ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸನ್ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳ ಜೊತೆ ಸಭೆಯನ್ನು ಶೀಘ್ರದಲ್ಲೇ ಏರ್ಪಡಿಸುವ ಕುರಿತು.
ತಮಗೆಲ್ಲ ತಿಳಿದಿರುವಂತೆ ದಿನಾಂಕ:12-08-2024ರಂದು ನಡೆದ "ಬೆಂಗಳೂರು ಚಲೋ" ಹೋರಾಟದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರು ಹಾಗೂ ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ರವರು ನೀಡಿದ ಭರವಸೆಯಂತೆ ಅತ್ಯಂತ ಶೀಘ್ರವಾಗಿ ಮಾನ್ಯ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ತೀರ್ಮಾನಿಸಲಾಗುವುದೆಂದು ತಿಳಿಸಿರುವುದು ತಮಗೆಲ್ಲಾ ತಿಳಿದ ವಿಷಯ.
ಅದರಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘವು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಹಾಗೂ ಮಾನ್ಯ ಶಿಕ್ಷಣ ಸಚಿವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಇಂದು ಕೂಡ ದಿನಾಂಕ:23-08-2024 ರಂದು ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇವೆ, ಜೊತೆಗೆ ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರನ್ನು ಕೂಡ ಭೇಟಿ ಮಾಡಿದ್ದೇವೆ ಜೊತೆಗೆ ಸರ್ಕಾರದ ಮಾನ್ಯ ಮುಖ್ಯ ಕಾರ್ಯದರ್ಶಿಗಳಾದ ಸನ್ಮಾನ್ಯ ಶ್ರೀಮತಿ ಡಾ॥ ಶಾಲಿನಿ ರಜನೀಶ್, ಭಾ.ಆ.ಸೇ ರವರನ್ನು ಕೂಡ ಭೇಟಿ ಮಾಡಲಾಗಿದ್ದು, ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ದಿನಾಂಕ: 30-08-2024ರೊಳಗಾಗಿ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಭೆ ನಿಗದಿಪಡಿಸಲಾಗುವುದೆಂದು ತಿಳಿಸಿದ್ದಾರೆ.
ಒಂದು ವೇಳೆ ಸಭೆಯನ್ನು ನಿಗದಿಪಡಿಸಿ ನಮ್ಮ "ಬೆಂಗಳೂರು ಬೃಹತ್" ಹೋರಾಟದ ತೀರ್ಮಾನಗಳಂತೆ ಶಿಕ್ಷಕರಿಗೆ ಸೂಕ್ತ ನ್ಯಾಯ ದೊರಕದೇ ಹೋದಲ್ಲಿ ಮುಂದಿನ ಹೋರಾಟವನ್ನು ತಕ್ಷಣ "Google Meet"ನಲ್ಲಿ ಕಾರ್ಯಕಾರಿ ಸಮಿತಿ ಸಭೆ ಕರೆದು ಮುಂದಿನ ಹೋರಾಟವನ್ನು ತೀರ್ಮಾನಿಸಲಾಗುವುದು.
ದಿನಾಂಕ:22-08-2024ರ ಕ್ಯಾಬಿನೆಟ್ ಸಭೆಯ ಚರ್ಚಿತ ಅಂಶಗಳ ಕುರಿತು
> ದಿನಾಂಕ:22-08-2024ರಂದು ನಡೆದ ಸಚಿವ ಸಂಪುಟದ ಕ್ಯಾಬಿನೆಟ್ ನೋಟ್ ಬಗ್ಗೆ ಇದರಲ್ಲಿ GPT ಶಿಕ್ಷಕರಿಗೆ ಯಾರು BA B.Ed, B.Sc B.Ed ಅರ್ಹತೆ ಹೊಂದಿದವರಿಗೆ ಪ್ರೌಢಶಾಲೆಗೆ ಬಡ್ತಿಗೆ ಅವಕಾಶವಿರಲಿಲ್ಲ, ಅವರಿಗೂ ಕೂಡ ಪ್ರೌಢಶಾಲೆಗೆ ಬಡ್ತಿ ನೀಡುವ ಕುರಿತದ್ದಾಗಿದೆ. ಅರ್ಹ B.Ed ವಿದ್ಯಾರ್ಹತೆ ಹೊಂದಿದವರಿಗೆ
> ನಮಗೆ ಈ ಹಿಂದಿನಂತೆ ನಮ್ಮಲ್ಲಿ BA B.Ed, B.Sc B.Ed ಅರ್ಹತೆ ಹೊಂದಿದವರಿಗೆ ಪ್ರೌಢಶಾಲೆಗೆ ಬಡ್ತಿಗಳು ನ್ಯಾಯಯುತವಾಗಿ ಮುಂದುವರಿಯುತ್ತವೆ,ಮುಂದುವರಿಸಲೂ ಬೇಕು.
ಹಾಗೆಯೇ ನೆನ್ನೆಯ ಕ್ಯಾಬಿನೆಟ್ ಸಭೆಯಲ್ಲಿ ಕೂಡ ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ನಮ್ಮ ಹೋರಾಟದ ಬಗ್ಗೆ ಹಾಗೂ ನಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಿದ್ದು, ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಲು ಚರ್ಚಿಸಿದ್ದಾರೆಂಬ ಅಂಶವನ್ನು ರಾಜ್ಯದ ಸಮಸ್ತ ಶಿಕ್ಷಕರ ಗಮನಕ್ಕೆ ತರಬಯಸುತ್ತೇವೆ.
ಪ್ರಸ್ತುತ ಸನ್ನಿವೇಶಗಳನ್ನು ಗಮನಿಸಿ. ಶಿಕ್ಷಕರ ಪ್ರಮುಖ ಸಮಸ್ಯೆ ಬಗೆಹರಿಸಲು ರಾಜ್ಯದ ಶಿಕ್ಷಕರ ಸಂಘಟನೆಯು ಸಾಕಷ್ಟು ಶ್ರಮವನ್ನು ಹಾಕುತ್ತಿದ್ದು, ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ.ಸಮಸ್ಯೆ ಸಕಾಲದಲ್ಲಿ ಬಗೆಹರಿಯದಿದ್ದರೆ ಹೋರಾಟಕ್ಕೂ ಕೂಡ ಈ ಹಿಂದಿನಂತೆ
ಸಂಘಟನೆ ಸಿದ್ಧತೆಯಲ್ಲಿದೆ ಎಂಬ ಅಂಶವನ್ನು ತಿಳಿಸಬಯಸುತ್ತೇವೆ.
Subject : Order
Subject Language : Kannada
Which Department : all
Place : Karnataka
Announcement Date: 23/08/2024
Subject Format : PDF/JPJ
Subject Size : 56kb
Pages :3
Scanned Copy : Yes
Editable Text : NO
Password Protected :
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only


No comments:
Post a Comment