ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖದನ್ವಯ ಆಯುಕ್ತಾಲಯದ ವಿಶೇಷ ನೇಮಕಾತಿ ಸಮಿತಿಯ
ದಿ :28/91/2014-15 2:20-03-2015 ಅಂತಿಮ ಆಯ್ಕೆ ಪಟ್ಟಿ ಅಧಿಸೂಚನೆ :22/91/14-15
ದಿ:17-11-2015 ರಲ್ಲಿ ಎಸ್.ಎಸ್.ಎಲ್.ಸಿ ನಕಲಿ ಅಂಕಪಟ್ಟಿಯನ್ನು ಒದಗಿಸಿ ವಿಶೇಷ ನೇಮಕಾತಿಯಡಿ ಗ್ರೂಪ್ ಡಿ ಹುದ್ದೆಯನ್ನು ಪಡೆದಿರುತ್ತಾರೆ. ಸದರಿ ನೌಕರರುಗಳನ್ನು ಕೌನ್ಸಲಿಂಗ್ ಮುಖಾಂತರ ಸ್ಥಳ ನೇಮಕಾತಿ ಮಾಡಲಾಗಿದ್ದು, ನಕಲಿ ಅಂಕಪಟ್ಟಿಯನ್ನು ಒದಗಿಸಿ ವಿಶೇಷ ನೇಮಕಾತಿ ವಡೆದಿರುತ್ತಾರೆ ಎಂಬ ದೂರು ಸ್ವೀಕೃತವಾಗಿರುತ್ತದೆ. ಈ ಸಂಬಂಧ ಎಸ್.ಎಸ್.ಎಲ್.ಸಿ ಅಂಕಪಟ್ಟಿಗಳ ನೈಜತೆಯನ್ನು ನೀಡುವಂತೆ ನಿರ್ದೇಶಕರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಇವರನ್ನು ಕೋರಲಾಗಿದ್ದು, ಸದರಿ ನೌಕರರು ಸಲ್ಲಿಸಿರುವ ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿನ ಅಂಕಗಳು ಈ ಕಛೇರಿಯಲ್ಲಿನ ಸಂಮಟದಲ್ಲಿನ ಅಂಕಗಳಿಗೆ ತಾಳೆ ಹೊಂದುತ್ತಿಲ್ಲ ಹಾಗೂ ಕರ್ನಾಟಕ ಶಾಲಾ ಪರೀಕ್ಷ ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಇಲ್ಲಿಂದ ಸದರಿ ನೌಕರರಿಗೆ ನೈಜತೆಯ ಪ್ರಮಾಣ ಪತ್ರವನ್ನು ನೀಡಿರುವುದಿಲ್ಲ ಎಂಬ ವರದಿ ಸಲ್ಲಿಸಿರುತ್ತಾರೆ.
ಕಾರಣ ಗ್ರೂಪ್ ಡಿ ನೌಕರುಗಳ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ನೌಕರರ ಪಟ್ಟಿಯನ್ನು ಈ ಕಛೇರಿಗೆ ಸಲ್ಲಿಸಿರುವುದರಿಂದ ಸದರಿ ಪಟ್ಟಿಯಲ್ಲಿರುವ ನೌಕರರ ಸೇವಾ ಮಾಹಿತಿ/ದಾಖಲೆಗಳು ಅವಶ್ಯವಿರುವುದರಿಂದ ಸದರಿ ನೌಕರರ ಸೇವಾವಿವರ ಮತ್ತು ಮಾಹಿತಿ ದಾಖಲೆಗಳನ್ನು ದೃಢೀಕರಿಸಿ ಸಲ್ಲಿಸಲು ಸೂಚಿಸಿರುವ ಪ್ರಯುಕ್ತ ಸದರಿ ಪಟ್ಟಿಯಲ್ಲಿರುವ ಗ್ರೂಪ್ ಡಿ ನೌಕರರ ಮಾಹಿತಿಯನ್ನು ಹಾಗೂ ಈ ಕೆಳಕಂಡ ನಮೂನೆ ಹಾಗೂ ದಾಖಲಾತಿಗಳನ್ನು ದಿ:08-08-2024 ರಂದು ಸಂಜೆ 4.00 ಗಂಟೆಯೊಳಗಾಗಿ ಈ ಕಛೇರಿಗೆ ಸಲ್ಲಿಸಲು ಸೂಚಿಸಿದೆ. ತಪ್ಪಿದ್ದಲ್ಲಿ ತಮ್ಮ ಹೆಸರನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. (ಗ್ರೂಪ್ ಡಿ ನೌಕರರ ಪಟ್ಟಿ ಈ ಪತ್ರಕ್ಕೆ ಲಗತ್ತಿಸಿದೆ).

No comments:
Post a Comment