Saturday, August 17, 2024

Karnataka Civil Service (Revised Pay) Rules 2024

  Wisdom News       Saturday, August 17, 2024
Hedding ; Karnataka Civil Service (Revised Pay) Rules 2024...

ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ 7ನೇ ವೇತನ ಶ್ರೇಣಿಯನ್ನು ಜಾರಿಗೊಳಿಸಲಾಗಿತ್ತು. ಈ ಬೆನ್ನಲ್ಲೇ 2024ರ ಹೊಸ ವೇತನ ಶ್ರೇಣಿಯ ಪರಿಷ್ಕೃತ ನಿಯಮಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.

ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ರೇಜು ಎಂ.ಟಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.


ಅದರಲ್ಲಿ ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ, 1978ರ (1990ನೇ ಕರ್ನಾಟಕ ಅಧಿನಿಯಮದ ಸಂಖ್ಯೆ: 14) ಪ್ರಕರಣ 3ರ ಉಪ-ಪ್ರಕರಣ (2)ರ ಪರಂತುಕದೊಡನೆ ಓದಿಕೊಂಡ, ಸದರಿ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ರಾಜ್ಯ ಸರ್ಕಾರವು ಈ ಮೂಲಕ ಈ ಮುಂದಿನ ನಿಯಮಗಳನ್ನು ರಚಿಸಿದ, ಅಂದರೆ:-

1. ಚಿಕ್ಕ ಹೆಸರು ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024 ಎಂದು ಕರೆಯತಕ್ಕದ್ದು.

(2) ಅವು 2022 ಜುಲೈ 01ನೇ ದಿನಾಂಕದಿಂದ ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.
2. ಅನ್ವಯ:- (1) ಈ ನಿಯಮಗಳ ಅಥವಾ ಈ ನಿಯಮಗಳ ಅಡಿಯಲ್ಲಿ ಅನ್ಯಥಾ ಉಪಬಂಧಿಸದ ಹೊರತು, ಈ ನಿಯಮಗಳು ಸರ್ಕಾರಿ ಸೇವೆಗಳಿಗೆ ಮತ್ತು ಕರ್ನಾಟಕ ರಾಜ್ಯದ ವ್ಯವಹಾರಗಳ ಸಂಬಂಧದಲ್ಲಿನ ಹುದ್ದೆಗಳಿಗೆ ನೇಮಕಗೊಂಡ ವ್ಯಕ್ತಿಗಳಿಗೆ ಅನ್ವಯಿಸತಕ್ಕದ್ದು.
(2) ಈ ನಿಯಮಗಳು ಈ ಕೆಳಗಿನವರಿಗೆ ಅನ್ವಯಿಸತಕ್ಕದ್ದಲ್ಲ:-
(a) ಸರ್ಕಾರವು ಹೊರಡಿಸಿದ ಆದೇಶದ ಮೂಲಕ ಅನ್ಯಥಾ ಉಪಬಂಧಿಸದ ಹೊರತು, ಸರ್ಕಾರಿ ಸೇವೆಗಳ ನಿಯತ ಸಿಬ್ಬಂದಿ ವರ್ಗದಲ್ಲಿನ ಯಾವುದೇ ಹುದ್ದೆಯ ಮೇಲೆ ಧಾರಣಾಧಿಕಾರ ಹೊಂದಿಲ್ಲದ ಕಾಮಗಾರಿ ಹಣದಿಂದ ಸಂಬಳ ಪಡೆಯುವ ಸಿಬ್ಬಂದಿ ವರ್ಗಕ್ಕೆ ಸೇರಿದ ವ್ಯಕ್ತಿಗಳಿಗೆ

(b) ಸರ್ಕಾರವು ಹೊರಡಿಸಿದ ಆದೇಶದ ಮೂಲಕ ಅನ್ಯಥಾ ಉಪಬಂಧಿಸದ ಹೊರತು, ಸಾದಿಲ್ವಾರು ನಿಧಿಗಳಿಂದ ಸಂಬಳ ನೀಡಲಾಗುವ ವ್ಯಕ್ತಿಗಳಿಗೆ;
(c) ಗಂಟೆ, ದಿನ, ವಾರ ಅಥವಾ ಮಾಸಿಕ ದರಗಳ ಆಧಾರದ ಮೇಲೆ ಮಜೂರಿಗಳನ್ನು ನೀಡಲಾಗುವ ವ್ಯಕ್ತಿಗಳಿಗೆ
(d) ಪೂರ್ಣಕಾಲಿಕ ಉದ್ಯೋಗದಲ್ಲಿರದ ವ್ಯಕ್ತಿಗಳಿಗೆ;
(e) ಚಿಲ್ಲರ ಕೆಲಸದ ದರದ ಆಧಾರದ ಮೇಲೆ ಮಜೂರಿ ನೀಡಲಾಗುವ ವ್ಯಕ್ತಿಗಳಿಗೆ; (f) ಕರಾರಿನಲ್ಲಿ ಅನ್ಯಥಾ ಉಪಬಂಧಿಸಲಾಗಿದ್ದ ಹೊರತು, ಕರಾರು ಆಧಾರದ ಮೇಲೆ ನೇಮಕಗೊಂಡ ವ್ಯಕ್ತಿಗಳಿಗೆ

e) ಚಿಲ್ಲರ ಕೆಲಸದ ದರದ ಆಧಾರದ ಮೇಲೆ ಮಜೂರಿ ನೀಡಲಾಗುವ ವ್ಯಕ್ತಿಗಳಿಗೆ; (f) ಕರಾರಿನಲ್ಲಿ ಅನ್ಯಥಾ ಉಪಬಂಧಿಸಲಾಗಿದ್ದ ಹೊರತು, ಕರಾರು ಆಧಾರದ ಮೇಲೆ ನೇಮಕಗೊಂಡ ವ್ಯಕ್ತಿಗಳಿಗೆ
(g) ಸಂಚಿತ ವೇತನ ಅಥವಾ ಸಂಬಳದ ಆಧಾರದ ಮೇಲೆ ನೇಮಕಗೊಂಡ ವ್ಯಕ್ತಿಗಳಿಗೆ; h) ನಿವೃತ್ತಿ ನಂತರ ಸರ್ಕಾರಿ ಸೇವೆಗಳಲ್ಲಿ ಮರುನೇಮಕಗೊಂಡ ವ್ಯಕ್ತಿಗಳಿಗೆ 2) ಭಾರತ ಸಂವಿಧಾನದ 187ನೇ ಅನುಚ್ಛೇದದ (3)ನೇ ಖಂಡ, 229ನೇ ಅನುಚ್ಛೇದದ (2)ನೇ ಖಂಡದ ಅಥವಾ 318ನೇ ಅನುಚ್ಛೇದದ (ಬಿ) ಉಪ-ಖಂಡದ ಮೇರೆಗೆ ರಚಿಸಲಾದ ನಿಯಮಗಳ ಮೂಲಕ ಯಾವ ವ್ಯಕ್ತಿಗಳ ಸೇವಾ ಷರತ್ತುಗಳನ್ನು ಕ್ರಮಬದ್ಧಗೊಳಿಸಲಾಗಿದೆಯೋ ಆ ವ್ಯಕ್ತಿಗಳಿಗೆ
(i) ಯು.ಜಿ.ಸಿ./ಎ.ಐ.ಸಿ.ಟಿ.ಇ./ಐ.ಸಿ.ಎ.ಆರ್.
ಪಡೆಯುತ್ತಿರುವ ವ್ಯಕ್ತಿಗಳಿಗೆ;
ವೇತನ ಶ್ರೇಣಿಗಳಲ್ಲಿ ವೇತನ
(k) ರಾಷ್ಟ್ರೀಯ ನ್ಯಾಯಿಕ ವೇತನ ಆಯೋಗದ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ರಾಜ್ಯ ನ್ಯಾಯಾಂಗ ಸೇವೆಗೆ ಸೇರಿದ ಅಧಿಕಾರಿಗಳು;
(i) ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಅಖಿಲ ಭಾರತ ಸೇವೆಗಳಿಗೆ ಸೇರಿದ ವ್ಯಕ್ತಿಗಳಿಗೆ, ಮತ್ತು
- (m)ಸರ್ಕಾರವು, ಆದೇಶದ ಮೂಲಕ, ಈ ನಿಯಮಗಳ ಎಲ್ಲಾ ಅಥವಾ ಯಾವುದೇ ಡಿ ಉಪಬಂಧಗಳ ಪ್ರವರ್ತನೆಯಿಂದ ನಿರ್ದಿಷ್ಟವಾಗಿ ಹೊರತುಪಡಿಸಬಹುದಾದ ಯಾವುದೇ ಇತರ ವರ್ಗ ಅಥವಾ ಪ್ರವರ್ಗದ ವ್ಯಕ್ತಿಗಳಿಗೆ.
3. ಪರಿಭಾಷೆಗಳು:- ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸದ ಹೊರತು:-
(a) 'ಸರ್ಕಾರ' ಎಂದರೆ ಕರ್ನಾಟಕ ಸರ್ಕಾರ:




logoblog

Thanks for reading Karnataka Civil Service (Revised Pay) Rules 2024

Previous
« Prev Post

No comments:

Post a Comment