Friday, August 23, 2024

Karnataka Civil (Revised Pay) Service Rules 2024

  Wisdom News       Friday, August 23, 2024
Hedding ; Karnataka Civil (Revised Pay) Service Rules 2024...


ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ, 1978ರ (1990ನೇ ಕರ್ನಾಟಕ ಅಧಿನಿಯಮದ ಸಂಖ್ಯೆ: 14) ಪ್ರಕರಣ 3ರ ಉಪ-ಪ್ರಕರಣ (2)ರ ಪರಂತುಕದೊಡನೆ ಓದಿಕೊಂಡ, ಸದರಿ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ರಾಜ್ಯ ಸರ್ಕಾರವು ಈ ಮೂಲಕ ಈ ಮುಂದಿನ ನಿಯಮಗಳನ್ನು ರಚಿಸಿದೆ, ಅಂದರೆ:-

1. ಚಿಕ್ಕ ಹೆಸರು ಮತ್ತು ಪ್ರಾರಂಭ:- (1)

ಈ ನಿಯಮಗಳನ್ನು ಕರ್ನಾಟಕ ನಾಗರಿಕ ಸೇವಾ

(ಪರಿಷ್ಕೃತ ವೇತನ) ನಿಯಮಗಳು, 2024 ಎಂದು ಕರೆಯತಕ್ಕದ್ದು.

(2) ಅವು 2022 ಜುಲೈ 01ನೇ ದಿನಾಂಕದಿಂದ ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.

2. ಅನ್ವಯ:- (1) ಈ ನಿಯಮಗಳ ಅಥವಾ ಈ ನಿಯಮಗಳ ಅಡಿಯಲ್ಲಿ ಅನ್ಯಥಾ ಉಪಬಂಧಿಸದ ಹೊರತು, ಈ ನಿಯಮಗಳು ಸರ್ಕಾರಿ ಸೇವೆಗಳಿಗೆ ಮತ್ತು ಕರ್ನಾಟಕ ರಾಜ್ಯದ ವ್ಯವಹಾರಗಳ ಸಂಬಂಧದಲ್ಲಿನ ಹುದ್ದೆಗಳಿಗೆ ನೇಮಕಗೊಂಡ ವ್ಯಕ್ತಿಗಳಿಗೆ ಅನ್ವಯಿಸತಕ್ಕದ್ದು.

(2) ಈ ನಿಯಮಗಳು ಈ ಕೆಳಗಿನವರಿಗೆ ಅನ್ವಯಿಸತಕ್ಕದ್ದಲ್ಲ:- تعديل‎

(a) ಸರ್ಕಾರವು ಹೊರಡಿಸಿದ ಆದೇಶದ ಮೂಲಕ ಅನ್ಯಥಾ ಉಪಬಂಧಿಸದ ಹೊರತು, ಸರ್ಕಾರಿ ಸೇವೆಗಳ ನಿಯತ ಸಿಬ್ಬಂದಿ ವರ್ಗದಲ್ಲಿನ ಯಾವುದೇ ಹುದ್ದೆಯ ಮೇಲೆ ಧಾರಣಾಧಿಕಾರ ಹೊಂದಿಲ್ಲದ ಕಾಮಗಾರಿ ಹಣದಿಂದ ಸಂಬಳ ಪಡೆಯುವ ಸಿಬ್ಬಂದಿ ವರ್ಗಕ್ಕೆ ಸೇರಿದ ವ್ಯಕ್ತಿಗಳಿಗೆ:


b) ಸರ್ಕಾರವು ಹೊರಡಿಸಿದ ಆದೇಶದ ಮೂಲಕ ಅನ್ಯಥಾ ಉಪಬಂಧಿಸದ ಹೊರತು ಸಾದಿಲ್ವಾರು ನಿಧಿಗಳಿಂದ ಸಂಬಳ ನೀಡಲಾಗುವ ವ್ಯಕ್ತಿಗಳಿಗೆ,

(c) ಗಂಟೆ, ದಿನ. ವಾರ ಅಥವಾ ಮಾಸಿಕ ದರಗಳ ಆಧಾರದ ಮೇಲೆ ಮಜೂರಿಗಳನ್ನು ನೀಡಲಾಗುವ ವ್ಯಕ್ತಿಗಳಿಗೆ

(d) ಪೂರ್ಣಕಾಲಿಕ ಉದ್ಯೋಗದಲ್ಲಿರದ ವ್ಯಕ್ತಿಗಳಿಗೆ

(e) ಚೆಲ್ಲರ ಕೆಲಸದ ದರದ ಆಧಾರದ ಮೇಲೆ ಮಜೂರಿ ನೀಡಲಾಗುವ ವ್ಯಕ್ತಿಗಳಿಗೆ,

(1) ಕರಾರಿನಲ್ಲಿ ಅನ್ಯಥಾ ಉಪಬಂಧಿಸಲಾಗಿದ್ದ ಹೊರತು, ಕರಾರು ಆಧಾರದ ಮೇಲೆ ನೇಮಕಗೊಂಡ ವ್ಯಕ್ತಿಗಳಿಗೆ:

(

6) ಸಂಚಿತ ವೇತನ ಅಥವಾ ಸಂಬಳದ ಆಧಾರದ ಮೇಲೆ ನೇಮಕಗೊಂಡ ವ್ಯಕ್ತಿಗಳಿಗೆ

(6) ನಿವೃತ್ತಿ ನಂತರ ಸರ್ಕಾರಿ ಸೇವೆಗಳಲ್ಲಿ ಮರುನೇಮಕಗೊಂಡ ವ್ಯಕ್ತಿಗಳಿಗೆ,

() ಭಾರತದ ಸಂವಿಧಾನದ 187 ನೇ ವಿಧಿ

(3)ನೇ ಖಂಡ, 229ನೇ ಅನುಚ್ಛೇದದ

(2)ನೇ ಖಂಡದ ಅಥವಾ 318ನೇ ಅನುಚ್ಛೇದದ (

b) ಉಪಖಂಡಕ್ಕೆ

ರಚಿಸಲಾದ ನಿಯಮಗಳ ಮೂಲಕ ಯಾವ ವ್ಯಕ್ತಿಗಳ ಸೇವಾ ಷರತ್ತುಗಳನ್ನು ಕ್ರಮಬದ್ಧಗೊಳಿಸಲಾಗಿದೆಯೋ ಆ ವ್ಯಕ್ತಿಗಳಿಗೆ;

(i) ಯು.ಜಿ.ಸಿ./ಎ.ಐ.ಸಿ.ಟಿ.ಇ./ಐ.ಸಿ.ಎ.ಆರ್. ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ವ್ಯಕ್ತಿಗಳಿಗೆ,.

(k) ರಾಷ್ಟ್ರೀಯ ನ್ಯಾಯಿಕ ವೇತನ ಆಯೋಗದ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ರಾಜ್ಯ ನ್ಯಾಯಾಂಗ ಸೇವೆಗೆ ಸೇರಿದ ಅಧಿಕಾರಿಗಳು:

(1) ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಅಖಿಲ ಭಾರತ ಸೇವೆಗಳಿಗೆ ಸೇರಿದ ವ್ಯಕ್ತಿಗಳಿಗೆ: ಮತ್ತು

(m)ಸರ್ಕಾರವು, ಆದೇಶದ ಮೂಲಕ, ಈ ನಿಯಮಗಳ ಎಲ್ಲಾ ಅಥವಾ ಯಾವುದೇ P ಉಪಬಂಧಗಳ ಪ್ರವರ್ತನೆಯಿಂದ ನಿರ್ದಿಷ್ಟವಾಗಿ ಹೊರತುಪಡಿಸಬಹುದಾದ ಯಾವುದೇ ಇತರ ವರ್ಗ ಅಥವಾ ಪ್ರವರ್ಗದ ವ್ಯಕ್ತಿಗಳಿಗೆ.


'ಸರ್ಕಾರಿ ನೌಕರ' ಎಂದರೆ; ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ (2)ರ ಉಪನಿಯಮ (1)ರ ಖಂಡ (ಕೆ) ರಲ್ಲಿ ನಿಗದಿಪಡಿಸಲಾದ ಸಮಾನ ಅರ್ಥ.

(c) 'ಮೂಲ ವೇತನ' ಎಂದರೆ ಸರ್ಕಾರಿ ನೌಕರನು 'ಪ್ರಸಕ್ತ ಶ್ರೇಣಿ' ಯಲ್ಲಿ 2022ರ ಜುಲೈ 1 ರಂದು ಅಥವಾ ಆ ತರುವಾಯ ಯಾವುದೇ ದಿನಾಂಕದಂದು 'ಪರಿಷ್ಕೃತ ಶ್ರೇಣಿ' ಯಲ್ಲಿ ಅವನ ವೇತನವನ್ನು ನಿಗದಿಪಡಿಸಲಾಗುವ ದಿನದಂದು ಅವನು ಪಡೆಯುತ್ತಿರುವ ಮೂಲ ವೇತನ ಮತ್ತು ಅದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ. ಅವುಗಳೆಂದರೆ:-

(i) ವಾರ್ಷಿಕ ವೇತನ ಬಡ್ತಿ;

(i) ಪ್ರಸಕ್ತ ಶ್ರೇಣಿಯ ಗರಿಷ್ಠ ವೇತನಕ್ಕಿಂತ ಹೆಚ್ಚಿಗೆ ನೀಡಲಾದ ಸ್ಥಗಿತ ವೇತನ ಬಡ್ತಿ:

(i) 2018 ರ ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳ 7 ನೇ ನಿಯಮದ (3) ನೇ ಉಪನಿಯಮದ ಮೇರೆಗೆ ನೀಡಲಾದ ವೈಯಕ್ತಿಕ ವೇತನ (ವೈ.ವೇ.); ಮತ್ತು

(iv) 20, 25 ಮತ್ತು 30 ವರ್ಷಗಳ ಪದೋನ್ನತಿ ರಹಿತ ಸೇವೆಗಾಗಿ ಪ್ರಸಕ್ತ ಶ್ರೇಣಿಯಲ್ಲಿ ಗರಿಷ್ಠ ವೇತನಕ್ಕಿಂತ ಹೆಚ್ಚಿಗೆ ಮಂಜೂರು ಮಾಡಲಾದ ಹೆಚ್ಚುವರಿ ವೇತನ ಬಡ್ತಿ;

ಪರಂತು, ಅದು ಈ ಮುಂದಿನವುಗಳನ್ನು ಒಳಗೊಳ್ಳತಕ್ಕದ್ದಲ್ಲ; ಎಂದರೆ -

(1) ವಿಶೇಷ ಭತ್ಯೆ;

(i) ಮೇಲೆ (i) ರಲ್ಲಿ ನಮೂದಿಸಲಾದುದನ್ನು ಹೊರತುಪಡಿಸಿ ವೈಯಕ್ತಿಕ ವೇತನ;

(i) ತಾಂತ್ರಿಕ ವೇತನ; ಮತ್ತು

* (iv) ಕರ್ನಾಟಕ ನಾಗರಿಕ ಸೇವಾ ನಿಯಮಗಳ 8ನೇ ನಿಯಮದ ಉಪನಿಯಮ (32)ರ ಮೇರೆಗೆ, ಸರ್ಕಾರವು ವೇತನವೆಂದು ವಿಶೇಷವಾಗಿ ವರ್ಗೀಕರಿಸಿದ ಯಾವುದೇ ಇತರ ಉಪಲಬ್ಧಗಳು.

(d) ಪಿಂಚಣಿ: ಈ ನಿಯಮಗಳ ಉದ್ದೇಶಕ್ಕಾಗಿ ಪಿಂಚಣಿ ಎಂದರೆ ಮೂಲವೇತನವನ್ನು ಆಧಾರವಾಗಿರಿಸಿ ಲೆಕ್ಕ ಹಾಕಲಾದ ಕುಟುಂಬ ಪಿಂಚಣಿಯನ್ನು ಒಳಗೊಂಡಂತೆ ಪಿಂಚಣಿ. ಆದರೆ ಅದು ನಿವೃತ್ತಿ ಸೌಲಭ್ಯಗಳಾದ ಮರಣ - ನಿವೃತ್ತಿ ಉಪದಾನ, ಪರಿವರ್ತಿತ ನಿವೃತ್ತಿ 1. ವೇತನದ ಮೊತ್ತ, ಅಂತಿಮ ಗಳಿಕೆ ರಜಾ ಸೌಲಭ್ಯ ಇತ್ಯಾದಿಗಳನ್ನು ಒಳಗೊಳ್ಳುವುದಿಲ್ಲ


ಪಿಂಚಣಿ ಸೌಲಭ್ಯಗಳು: ಈ ನಿಯಮಗಳ ಉದ್ದೇಶಕ್ಕಾಗಿ ಪಿಂಚಣಿ ಸೌಲಭ್ಯಗಳು ಎಂದರೆ

ಅನ್ವಯಿಸುವ ನಿಯಮಗಳಲ್ಲಿನ ಅವಕಾಶಗಳನ್ವಯ ಒಬ್ಬ ಸರ್ಕಾರಿ ನೌಕರನಿಗೆ ಲಭ್ಯವಿರುವ ಉಪದಾನ, ಪರಿವರ್ತಿತ ನಿವೃತ್ತಿ ವೇತನದ ಮೊತ್ತ, ಅಂತಿಮ ಗಳಿಕೆ ರಜಾ ಸೌಲಭ್ಯಗಳನ್ನು ಒಳಗೊಳ್ಳುತ್ತದೆ. ಟಿಪ್ಪಣಿ: 'ಪಿಂಚಣಿ / ಪಿಂಚಣಿ ಸೌಲಭ್ಯಗಳು' ಪದಗಳ ಈ ಮೇಲಿನ ಪರಿಭಾಷೆಯು ಈ

ನಿಯಮಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ, ಈ ನಿರ್ವಚನೆಯು ಕರ್ನಾಟಕ ನಾಗರಿಕ ಸೇವಾ ನಿಯಮಗಳು ಮತ್ತು ಅನ್ವಯಿಸುವ ನಿಯಮಗಳಲ್ಲಿನ ಪದಗಳ ಪರಿಭಾಷೆಗೆ ವ್ಯತಿರಿಕ್ತವಾದುದೆಂದು ಭಾವಿಸತಕ್ಕದ್ದಲ್ಲ.

(1) 'ಮುಖ್ಯ ವೇತನ ಶ್ರೇಣಿ': ವೇತನ ಶ್ರೇಣಿಗಳಿಗೆ ಸಂಬಂಧಿಸಿದಂತೆ ಮುಖ್ಯ ವೇತನ ಶ್ರೇಣಿ ಎಂದರೆ ನಿರ್ದಿಷ್ಟವಾದ ಕನಿಷ್ಠ ಮತ್ತು ಗರಿಷ್ಟ ವೇತನದ ಹಂತವನ್ನೊಳಗೊಂಡು ಎಲ್ಲಾ ವೇತನ ಶ್ರೇಣಿಗಳನ್ನು ಒಳಗೊಂಡಿರುವ ಏಕೈಕ ಚಲಿತ ವೇತನ ಶ್ರೇಣಿ ಮತ್ತು ಅದು ಕಾಲದಿಂದ ಕಾಲಕ್ಕೆ ಸರ್ಕಾರವು ಅಧಿಸೂಚಿಸುವ ಪ್ರಸಕ್ತ ಮತ್ತು ಪರಿಷ್ಕೃತ ಮುಖ್ಯ ವೇತನ ಶ್ರೇಣಿ.

(g) 'ಪ್ರಸಕ್ತ ವೇತನ ಶ್ರೇಣಿ': ಸರ್ಕಾರಿ ನೌಕರನಿಗೆ ಸಂಬಂಧಿಸಿದಂತೆ 'ಪ್ರಸಕ್ತ ವೇತನ ಶ್ರೇಣಿ' ಎಂದರೆ ಖಾಯಂ ಅಥವಾ ಸ್ಥಾನಪನ್ನ ಅಥವಾ ತಾತ್ಕಾಲಿಕ ಸಾಮರ್ಥ್ಯದಲ್ಲಿ 2022ರ ಜುಲೈ 1ನೇ ದಿನಾಂಕದಂದು ಅವನು ಹೊಂದಿದ್ದ ಹುದ್ದೆಗೆ ಅನ್ವಯವಾಗುವ '2018ರ ಶ್ರೇಣಿ' ಮತ್ತು ಸದರಿ ಹುದ್ದೆಗೆ ಸಂಬಂಧಿಸಿದಂತೆ ಆಯಾ ಪ್ರಕರಣಕ್ಕನುಸಾರವಾಗಿ ಅವನಿಗೆ ಅನ್ವಯವಾಗುವ ವೈಯಕ್ತಿಕ ಶ್ರೇಣಿ, ಯಾವುದಾದರೂ ಇದ್ದಲ್ಲಿ ಮತ್ತು ಸದರಿ ಹುದ್ದೆಗೆ


ಪ್ರಸಕ್ತ ವೇತನ ಶ್ರೇಣಿ': ಸರ್ಕಾರಿ ನೌಕರನಿಗೆ ಸಂಬಂಧಿಸಿದಂತೆ 'ಪ್ರಸಕ್ತ ವೇತನ ಶ್ರೇಣಿ' ಎಂದರೆ ಖಾಯಂ ಅಥವಾ ಸ್ಥಾನಪನ್ನ ಅಥವಾ ತಾತ್ಕಾಲಿಕ ಸಾಮರ್ಥ್ಯದಲ್ಲಿ 2022ರ ಜುಲೈ 1ನೇ ದಿನಾಂಕದಂದು ಅವನು ಹೊಂದಿದ್ದ ಹುದ್ದೆಗೆ ಅನ್ವಯವಾಗುವ 2018ರ ಶ್ರೇಣಿ' ಮತ್ತು ಸದರಿ ಹುದ್ದೆಗೆ ಸಂಬಂಧಿಸಿದಂತೆ ಆಯಾ ಪ್ರಕರಣಕ್ಕನುಸಾರವಾಗಿ ಅವನಿಗೆ ಅನ್ವಯವಾಗುವ ವೈಯಕ್ತಿಕ ಶ್ರೇಣಿ, ಯಾವುದಾದರೂ ಇದ್ದಲ್ಲಿ ಮತ್ತು ಸದರಿ ಹುದ್ದೆಗೆ ನೀಡಲಾದ 'ಪ್ರಸಕ್ತ ಆಯ್ಕೆಕಾಲಿಕ ಶ್ರೇಣಿ' ಅಥವಾ 'ಪ್ರಸಕ್ತ ಹಿರಿಯ ವೇತನ ಶ್ರೇಣಿ' ಅಥವಾ

* ಪ್ರಸಕ್ತ 'ಆಯ್ಕೆ ದರ್ಜೆ ವೇತನ ಶ್ರೇಣಿ' ಇವುಗಳಲ್ಲಿ ಯಾವುದಾದರೊಂದನ್ನು ಅವನಿಗೆ ನೀಡಿದ್ದಲ್ಲಿ ಅದು.

(h) 'ಪ್ರಸಕ್ತ ಆಯ್ಕೆಕಾಲಿಕ ವೇತನ ಶ್ರೇಣಿ': ಒಂದು ಹುದ್ದೆಯನ್ನು ಧಾರಣೆ ಮಾಡಿರುವ ಸರ್ಕಾರಿ ನೌಕರನಿಗೆ ಸಂಬಂಧಿಸಿದಂತೆ 'ಪ್ರಸಕ್ತ ಆಯ್ಕೆಕಾಲಿಕ ವೇತನ ಶ್ರೇಣಿ' ಎಂದರೆ ಸದರಿ ಹುದ್ದೆಯ ಸಂಬಂಧದಲ್ಲಿ ಅವನಿಗೆ 1ನೇ ಜುಲೈ 2022ಕ್ಕೆ ಪೂರ್ವದಲ್ಲಿ ಕಾಲಕಾಲಕ್ಕೆ ತಿದ್ದುಪಡಿಗೊಂಡಂತೆ 'ಕರ್ನಾಟಕ ನಾಗರಿಕ ಸೇವಾ (ಕಾಲಬದ್ಧ ಮುಂಬಡ್ತಿ) ನಿಯಮಗಳು, 1983' ರ ಉಪಬಂಧಗಳಿಗೆ ಅನುಸಾರವಾಗಿ ಅಥವಾ ಸರ್ಕಾರವು ಹೊರಡಿಸಬಹುದಾದ

4

OKEN ಸ್ಕ್ಯಾನರ್‌ನೊಂದಿಗೆ ಸ್ಕ್ಯಾನ್ ಮಾಡಲಾಗಿದೆ

ನಿಯಮ / ಆದೇಶಗಳಲ್ಲಿನ ಅವಕಾಶಗಳಂತೆ ಸಂದರ್ಭಾನುಸಾರ ಮಂಜೂರು ಮಾಡಲಾದ ಮುಖ್ಯ ವೇತನ ಶ್ರೇಣಿಯ ಅಂಶವಾದ ಆಯ್ಕೆಕಾಲಿಕ ವೇತನ ಶ್ರೇಣಿ:

(i) 'ಪ್ರಸಕ್ತ ಹಿರಿಯ ವೇತನ ಶ್ರೇಣಿ': ಒಂದು ಹುದ್ದೆಯನ್ನು ಧಾರಣೆ ಮಾಡಿರುವ ಸರ್ಕಾರಿ ನೌಕರನಿಗೆ ಸಂಬಂಧಿಸಿದಂತೆ 'ಪ್ರಸಕ್ತ ಹಿರಿಯ ವೇತನ ಶ್ರೇಣಿ' ಎಂದರೆ ಸದರಿ ಹುದ್ದೆಯ ಸಂಬಂಧದಲ್ಲಿ ಅವನಿಗೆ 1ನೇ ಜುಲೈ 2022ಕ್ಕೆ ಪೂರ್ವದಲ್ಲಿ ಕಾಲಕಾಲಕ್ಕೆ ತಿದ್ದುಪಡಿಗೊಂಡಂತೆ 'ಕರ್ನಾಟಕ ನಾಗರಿಕ ಸೇವಾ (ಹಿರಿಯ ವೇತನ ಶ್ರೇಣಿಗೆ ಸ್ವಯಂಚಾಲಿತ ವಿಶೇಷ ಮುಂಬಡ್ತಿ ನೀಡುವಿಕೆ) ನಿಯಮಗಳು, 1991'ರ ಉಪಬಂಧಗಳಿಗೆ ಅನುಸಾರವಾಗಿ ಅಥವಾ ಸರ್ಕಾರವು ಹೊರಡಿಸಬಹುದಾದ ನಿಯಮ / ಆದೇಶಗಳಲ್ಲಿನ ಅವಕಾಶಗಳಂತೆ ಸಂದರ್ಭಾನುಸಾರ ಮಂಜೂರು ಮಾಡಲಾದ ಮುಖ್ಯ ವೇತನ ಶ್ರೇಣಿಯ ಅಂಶವಾದ ಹಿರಿಯ ವೇತನ ಶ್ರೇಣಿ:


logoblog

Thanks for reading Karnataka Civil (Revised Pay) Service Rules 2024

Previous
« Prev Post

No comments:

Post a Comment