Saturday, August 3, 2024

Consolidated result of 2024 II PUC Examination - 1, 2 & 3

  Wisdom News       Saturday, August 3, 2024
Hedding ; Karnataka 2nd PUC Consolidated result Statistics 2024...


ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ 2024ರ ದ್ವಿತೀಯ ಪಿಯುಸಿ ಪರೀಕ್ಷೆ-1, 2 ಮತ್ತು 3ರ ಕ್ರೋಢೀಕೃತ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.


2024ರ ದ್ವಿತೀಯ ಪಿಯುಸಿ ಪರೀಕ್ಷೆ-1, 2 ಮತ್ತು 3ಗಳ ಕ್ರೋಢೀಕೃತ ಫಲಿತಾಂಶದ ಅಂಕಿಅಂಶಗಳು.

ಸರ್ಕಾರಿ ಆದೇಶ ಸಂಖ್ಯೆ: ಇಪಿ 203 ಎಸ್‌ಎಲ್‌ಬಿ 2023 ದಿನಾಂಕ: 21-09-2023 ರನ್ವಯ 2024ರಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ - 1, 2 ಮತ್ತು 3ರನ್ನು ನಡೆಸಲಾಗಿತ್ತು. ಸದರಿ ಪರೀಕ್ಷೆಗಳ ಕ್ರೋಢೀಕೃತ ಫಲಿತಾಂಶದ ಅಂಕಿಅಂಶಗಳ ವಿವರಗಳು ಈ ಕೆಳಕಂಡಂತಿವೆ.



1. ಪರೀಕ್ಷೆಗೆ ನೋಂದಣಿಯಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ : 7,20,593 : 7,04,920

2. ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ

3. ಎಲ್ಲಾ ವಿಷಯಗಳಿಗೆ ಗೈರುಹಾಜರಾದ ವಿದ್ಯಾರ್ಥಿಗಳ ಸಂಖ್ಯೆ : 15,673

4. ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 5,98,283

5. ಶೇಕಡವಾರು ಉತ್ತೀರ್ಣ : 84.87%

6. ಫಲಿತಾಂಶವನ್ನು ಕಾಲೇಜುಗಳಲ್ಲಿ ಪ್ರಕಟಿಸುವ ದಿನಾಂಕ : 03-08-2024

7. ದ್ವಿತೀಯ ಪಿಯುಸಿ ಅಂತಿಮ ಫಲಿತಾಂಶಕ್ಕಾಗಿ, ವಿದ್ಯಾರ್ಥಿಗಳು https://kscab.karnataka.gov.in/ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.

ದ್ವಿತೀಯ ಪಿಯುಸಿ ಮೂರು ಪರೀಕ್ಷೆಗೆ ಒಟ್ಟು 7,20,593 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 7,04,920 ವಿದ್ಯಾರ್ಥಿಗಳು ಹಾಜರಾಗಿದ್ದರು. 15,673 ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ-1, 2 ಹಾಗೂ 3 ಕ್ರೋಢೀಕೃತ ಫಲಿತಾಂಶವನ್ನು ಈ ರೀತಿ ಚೆಕ್ ಮಾಡಿ

ದ್ವಿತೀಯ ಪಿಯುಸಿ ಪರೀಕ್ಷೆ-1, 2 ಮತ್ತು 3ರಲ್ಲಿ ಒಟ್ಟು 5,98,283 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇಕಡವಾರು ಉತ್ತೀರ್ಣ ಪ್ರಮಾಣ 84.87% ಆಗಿದೆ. ಫಲಿತಾಂಶವನ್ನು ಕಾಲೇಜುಗಳಲ್ಲಿ ದಿನಾಂಕ 03-08-2024ರ ಇಂದು ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಅಂತಿಮ ಫಲಿತಾಂಶವನ್ನು https://kseb.karnataka.gov.in ಗೆ ಭೇಟಿ ನೀಡಿ ನೋಂದಣಿ ಸಂಖ್ಯೆ ಸೇರಿದಂತೆ ಇತರೆ ಮಾಹಿತಿಯನ್ನು ನೀಡುವ ಮೂಲಕ ರಿಸಲ್ಟ್ ಚೆಕ್ ಮಾಡಬಹುದಾಗಿದೆ.

ಇನ್ನೂ ದ್ವಿತೀಯ ಪಿಯುಸಿ ಮೂರು ಪರೀಕ್ಷೆಗಳಿಗೆ ಹೊಸಬರಾಗಿ ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಸಂಖ್ಯೆ 6,38,676 ಆಗಿತ್ತು. ಇವರಲ್ಲಿ ಪರೀಕ್ಷೆಗೆ 6,24,421 ಮಂದಿ ಹಾಜರಾಗಿದ್ದರು. ಇವರಲ್ಲಿ 5,61,824 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪುನರಾವರ್ತಿತ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊಂಡ 58,502 ವಿದ್ಯಾರ್ಥಿಗಳಲ್ಲಿ 58,003 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 23,305 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಖಾಸಗಿ ಅಭ್ಯರ್ಥಿಗಳಲ್ಲಿ 13,154 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಅಂತ ತಿಳಿಸಿದ್ದಾರೆ.


logoblog

Thanks for reading Consolidated result of 2024 II PUC Examination - 1, 2 & 3

Previous
« Prev Post

No comments:

Post a Comment