Hedding ; 2024 - Calendar of activities for all months of the 25th year school term...
ಮುಖ್ಯ ಶಿಕ್ಷಕರ ಜವಾಬ್ದಾರಿಗಳು
* ಬೆಳಗಿನ ಪ್ರಾರ್ಥನಾ ಅವಧಿ ಉಪಕ್ರಮದ ಅನುಷ್ಠಾನಕ್ಕೆ ಶಿಕ್ಷಕರ ಸಭೆ ಆಯೋಜನೆ.
ಉಪಕ್ರಮದ ಅನುಷ್ಠಾನಕ್ಕೆ ಶಿಕ್ಷಕರಿಗೆ ಜವಾಬ್ದಾರಿ ಹಂಚಿಕೆ.
ಬೆಳಗಿನ ಪ್ರಾರ್ಥನಾ ಅವಧಿ ಉಪಕ್ರಮದ ಅನುಷ್ಠಾನಕ್ಕಾಗಿ ಕ್ಯಾಲೆಂಡರ್ ಚಟುವಟಿಕೆಗಳ
* ಪ್ರತಿ ಶನಿವಾರ ದತ್ತಾಂಶವನ್ನು ಗೂಗಲ್ ಫಾರ್ಮ್ ಮೂಲಕ ಡಯಟ್ ಗೆ ಕಳುಹಿಸುವುದು.
• ಉಪಕ್ರಮಕ್ಕೆ ಸಂಬಂಧಿಸಿದಂತೆ ಉತ್ತಮ ಅಭ್ಯಾಸಗಳನ್ನು ಸಿ.ಆರ್.ಪಿ ರವರೊಂದಿಗೆ ಹಂಚಿಕೊಳ್ಳುವುದು.
ಶಿಕ್ಷಕರ ಜವಾಬ್ದಾರಿಗಳು
ಪ್ರಾರ್ಥನಾ ಅವಧಿಯ ಚಟುವಟಿಕೆಗಳ ಅನುಷ್ಠಾನದಲ್ಲಿ ಮುಖ್ಯ ಶಿಕ್ಷಕರಿಗೆ ಬೆಂಬಲ నిలువుడు.
* ನಾಥನ ಅಧಿಯನ್ನು ಮುನ್ನಾಲು ವಿದ್ಯಾದಿಂಗಳಲಿ ಜಂಬಲ ನೀಲರುವು.
* ಕ್ಯಾಲೆಂಡರ್ ಚಟುವಟಿಕೆಗಳ ಆಯೋಜನೆಗಾಗಿ ವಿದ್ಯಾರ್ಥಿಗಳನ್ನು ನೇಮಿಸುವುದು.
* ಮಕ್ಕಳಿಗೆ ಮಾರ್ಗದರ್ಶನ ನೀಡಿ ಕಾರ್ಯಕ್ರಮಕ್ಕೆ ತಯಾರು ಮಾಡುವುದು.
• ಚಟುವಟಿಕೆಯಲ್ಲಿ ಎಲ್ಲಾ ಮಕ್ಕಳು ಭಾಗವಹಿಸುವಂತೆ ನಿಗಾ ವಹಿಸುವುದು.
* ಉಪಕ್ರಮಕ್ಕೆ ಸಂಬಂಧಿಸಿದಂತೆ ಉತ್ತಮ ಅಭ್ಯಾಸಗಳನ್ನು ಮುಖ್ಯ ಶಿಕ್ಷಕರೊಂದಿಗೆ ಹಂಚಿಕೊಳ್ಳುವುದು
ಪ್ರಮುಖ ಸೂಚನೆಗಳು
ಶಾಲಾ ಪ್ರಾರ್ಥನಾ ಅವಧಿಯ ಚಟುವಟಿಕೆಗಳ ಕ್ಯಾಲೆಂಡರ್
ಶಾಲಾ ಪ್ರಾರ್ಥನೆಯಲ್ಲಿ ಪ್ರಸ್ತುತಿ ಪಡಿಸುವ ಚಟುವಟಿಕೆಗಳನ್ನು ಕನಿಷ್ಠ 1 ವಾರದ ಮುಂಚಿತವಾಗಿ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಮಾರ್ಗದರ್ಶನ ನೀಡಿ ಮಕ್ಕಳನ್ನು ತಯಾರು ಮಾಡುವುದು.
• ಕ್ಯಾಲೆಂಡರ್ ನಲ್ಲಿ ನೀಡಿದ ಒಂದು ಥೀಮ್ ನ ಒಂದು ವಾರದ ಚಟುವಟಿಕೆಗಳ ಅನುಗುಣವಾಗಿ ಮಕ್ಕಳು ಚಟುವಟಿಕೆಗಳನ್ನು ಮಾಡಿಸುವುದು. ಕೆಲವು ಚಟುವಟಿಕೆಗಳು ಶೈಕ್ಷಣಿಕ ಮಾರ್ಗದರ್ಶಿಯ ಅನುಗುಣವಾಗಿ ಇರುವುದರಿಂದ ಅವು ಥೀಮ್ ಗೆ ಸಂಬಂಧಿಸದೆ ವಿಶೇಷ ಸಂದರ್ಭದ ಚಟುವಟಿಕೆಗಳಾಗಿವೆ.
ಪ್ರತಿ ಶನಿವಾರದ ಚಟುವಟಿಕೆಗಳು ದೈಹಿಕ ವ್ಯಾಯಾಮದ ಚಟುವಟಿಕೆಗಳಾಗಿವೆ ಮತ್ತು ಪ್ರತಿ ಮೂರನೇ ಶನಿವಾರ ಸಂಭ್ರಮ ಶನಿವಾರದ ಚಟುವಟಿಕೆಗಳಾಗಿವೆ.
• 4 ರಿಂದ 8 ನೇ ತರಗತಿಯ ಮಕ್ಕಳು ಪ್ರಾರ್ಥನಾ ಅವಧಿಯನ್ನು ವೇಳಾಪಟ್ಟಿಯಂತೆ ಪ್ರತಿದಿನ ಮುನ್ನೆಡೆಸುವುದು.
• ಚಟುವಟಿಕೆಯಲ್ಲಿ ಮಕ್ಕಳು ಪುನರಾವರ್ತನೆಯಾಗದಂತೆ 3 ರಿಂದ 5 ವಿದ್ಯಾರ್ಥಿಗಳು ಭಾಗವಹಿಸುವಂತೆ ನೋಡಿಕೊಳ್ಳುವುದು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡುವುದು.
• ವಿಶೇಷ ಚಟುವಟಿಕೆಗಳ ಜೊತೆಗೆ ನಿರಂತರವಾಗಿ ಪ್ರಾರ್ಥನೆಯಲ್ಲಿ ನೆಡೆಯುವ ಅಂಶಗಳನ್ನು ಅಂದು ಜವಾಬ್ದಾರಿ ತೆಗೆದುಕೊಂಡ ತರಗತಿಯ ಮಕ್ಕಳೇ ನಿರ್ವಹಿಸುವಂತೆ ನೋಡಿಕೊಳ್ಳುವುದು.
ನೀಡಿರುವ ಚಟುವಟಿಕೆಗಳು ಸಲಹಾತ್ಮಕವಾಗಿವೆ. ಶಿಕ್ಷಕರು ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ಥೀಮ್ ಗಳನ್ನು ಶಾಲಾ ಹಂತದಲ್ಲಿ ಬದಲಿಸಿಕೊಳ್ಳಬಹುದು ಅಥವಾ ಹೊಸ ಚಟುವಟಿಕೆಗಳನ್ನು 3 ರಿಂದ 5 ನಿಮಿಷಗಳಿಗೆ ಮಿತಿಗೊಳಿಸಿ ರೂಪಿಸುವುದು.
• ಕಾರ್ಯಕ್ರಮದ ಯಶೋಗಾಥೆಗಳನ್ನು ಮತ್ತು ಉತ್ತಮ ಅಭ್ಯಾಸಗಳನ್ನು ಇಲಾಖೆಯೊಂದಿಗೆ ಹಂಚಿಕೊಳ್ಳುವುದು.
• ನಾವು ಮನುಜರು ಕಾರ್ಯಕ್ರಮದ ಚಟುವಟಿಕೆಗಳನ್ನು ಸಹ ಹಮ್ಮಿಕೊಳ್ಳಬಹುದು.
🟩🟧🟧🟩🟧🟧🟨🟫🟫🟨🟫🟨🟪⬜🟪🟦🟪⬜⬜⬜🟪🟥🟥🔵🟢🔴🟡🟣⬜🟫🟨🔴🟩🟧🔵🟤🔴🟨🟨🟫🟦⬜🟪⚪🔴🔵🟥🟧🟫🟪⬜
No comments:
Post a Comment