೆಗಳು, ಸಹಕಾರಿ ಸಂಘಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಬಡ್ಡಿ ಸ್ವೀಕೃತಿಗಳು, ಲಾಭಾಂಶಗಳು, ಬಂಡವಾಳ ಸಾಲ ವಸೂಲು ಮಾಡಲು ಮತ್ತು ಇತರೇ ಇಲಾಖಾ ಸಾಲಗಳನ್ನು ವಸೂಲು ಮಾಡಲು ಕ್ರಮವಹಿಸುವುದು. ಇದರ ಆಧಾರದ ಮೇಲೆ ಇಲಾಖೆಗಳು ಆಯವ್ಯಯದಲ್ಲಿ ಸೇರಿಸಲು ವಾಸ್ತವಿಕ ಮಾಹಿತಿಯನ್ನು ಕಳುಹಿಸಿಕೊಡತಕ್ಕದ್ದು, ಆಡಳಿತ ಇಲಾಖೆಗಳಲ್ಲಿ ಆಯವ್ಯಯ ಅಂದಾಜುಗಳಲ್ಲಿನ ಗುರಿ ಸಾಧನೆಗೆ ಕಟ್ಟುನಿಟ್ಟಿನ ಮೇಲ್ವಿಚಾರಣಾ ಕಾರ್ಯ ವಿಧಾನವನ್ನು ಅಳವಡಿಸಿಕೊಳ್ಳುವುದು.
🟧🟧🟫🟪🟪🔵🔴⚪🔵🟪🟢🔴🟦🟨⚪🟩🟣⬜🟦⚪🔴🔵🟡🟢🟠🟢🔴🟦🟨🟩🟩🟣🟤🟥🟥🟥🟥🟨🔴🟫🟫🟧🟪🟪🟢🟢🟢🟢🟤🟤🟣🟣🟣🟤⚪🔴🔴🔵🔵🟢🟠
No comments:
Post a Comment