Tuesday, August 20, 2024

Karnataka General Services (Pre-University Education) (Recruitment) (Amendment) Rules, 2024

  Wisdom News       Tuesday, August 20, 2024
Hedding ; PU Lecturer Recruitment Rules 2024...


ಪದವಿ ಪೂರ್ವ ಕಾಲೇಜುಗಳಲ್ಲಿ 814 ಉಪನ್ಯಾಸಕರ ನೇಮಕಾತಿಗೆ ಮುಂದಾದ ಶಿಕ್ಷಣ ಇಲಾಖೆ
karnataka government job vacancy 2024: ಕರ್ನಾಟಕದ ಸ್ನಾತಕೋತ್ತರ ಪದವಿ ಹಾಗೂ ಬಿ.ಇಡಿ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳಿಗೆ ಭರ್ಜರಿ ಗುಡ್‌ನ್ಯೂಸ್‌ ಒಂದು ಇಲ್ಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕ ಹುದ್ದೆಗಳ ಕುರಿತು ಒಂಸು ಸಿಹಿ ಸುದ್ದಿ ನೀಡಿದೆ.


ಕರ್ನಾಟಕ ಸರ್ಕಾರದಡಿಯ ಸರ್ಕಾರಿ ಶಾಲಾ, ಕಾಲೇಜುಗಳು ಖಾಯಂ ಬೋಧಕರ ಸಮಸ್ಯೆ ಎದುರಿಸುತ್ತಿರುವುದು ಹೊಸ ವಿಷಯವೇನು ಅಲ್ಲ. ಇತ್ತೀಚೆಗೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಾಲೆಗಳಲ್ಲಿ ಕೊರತೆ ಇರುವ 50000 ಶಿಕ್ಷಕರ ನೇಮಕಾತಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದೆ ಎಂಬುದನ್ನು ತಿಳಿಸಿದ್ದೆವು. ಈಗ ಪದವಿ ಪೂರ್ವ ಶಿಕ್ಷಣ ಇಲಾಖೆಯ ಬೋಧಕ ಹುದ್ದೆಗಳ ಕುರಿತು ಒಂದು ಗುಡ್‌ ನ್ಯೂಸ್‌ ಅನ್ನು ತಿಳಿಸುತ್ತಿದ್ದೇವೆ.

814 ಉಪನ್ಯಾಸಕ ಹುದ್ದೆ ನೇಮಕಕ್ಕೆ ನಿರ್ಧಾರ
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕೊರತೆ/ ಖಾಲಿ ಇರುವ ವಿವಿಧ ವಿಷಯಗಳ ನೇರ ನೇಮಕಾತಿ ಕೋಟಾದ ಒಟ್ಟು ಹುದ್ದೆಗಳ ಪೈಕಿ ಈಗ 814 ಉಪನ್ಯಾಸಕರ ಹುದ್ದೆ ಭರ್ತಿ ಮಾಡಲು ಇಲಾಖೆ ಮುಂದಾಗಿದೆ. ಇದಕ್ಕೆ ಸಂಬಂಧ ಸರ್ಕಾರದ ಅನುಮತಿಯನ್ನು ಸಹ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರು ಮಾಹಿತಿ ನೀಡಿದ್ದಾರೆ.


ವಿಧಾನ ಪರಿಷತ್ತಿನ ಸದಸ್ಯರು ಇಲಾಖಾ ಸಚಿವರಿಗೆ ಪದವಿ ಪೂರ್ವ ಕಾಲೇಜುಗಳ ಕುಂದು ಕೊರತೆ ಹಾಗೂ ಖಾಲಿ ಇರುವ ಬೋಧಕ ಹುದ್ದೆಗಳ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರ ನೀಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರು ಮೇಲಿನಂತೆ ಮಾಹಿತಿ ನೀಡಿದ್ದಾರೆ.


ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಒಟ್ಟಾರೆ 4259 ಉಪನ್ಯಾಸಕರ ಕೊರತೆ ಇದೆ. ಆದರೆ ಅವುಗಳಲ್ಲಿ ಈಗ 814 ಹುದ್ದೆ ಭರ್ತಿ ಮಾಡಲು ಸರ್ಕಾರವು ಅನುಮತಿ ನೀಡಿದೆ ಎಂದು ಮಾಹಿತಿ ನೀಡಲಾಗಿದೆ. ಯಾವ್ಯಾವ ವಿಷಯದಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ, ಯಾವ ಮೀಸಲಾತಿಯ ಎಷ್ಟು ಹುದ್ದೆಗಳು ಇವೆ ಎಂಬುದರ ಪಟ್ಟಿಯನ್ನು ಸಹ ಇಲಾಖೆ ಸಚಿವರು ನೀಡಿದ್ದಾರೆ. ಅದು ಕೆಳಗಿನಂತಿದೆ ನೋಡಿ.

ವಿಷಯ ಕಲ್ಯಾಣ ಕರ್ನಾಟಕ ಕಲ್ಯಾಣ ಕರ್ನಾಟಕೇತರ
ಕನ್ನಡ 5 100
ಇಂಗ್ಲಿಷ್ 5 120
ಇತಿಹಾಸ 4 120
ಅರ್ಥಶಾಸ್ತ್ರ 4 180
ಭೂಗೋಳಶಾಸ್ತ್ರ -- 20
ವಾಣಿಜ್ಯಶಾಸ್ತ್ರ 10 80
ಸಮಾಜಶಾಸ್ತ್ರ 04 75
ರಾಜ್ಯಶಾಸ್ತ್ರ 04 75
ಮನಃಶಾಸ್ತ್ರ -- 02
ಗಣಕ ವಿಜ್ಞಾನ -- 06
ಒಟ್ಟು 36 778


ಸರ್ಕಾರದ ಅನುಮತಿ ಇದ್ದರೂ, ನೇಮಕ ಪ್ರಕ್ರಿಯೆ ಕೈಗೊಳ್ಳಲು ತಡವೇಕೆ?
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳ ನೇರ ನೇಮಕಾತಿಯಲ್ಲಿ ಮೀಸಲಾತಿ ಬಿಂದುಗಳಿಗೆ ಸಂಬಂಧಿಸಿದಂತೆ ನಿರ್ದೇಶನಾಲಯದಿಂದ ಮಾರ್ಗದರ್ಶನ ಕೋರಿ ಪ್ರಸ್ತಾವನೆ ಸಲ್ಲಿಸಿದ್ದು, ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವಾ ನಿಯಮಗಳು) ಯೊಂದಿಗೆ ಸಮಾಲೋಚಿಸಲಾಗುತ್ತಿದ್ದು, ಪ್ರಸ್ತಾವನೆ ಪರಿಶೀಲನೆಯಲ್ಲಿದೆ.


ಮುಂದುವರೆದು, 2024-25ನೇ ಸಾಲಿನ ಆಯವ್ಯಯ ಘೋಷಿತ ಕಾರ್ಯಕ್ರಮಗಳ ಕಂಡಿಕೆ-103 ರಲ್ಲಿನ 'ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಹಾಗೂ ಪದವಿ ಪೂರ್ವ ಕಾಲೇಜುಗಳ ವಿವಿಧ ವಿಷಯಗಳ ಶಿಕ್ಷಕರು / ಉಪನ್ಯಾಸಕರುಗಳನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಬಗ್ಗೆ' ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತಂತೆ ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿವಿಧ ವಿಷಯಗಳ (ಕಲ್ಯಾಣ ಕರ್ನಾಟಕ (ಕೆ.ಕೆ) ಕೋಟಾದಲ್ಲಿ ನೇರ ನೇಮಕಾತಿ ಕೋಟಾದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 14 ವಿಷಯಗಳ ಒಟ್ಟು 405 ಹುದ್ದೆ ಹಾಗೂ ಕಲ್ಯಾಣ ಕರ್ನಾಟಕೇತರ (ಎನ್‌ಕೆಕೆ) ಕೋಟಾದಲ್ಲಿ ನೇರ ನೇಮಕಾತಿ ಕೋಟಾದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 18 ವಿಷಯಗಳ ಒಟ್ಟು 2644 ಹುದ್ದೆ ಸೇರಿ ಒಟ್ಟು 3049 ಉಪನ್ಯಾಸಕರ ಹುದ್ದೆಗಳ ನೇಮಕಾತಿ ಕುರಿತಂತೆ ನಿರ್ದೇಶಕರು,

 ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ರವರ ದಿನಾಂಕ 27-06-2024 ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಪ್ರಸ್ತಾವನೆಗೆ ಕಡತ ಸಂಖ್ಯೆ:ಇಪಿ 110 ಡಿಜಿಡಿ 2024 ಕಡತದಲ್ಲಿ ವ್ಯವಹರಿಸಿ ಆರ್ಥಿಕ ಇಲಾಖೆ ಹಾಗೂ ಯೋಜನಾ ಇಲಾಖೆಯ ಸಹಮತಿ ಕೋರಿ ಕಡತ ಸಲ್ಲಿಸಲಾಗಿದ್ದು, ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಅನುಮತಿ ಇದ್ದರೂ, ನೇಮಕ ಪ್ರಕ್ರಿಯೆ ಕೈಗೊಳ್ಳಲು ಕಾಲಾವಕಾಶ ತೆಗೆದುಕೊಳ್ಳಲಾಗುತ್ತಿದೆ.


ಅಂದಹಾಗೆ ಕರ್ನಾಟಕದ ಸರ್ಕಾರಿ ಪದವಿ ಪೂರ್ವ ಒಟ್ಟು ಕಾಲೇಜುಗಳ ಪೈಕಿ, ಪೂರ್ಣ ಪ್ರಮಾಣದಲ್ಲಿ ಉಪನ್ಯಾಸಕರನ್ನು ಹೊಂದಿರುವ ಕಾಲೇಜುಗಳ ಸಂಖ್ಯೆ ಕೇವಲ 122 ಮಾತ್ರ ಎಂದು ಸಚಿವರ ಉತ್ತರದಲ್ಲಿ ತಿಳಿಸಲಾಗಿದೆ.

ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಅರ್ಹತೆಗಳೇನು?
ಸ್ನಾತಕೋತ್ತರ ಪದವಿ ಜತೆಗೆ, ಬಿ.ಇಡಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರು.


✅ ಪಿಯು ಉಪನ್ಯಾಸಕರ ನೇಮಕಾತಿ ಸಂಬಂಧಿಸಿದಂತೆ ತಿದ್ದುಪಡಿಯ ಗೆಜೆಟ್ ಕರಡು ಪ್ರತಿ.

✅ ಈ ಕರಡು ಪ್ರತಿ ಪ್ರಕಾರ ಪಿಯು ಉಪನ್ಯಾಸಕ ನೇಮಕಾತಿಗಾಗಿ ಈ ಕೆಳಗಿನ ಅರ್ಹತೆಗಳನ್ನು ನಿಗದಿಪಡಿಸಿದ್ದಾರೆ‌.

✅ Masters ಪದವಿ ಹೊಂದಿರಬೇಕು ( ಹಾಗೂ Masters ಅಲ್ಲಿ ಕನಿಷ್ಠ 55% ಪ್ರತಿಶತ ಹೊಂದಿರಬೇಕು.)
(SC/ST ಅಭ್ಯರ್ಥಿಗಳು 50% ಹೊಂದಿರಬೇಕು)

ಹಾಗೂ B.ed ಪದವಿ ಕೂಡ ಕಡ್ಡಾಯವಾಗಿ ಹೊಂದಿರಬೇಕು.

✅ ಇನ್ನೂ ಹದಿನೈದು-ಇಪ್ಪತು ದಿನಗಳಲ್ಲಿ ಅಂತಿಮ ಗೆಜೆಟ್ ಪ್ರತಿ ಪ್ರಕಟವಾದ ನಂತರ ಇದು ಅಂತಿಮವಾಗಲಿದೆ.



logoblog

Thanks for reading Karnataka General Services (Pre-University Education) (Recruitment) (Amendment) Rules, 2024

Previous
« Prev Post

No comments:

Post a Comment