Sunday, August 25, 2024

There will be 50 questions on Linga, Vilom, Vachana and Inductive Verb of Grammar section. (There is a possibility of getting 4 marks in the annual exam.)

  Wisdom News       Sunday, August 25, 2024
Hedding ; There will be 50 questions on Linga, Vilom, Vachana and Inductive Verb of Grammar section. (There is a possibility of getting 4 marks in the annual exam.)



*ಮಕ್ಕಳಿಗೆ ಓದುವ ರುಚಿ ಹೆಚ್ಚಿಸುವುದು ಹೇಗೆ? ಇಲ್ಲಿವೆ ಸುಲಭ ಮಾರ್ಗಗಳು..*

*ಪ್ರತಿಯೊಂದು ಮಗುವಿಗೆ ಮನೆಯೇ ಮೊದಲ ಶಾಲೆ, ತಾಯಿಯೇ ಮೊದಲ ಗುರು ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸರಿ ಹಾಗೂ ತಪ್ಪಿನ ಬಗ್ಗೆ ಕಲಿಸಿಕೊಡುತ್ತಾರೆ. ಹಾಗಾಗಿ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ತರವಾದದ್ದು. ಮಕ್ಕಳು ಮನೆಯಲ್ಲಿ ನಿರಂತರವಾಗಿ ಪೋಷಕರನ್ನು ನೋಡಿ ಹೆಚ್ಚು ಅನುಕರುಣೆ ಮಾಡುತ್ತಾರೆ. ಮಕ್ಕಳ ಮನಸ್ಸಿನಲ್ಲಿ ಕಲಿಕೆಯ ಪೂರಕ ವಾತಾವರಣ ಕಲ್ಪಿಸುವುದರ ಜತೆಗೆ ಮಗುವಿನ ಕಲಿಕೆಯ ಬಗ್ಗೆ ಪೋಷಕರು ಪ್ರೇರೆಪಿಸಬೇಕಾಗುತ್ತದೆ. ಮಗು ಕಲಿಯಲು ಪೋಷಕರು ಯಾವ ರೀತಿಯ ಟೆಕ್ನಿಕ್, ತಂತ್ರಗಳನ್ನು ಉಪಯೋಗಿಸಬೇಕು ಎಂಬ ಬಗ್ಗೆ ಇಲ್ಲಿ ತಿಳಿಸಲಾಗಿದೆ.*

👉 *ಒಳ್ಳೆಯ ವಾತಾವರಣ ಕಲ್ಪಿಸಿ*
ಮಗುವಿನ ಕಲಿಕೆಗೆ ಪ್ರಮುಖವಾಗಿ ಬೇಕಾಗಿರುವುದು ಓದುವ ವಾತಾವರಣ ಚೆನ್ನಾಗಿರಬೇಕು. ಕಲಿಕೆಗೆ ಪೂರಕವಾದ ವಾತಾವರಣವನ್ನು ಪೋಷಕರು ಒದಗಿಸಿಕೊಡಬೇಕು. ಮಕ್ಕಳ ಓದುವ ಪ್ರೀತಿಯನ್ನು ಹೆಚ್ಚಿಸಲು ಇದು ಸಹಾಯಕಾರಿಯಾಗಬಲ್ಲದ್ದು, ನಿಮ್ಮ ಮಗುವಿನ ಕಲಿಕೆಯ ಕೌಶಲ್ಯ ಹೆಚ್ಚಿಸಲು ಪುಸ್ತಕ ಓದುವುದನ್ನು ದಿನಚರಿಯನ್ನಾಗಿಸಿ. ಇದರಿಂದ ಮಕ್ಕಳ ಜತೆ ನೀವು ಸಮಯ ಕಳೆಯಲು ಸಾಧ್ಯವಾಗುತ್ತದೆ. ದಿನಕ್ಕೆ ಒಂದು 10 ನಿಮಿಷವಾದರೂ ಮಕ್ಕಳಿಗೆ ಓದಿ ಹೇಳಿ.

*Nabi Sir GHS Kinnisultana*

👉 *ಮಗುವಿಗೆ ಆಸಕ್ತಿ ಇರುವ ಪಠ್ಯೇತರ ಚಟುವಟಿಕೆ ಆಯ್ಕೆಗೆ ಅವಕಾಶ*
ಕೆಲವು ಪೋಷಕರು ತಮ್ಮ ಮಗುವಿನ ಕಲಿಕೆಯ ಬಗ್ಗೆ ನಿಯಂತ್ರಣ ಮಾಡಲು ಹೋಗುತ್ತಾರೆ.. ಈ ರೀತಿ ಮಾಡುವುದು ತಪ್ಪು ಎಂದು ಹೇಳಬಹುದು. ಮಕ್ಕಳು ತಮ್ಮದೇ ಆದ ಪಠ್ಯೇತರ ಚಟುವಟಿಕೆ ಆಯ್ಕೆ ಮಾಡಲು ಪೋಷಕರು ಅನುವು ಮಾಡಿಕೊಡಬೇಕಾಗುತ್ತದೆ. ಇದು ಕಲಿಕೆಯ ಮತ್ತೊಂದು ಮಾರ್ಗವಾಗಿದೆ. ಇದರಿಂದ ನಿಮ್ಮ ಮಗುವಿಗೆ ಕಲಿಯಕೆ ಬಗ್ಗೆ ಆಸಕ್ತಿ ಹೆಚ್ಚುವುದಲ್ಲದೇ, ಇನ್ನಷ್ಟು ಮಗು ಕಲಿಯುವಂತೆ ಪ್ರೇರಣೆ ದೊರೆಯುತ್ತದೆ. ನಿಮ್ಮ ಮಗು ಶಾಲೆಯಲ್ಲಿರಲಿ, ಮನೆಯಲ್ಲಿರಲಿ ಕಲಿಕೆಯ ಆಯ್ಕೆಯನ್ನು ಪೋಷಕರು ಮಗುವಿಗೆ ನೀಡಬೇಕು.

👉 *ಮುಕ್ತ ಸಂವಹನಕ್ಕೆ ಅವಕಾಶ ಮಾಡಿಕೊಡುವುದು.*
ನನ್ನ ಮಗು ಶಾಲೆಯಲ್ಲಿ ಏನು ಕಲಿಯುತ್ತಿದ್ದಾನೆ ಎಂದು ಹಲವಾರು ಪೋಷಕರು ಪರಿಶೀಲನೆ ನಡೆಸುತ್ತಾರೆ. ತಮ್ಮ ಮಗುವಿನ ಕುರಿತು ಶಿಕ್ಷಕರ ಅಥವಾ ಸಹಪಾಠಿಗಳ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಾರೆ. ಆದರೆ ನಿಮ್ಮ ಮಗು ಸ್ವತಃ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮುಕ್ತ ವಾತಾವರಣ ಕಲ್ಪಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿರುತ್ತದೆ. ಮಗು ನಿಮ್ಮ ಜತೆ ಅಭಿಪ್ರಾಯಗಳನ್ನು ಹಂಚಿಕೊಂಡಾಗ, ಪ್ರೋತ್ಸಾಹಿಸಿ. ಅವರ ಭಾವನೆಯನ್ನು ಅರ್ಥಮಾಡಿಕೊಳ್ಳಬಹುದು.

👉 *ಮಗುವಿನ ಆಸಕ್ತಿಗಳತ್ತ ಗಮನ ಹರಿಸಿ.*
ವಿಷಯದ ಬಗೆಗಿನ ಆಸಕ್ತಿ ಮಕ್ಕಳ ಕಲಿಕೆಯನ್ನು ಹೆಚ್ಚಿಸುತ್ತದೆ. ಮಕ್ಕಳು ಉತ್ತಮ ಕಲಿಕೆಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಅವರನ್ನು ಆಕರ್ಷಿಸುವ ವಿಷಯಗಳ ಬಗ್ಗೆ ಪೋಷಕರು ಗಮನ ಹರಿಸಬಹುದು. ಉದಾಹರಣೆಗೆ ನಿಮ್ಮ ಡೈನೋಸಾರ್ ಗಳ ಕಥೆ ಇಷ್ಟಪಟ್ಟರೆ, ಆ ಪುಸ್ತಕದಲ್ಲಿರುವ ಇಂಟರೆಸ್ಟಿಂಗ್ ಕಥೆಗಳನ್ನು ಹುಡುಕಲು ನಿಮ್ಮ ಮಗುವಿಗೆ ಸಹಾಯ ಮಾಡುವುದು ಉತ್ತಮ ಎಂದು ಹೇಳಬಹುದು.

*Nabi Sir GHS Kinnisultana*

👉 *ಕಲಿಕಾ ಶೈಲಿಗೆ ಆದ್ಯತೆ ನೀಡುವುದು.*
ಪ್ರತಿಯೊಂದು ಮಗುವಿನಲ್ಲಿ ಕಲಿಕೆಯು ವಿಭಿನ್ನವಾಗಿರುತ್ತದೆ. ನಿಮ್ಮ ಮಗುವಿಗೆ ಆಸಕ್ತಿಗಳು, ಚಟುವಟಿಕೆಗಳು ಹಾಗೂ ಬದ್ಧತೆಗಳ ಬಗ್ಗೆ ಆದ್ಯತೆಗಳನ್ನು ಪೋಷಕರು ನೀಡಬೇಕು. ಈ ವಾರದಲ್ಲಿ ನಿಮ್ಮ ಶಾಲೆಯಲ್ಲಿ ನಡೆದ ಒಳ್ಳೆಯ ಸಂಗತಿಗಳು ಯಾವುವು.. ನೀವು ಹೆಚ್ಚು ಇಷ್ಟಪಡುವ ಕೆಲಸಗಳು ಯಾವವು. ಶಾಲೆಗೆ ರಜೆ ಇದ್ದಾಗ ನೀವು ಏನು ಮಾಡುವೀರಿ... ಈ ಪ್ರಶ್ನೆಗಳನ್ನು ನೀವು ಕೇಳುವುದರ ಮೂಲಕ ನಿಮ್ಮ ಮಗುವನ್ನು ಪ್ರೋತ್ಸಾಹಿಸಬಹುದು.

👉 *ಮಗುವಿನ ಕಲಿಕೆ ಬಗ್ಗೆ ಪೋಷಕರು ಇಂಟರೆಸ್ಟ್ ತೋರುವುದು.*
ಮಕ್ಕಳ ಕಲಿಕೆಯ ಬಗ್ಗೆ ಪೋಷಕರು ಹೆಚ್ಚು ಉತ್ಸಾಹ ತೋರುವುದರಿಂದ ಮಕ್ಕಳ ಕಲಿಕೆಯ ನಿರಂತರ ಪ್ರೋತ್ಸಾಹ ದೊರೆಯುತ್ತದೆ. ಮಕ್ಕಳ ಅಭಿರುಚಿ, ಸಾಮರ್ಥ್ಯ, ವಿಷಯ, ಅರ್ಥೈಸುವ ರೀತಿ ವಿಭಿನ್ನವಾಗಿರುತ್ತದೆ. ತನ್ನ ಶೈಲಿಗನುಗುಣವಾಗಿ ಮಗು ಕಲಿಯಲು ಪೋಷಕರು ಉತ್ಸಾಹ ತೋರಬೇಕಾಗುತ್ತದೆ. ಮಗುವಿನ ನಿಜವಾದ ಕಲಿಕೆ ಆತನಲ್ಲಿ ಹುಟ್ಟಿದ ಪ್ರಶ್ನೆಯಿಂದ ಪ್ರಾರಂಭವಾಗುತ್ತದೆ. ನೀವು ಸಹ ನಿಮ್ಮ ಮಕ್ಕಳಿಗೆ ಪ್ರಶ್ನೆಗಳನ್ನು ಮಾಡಬಹುದು. ಅದರಂತೆ ಮಕ್ಕಳು ಕೇಳಲು ಪ್ರೋತ್ಸಾಹಿಸಬೇಕು.

👉 *ಕಲಿಕೆಯ ವಿಷಯದ ಮೇಲೆ ಗಮನ ಕೇಂದ್ರೀಕರಿಸಿ.*
ಶಾಲೆಯಿಂದ ನಿಮ್ಮ ಮಗು ಮನೆಗೆ ಬಂದ ತಕ್ಷಣ ವಿಜ್ಞಾನ ಹಾಗೂ ಗಣಿತ ವಿಷಯಗಳ ಪರೀಕ್ಷೆಯಲ್ಲಿ ಹೇಗೆ ಬರೆದನು ಎಂದು ಪ್ರಶ್ನೆ ಮಾಡುವುದಕ್ಕಿಂತ, ನಿಮ್ಮ ಮಗು ಏನು ಕಲಿಯುತ್ತಿದ್ದಾನೆ ಎಂಬ ಬಗ್ಗೆ ಗಮನ ಹರಿಸುವುದು ಸೂಕ್ತ. ಅಂದರೆ ಕಲಿಕೆಯಲ್ಲಿ ಕಾರ್ಯಕ್ಷಮತೆ ಮುಖ್ಯಾವಾದರೂ, ಪರೀಕ್ಷೆ ಗ್ರೇಡ್ ಗಳಿಗಿಂತ ನಿಜವಾದ ಕಲಿಕೆ ಮುಖ್ಯ ಎಂಬ ಬಗ್ಗೆ ನಿಮ್ಮ ಮಗು ತಿಳಿದುಕೊಳ್ಳಲು ಸಹಾಯವಾಗುತ್ತದೆ.

👉 *ಮಗುವಿನ ಸಾಧನೆ ಗುರುತಿಸಿ, ಪ್ರೋತ್ಸಾಹಿಸುವುದು.*
ಎಷ್ಟೇ ಚಿಕ್ಕ ವಿಷಯವಾಗಿರಲಿ ಅಥವಾ ದೊಡ್ಡ ವಿಷಯವೇ ಆಗಿರಲಿ ನಿಮ್ಮ ಮಗುವಿನ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿ. ಅಂದರೆ ನಿಮ್ಮ ಮಗು ಶಾಲೆಯ ಚಟುವಟಿಕೆಗಳಲ್ಲಿ ಅಥವಾ ಇನ್ನಿತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದಾಗ, ಅವರನ್ನು ಹುರಿದುಂಬಿಸುವುದು ಜತೆಗೆ ಅವರ ಸಾಧನೆಯನ್ನು ಸೆಲೆಬ್ರೆಟ್ ಮಾಡುವುದು ಮುಖ್ಯವಾಗುತ್ತದೆ.

👉 *ನಿಮ್ಮ ಮಗುವಿನ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳುವುದು*
ನಿಮ್ಮ ಮಗು ಗಣಿತ, ವಿಜ್ಞಾನ ಅಥವಾ ಇನ್ನಿತರ ವಿಷಯಗಳ ಬಗ್ಗೆ ಕಲಿಯುತ್ತಿರುವಾಗ ಆತನಿಗೆ ಕಷ್ಟವೆನಿಸಬಹುದು. ಆದ್ದರಿಂದ ಮಗುವಿನ ಆರೋಗ್ಯಕರ ಹಾಗೂ ಧನಾತ್ಮಕ ಬೆಳವಣಿಗೆಗೆ ಉಪಯೋಗವಾಗಬಲ್ಲ ಸಾಮರ್ಥ್ಯದ ಮೇಲೆ ಗಮನ ಕೇಂದ್ರಿಕರಿಸಬೇಕಾಗುತ್ತದೆ. ಇದು ಮಕ್ಕಳಿಗೆ ಸಕಾರಾತ್ಮಕ ಭಾವನೆ ಮೂಡಿಸಲು ನೆರವಾಗುತ್ತದೆ.

logoblog

Thanks for reading There will be 50 questions on Linga, Vilom, Vachana and Inductive Verb of Grammar section. (There is a possibility of getting 4 marks in the annual exam.)

Previous
« Prev Post

No comments:

Post a Comment