ಬೆಂಗಳೂರು ವಿಭಾಗೀಯ ಹಂತದ ಪ್ರಾಥಮಿಕ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಹಾಗು ಸ್ಥಳಿಯ ಪತ್ರಿಕೆಯಲ್ಲಿ ದಿನಾಂಕ ಪ್ರಕಟಿಸುವ ಬಗ್ಗೆ.
ಉಲ್ಲೇಖ :1. ಮಾನ್ಯ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ರವರ ಅಧಿಸೂಚನೆ ಸಂಖ್ಯೆ: 13(7)...5.-01/2023-24 00:15/06/2024
2. ಜಂಟಿ ನಿರ್ದೇಶಕರು(ಆಡಳಿತ), ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ರವರ ಪತ್ರ ಸಂಖ್ಯೆ: ಶಿ.ವ.ಕೋ/2024-25 ದಿನಾಂಕ:31/07/2024
2023-24 ನೇ ಸಾಲಿನ ಬೆಂಗಳೂರು ವಿಭಾಗೀಯ ಹಂತದ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರ ಹಾಗೂ ಪ್ರೌಢ ಶಾಲಾ ಸಹ ಶಿಕ್ಷಕರ, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕ ವೃಂದದ ಕೋರಿಕೆ ಮತ್ತು ಪರಸ್ಪರ ವರ್ಗಾವಣೆಯ ಕೌನ್ಸಿಲಿಂಗ್‌ನ್ನು, ವರ್ಗಾವಣಾ ಆಧ್ಯತಾ ಪಟ್ಟಿಯಲ್ಲಿರುವ ಅರ್ಹ ಶಿಕ್ಷಕ ವೃಂದದವರಿಗೆ ನಡೆಸಲಾಗುತ್ತದೆ.
ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಶಿಕ್ಷಕರ ಹಿತದೃಷ್ಟಿಯಿಂದ ಹಾಗೂ ಸಮಯ ಹಾಗೂ ಪ್ರಯಾಣವನ್ನು ತಪ್ಪಿಸುವ ಸಲುವಾಗಿ ವರ್ಗಾವಣೆ ಕೌನ್ಸಿಲಿಂಗ್‌ನ್ನು ಉಲ್ಲೇಖ(2) ರನ್ವಯ, ರೌಂಡ್ ರಾಬಿನ್ (ROUND ROBIN) ಮಾದರಿಯಲ್ಲಿ ಅಂದರೆ ಶಿಕ್ಷಕರು ಸಂಬಂಧಿಸಿದ ಉಪನಿರ್ದೇಶಕರ ಕಛೇರಿಯಲ್ಲಿಯೇ ವರ್ಗಾವಣೆ ಕೌನ್ಸಿಲಿಂಗ್ ಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಲು ವ್ಯವಸ್ಥೆ ಮಾಡುವಂತೆ ಸೂಚಿಸಿಲಾಗಿರುತ್ತದೆ.
ಆದ್ದರಿಂದ ಸಂಬಂಧಿಸಿದ ಶಿಕ್ಷಕರು, ಆಯಾ ಜಿಲ್ಲಾ ಉಪನಿರ್ದೇಶಕರ ಕಛೇರಿಯಲ್ಲಿಯೇ ವರ್ಗಾವಣೆ ಕೌನ್ಸಿಲಿಂಗ್‌ಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಈ ಬಗ್ಗೆ ತಮ್ಮ ಜಿಲ್ಲಾ ವ್ಯಾಪ್ತಿಯ ಎಲ್ಲಾ ಮಾಧ್ಯಮ ಪತ್ರಿಕೆಗಳಲ್ಲಿ ಪ್ರಕಟಿಸಿ ವ್ಯಾಪಕ ಪ್ರಚಾರವನ್ನು ಕೈಗೊಳ್ಳಲು ಹಾಗೂ ವರ್ಗಾವಣೆಗೆ ಅರ್ಹತೆ ಹೊಂದಿರುವ ಶಿಕ್ಷಕರಿಗೆ ಮಾಹಿತಿಯನ್ನು ನೀಡಲು ಹಾಗೂ ವಿಭಾಗದ ಒಳಗಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಅರ್ಹತೆ ಹೊಂದಿರುವ ಶಿಕ್ಷಕರಿಗೆ ಮಾಹಿತಿಯನ್ನು ನೀಡಲು ಹಾಗೂ ವಿಭಾಗದ ಒಳಗಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಯ ಒಟ್ಟು ಸಂಖ್ಯೆಗಳಿಗನುಗುಣವಾಗಿ ಕೆಳಕಂಡಂತೆ ವರ್ಗಾವಣೆ ಕೌನ್ಸಿಲಿಂಗ್ ನಡೆಸಲು ತಿಳಿಸಿದೆ.

No comments:
Post a Comment