ಉಲ್ಲೇಖ:1. ಸರ್ಕಾರಿ ಆದೇಶ ಸಂಖ್ಯೆ:ಸಕಇ 94 ಮೊದೇಶಾ 2020, ಮತ್ತು ಬೆಂಗಳೂರು ದಿ:19.06.2021
2. ಸರ್ಕಾರದ ಆದೇಶ ಸಂಖ್ಯೆ: ಸಕಇ-ಎಂ.ಡಿ.ಎಸ್ /78/2023(P-1) ಬೆಂಗಳೂರು ದಿ: 12-02-2024
3. ಸರ್ಕಾರದ ಆದೇಶ ಸಂಖ್ಯೆ: ಸಕಇ - 399 ಎಂ.ಡಿ.ಎಸ್ 2022, ಬೆಂಗಳೂರು ໖: 15.03.2024
4. ಸರ್ಕಾರದ ಆದೇಶ ಸಂಖ್ಯೆ :ಸಕಇ 186 ಎಂಡಿಎಸ್ 2024 ಬೆಂಗಳೂರು ໖: 23.07.2024
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ 807 ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಏಕಲವ್ಯ ಮಾದರಿ/ಅಟಲ್ ಬಿಹಾರಿ ವಾಜಪೇಯಿ/ಶ್ರೀ ನಾರಾಯಣ ಗುರು ವಸತಿ ಶಾಲೆಗಳಲ್ಲಿ 2024-25ನೇ ಸಾಲಿಗೆ 6ನೇ ತರಗತಿ ಪ್ರವೇಶಾತಿಗೆ ಒಟ್ಟು 41,110 ಸೀಟುಗಳು ಲಭ್ಯವಿರುತ್ತದೆ. ಉಲ್ಲೇಖಿ(01) ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ತನ್ನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ 6ನೇ ತರಗತಿಯ ಪ್ರವೇಶಾತಿಗಾಗಿ ಪ್ರವೇಶ ಪರೀಕ್ಷೆ ಮತ್ತು ಸೀಟು ಹಂಚಿಕೆ ಕಾರ್ಯವನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (CET Cell) ವಹಿಸಲಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ಅರ್ಜಿ ಆಹ್ವಾನಿಸಿ, ಪ್ರವೇಶ ಪರೀಕ್ಷೆ ನಡೆಸಿ, ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳು (ಮೆರಿಟ್), ಅನ್ವಯಿಸುವ ಮೀಸಲಾತಿ ಮತ್ತು ಅವರು ನಮೂದಿಸಿರುವ ವಸತಿ ಶಾಲಾ ಆಧ್ಯತೆ ಪರಿಗಣಿಸಿ Computerized auto selection ಮೂಲಕ ಸಾಮಾನ್ಯ ಸೀಟು ಹಂಚಿಕೆಗೆ ಲಭ್ಯವಿದ್ದ ಒಟ್ಟು 20555 ಸೀಟುಗಳನ್ನು ಐದು ಸುತ್ತುಗಳ ಸೀಟು ಹಂಚಿಕೆ ಮೂಲಕ ಹಂಚಿಕೆ ಮಾಡಲಾಗಿದೆ. ಇದಲ್ಲದೇ ವಿಶೇಷ ವರ್ಗದ ವಿದ್ಯಾರ್ಥಿಗಳಿಗೆ 20555 ಸೀಟುಗಳು ಹಂಚಿಕೆಗೆ ಲಭ್ಯವಿದ್ದು, ಈ ಪೈಕಿ KEA ಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ಇಲ್ಲದೇ ಸೀಟು ಹಂಚಿಗೆ ಮಾಡಲಾಗಿದೆ. 2024-25ನೇ ಸಾಲಿಗೆ 6ನೇ ತರಗತಿಗೆ ಒಟ್ಟು 41110 ಸೀಟುಗಳ ಪೈಕಿ 40909 ಸೀಟುಗಳು ಹಂಚಿಕೆಯಾಗಿದ್ದು, 201 ಸೀಟುಗಳು ಬಾಕಿ ಇದೆ.
ಉಲ್ಲೇಖ(02) ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಯಲ್ಲಿ ರಾಜ್ಯದ ಎಲ್ಲಾ ತಾಲ್ಲೂಕಿನ ಸ್ಥಳೀಯ ಅಭ್ಯರ್ಥಿಗಳಿಗೆ ಶೇ.75 ರಷ್ಟು ಹಾಗೂ ಅದೇ ಜಿಲ್ಲೆಯ ಇತರ ತಾಲ್ಲೂಕಿನ ಅಭ್ಯರ್ಥಿಗಳಿಗೆ ಶೇ 25 ರಷ್ಟು ಮೀಸಲಾತಿಯನ್ನು ಹಂಚಿಕ ಮಾಡಲು ಸ್ಥಳೀಯ ಅಭ್ಯರ್ಥಿಯ ಪ್ರಮಾಣ ಪತ್ರ ಪಡೆಯುವ ಷರತ್ತಿಗೊಳಪಟ್ಟು ಅನುಮೋದನೆ ನೀಡಿ ಆದೇಶಿಸಿದೆ.
ಉಲ್ಲೇಖ(03) ರ ಸರ್ಕಾರದ ಆದೇಶದಲ್ಲಿ ವಿಶೇಷ ವರ್ಗಗಳಿಗೆ ಸೇರಿದ ಸಫಾಯಿ ಕರ್ಮಚಾರಿ/ ಗುರುತಿಸಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್/ ಚಿಂದಿ ಆಯುವವರು/ ಸ್ಮಶಾನ ಕಾರ್ಮಿಕರ ಮಕ್ಕಳಿಗೆ /ಬಾಲ ಕಾರ್ಮಿಕರು/ಜೀತ ವಿಮುಕ್ತ ಕರ್ಮಿಕರ ಮಕ್ಕಳು/ ಗುರುತಿಸಿರುವ ಮಾಜಿ ದೇವದಾಸಿಯರ ಮಕ್ಕಳು/25% ಕ್ಕಿಂತ ಹೆಚ್ಚಿನ ಅಂಗಲಿಕಲತೆ ಹೊಂದಿರುವ ಮಕ್ಕಳು/ ಹೆಚ್.ಐ.ವಿ ಗೆ ತುತ್ತಾದ ಪೋಷಕರ 'ಮಕ್ಕಳು, ಒಬ್ಬ ಪೋಷಕರನ್ನು ಮಾತ್ರ ಹೊಂದಿರುವ ಅಥವಾ ಅನಾಥ ಮಕ್ಕಳು/ಗುರುತಿಸಿರುವ ಅಲೆಮಾರಿ/ಅರೆ ಅಲೆಮಾರಿ/ಸೂಕ್ಷ್ಮ-ಅತೀ ಸೂಕ್ಷ್ಮ ಸಮುದಾಯದ/ಸೈನಿಕರು ಮತ್ತು ಮಾಜಿ ಸೈನಿಕರು/ ಸರ್ಕಾರಿ ಯೋಜನೆಗಳಿಂದ ಸ್ಥಳಾಂತರಗೊಂಡ ಪೋಷಕರ ಮಕ್ಕಳು/ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಆಶ್ರಮ ವಸತಿ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಶೇ. 50 ರಷ್ಟು ಸೀಟುಗಳಿಗೆ (20555 ಸೀಟುಗಳು) ನೇರ ಪ್ರವೇಶಾತಿ ಕಲ್ಪಿಸಲು ಅನುಮೋದನೆ ನೀಡಿ ಆದೇಶಿಸಲಾಗಿದೆ.
ಉಲ್ಲೇಖಿತ(4) ರ ಸರ್ಕಾರದ ಪತ್ರದಲ್ಲಿ ವಿಶೇಷ ವರ್ಗಗಳಿಗೆ ಸೀಟುಗಳನ್ನು ಭರ್ತಿ ಮಾಡಲು
ವ್ಯಾಪಕ ಪ್ರಚಾರ ಮಾಡಿ, ಜುಲೈ 31 ರವರೆಗೆ ಅಂತಿಮ ದಿನಾಂಕ ನಿಗದಿಪಡಿಸಿ ಭರ್ತಿ ಮಾಡಲು
ಕ್ರಮವಹಿಸುಸವುದು. ನಂತರ ವಿಶೇಷ ವರ್ಗ ಮತ್ತು ಸಾಮಾನ್ಯ ವರ್ಗದ ಎಲ್ಲಾ ಸೀಟುಗಳನ್ನು ಮೆರಿಟ್
ಆಧಾರದ ಮೇಲೆ ಮೀಸಲಾತಿಯನ್ವಯ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಆಗಸ್ಟ್- 7. ರೊಳಗಾಗಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆ ಮಾಡಿ, ಶೇಕಡಾ 100 ರಷ್ಟು ಸೀಟುಗಳನ್ನು
ಭರ್ತಿಮಾಡಲು ನಿರ್ದೇಶಿಸಿರುತ್ತಾರೆ.
ಉಲ್ಲೇಖಿತ(5) ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದ ಏಕ ಕಡತದಲ್ಲಿ ಸ್ಥಳೀಯ/ಸ್ಥಳೀಯೇತರ
ಅಭ್ಯರ್ಥಿಗಳಿಗೆ 75:25 ರ ಅನುಪಾತವನ್ನು ಕಾಪಾಡುವುದು. ಒಂದು ವೇಳೆ ಸದರಿ ಅನುಪಾತದಂತೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಇತರೆ ಜಿಲ್ಲೆಯ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸುವುದು ಎಂದು ಸೂಚನೆಯನ್ನು ನೀಡಿರುತ್ತಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ಪ್ರವೇಶ ಪರೀಕ್ಷೆಗೆ ಹಾಜರಾಗಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ Rank ನಿಗಧಿಯಾಗಿ, ಸೀಟು ಹಂಚಿಕೆಯಾಗದೇ ಬಾಕಿ ಇರುವ ಅಭ್ಯರ್ಥಿಗಳ ಜಿಲ್ಲಾವಾರು, ತಾಲ್ಲೂಕುವಾರು, ವರ್ಗವಾರು ಹಾಗೂ ಗಳಿಸಿರುವ ಅಂಕಗಳ ಸಂಪೂರ್ಣ ಮಾಹಿತಿಯನ್ನು
ನೀಡಿದ್ದು, ವಿವರವನ್ನು ಈ ಪತ್ರದೊಂದಿಗೆ ಲಗತ್ತಿಸಿದೆ.
ಉಲ್ಲೇಖ(1) ರ ಸರ್ಕಾರದ ಆದೇಶದಂತೆ ಖಾಲಿ ಉಳಿದಿರುವ a) ಸ್ಥಳೀಯ/ಸ್ಥಳೀಯೇತರ b)
ಲಿಂಗವಾರು, c) ವರ್ಗವಾರು d) ತಾಲ್ಲೂಕುವಾರು, e) ಅಭ್ಯರ್ಥಿಗಳು ಗಳಿಸಿರುವ ಅಂಕಗಳಿಗೆ
ಅನುಗುಣವಾಗಿ ಆಯಾ ಪ್ರವರ್ಗದ ಪಟ್ಟಿಯಲ್ಲಿರುವ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆಗೆ ಪರಿಗಣಿಸಿ
ಮೀಸಲಾತಿ ಹಾಗೂ ಮೆರಿಟ್ ಆಧಾರದ ಮೇಲೆ ಈ ಕೆಳಕಂಡ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ದಾಖಲಾತಿ ಮಾಡಿಕೊಳ್ಳಲು ಸೂಚಿಸಿದೆ.

No comments:
Post a Comment