ಗ್ರೂಪ್-"ಎ"ಕಿರಿಯ ಶ್ರೇಣಿ ಶಿಕ್ಷಣಾಧಿಕಾರಿ/ತತ್ಸಮಾನ ವೃಂದಕ್ಕೆ ನಿಯಮ-32 ರಡಿಯಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸುವ ಕುರಿತು.
ಶಾಲಾ ಶಿಕ್ಷಣ ಇಲಾಖೆಯ ಗ್ರೂಪ್ ಎ ಕಿರಿಯ ಶ್ರೇಣಿ ಶಿಕ್ಷಣಾಧಿಕಾರಿ/ ತತ್ಸಮಾನ ವೃಂದದ ನೇರ ನೇಮಕಾತಿಗೆ ಮೀಸಲಾದ ಹುದ್ದೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕನಾಸೇ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಸಂಬಂಧ ಪ್ರಸ್ತುತ ಗ್ರೂಪ್-"ಬಿ" ವೃಂದದ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಬಡ್ತಿ ಪ್ರಸ್ತಾವನೆಯನ್ನು ಪ್ರಾಧಿಕಾರವಾದ ಸರ್ಕಾರಕ್ಕೆ ಸಲ್ಲಿಸಬೇಕಿರುತ್ತದೆ.
ಪ್ರಯುಕ್ತ, ಗ್ರೂಪ್- "ಎ" ಕಿರಿಯ ಶ್ರೇಣಿ ಶಿಕ್ಷಣಾಧಿಕಾರಿ/ತತ್ಸಮಾನ ವೃಂದಕ್ಕೆ ನಿಯಮ-32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಲು ಪ್ರಸ್ತಾವನೆಯನ್ನು ಪ್ರಸ್ತುತ ಖಾಲಿ ಇರುವ ಹಾಗೂ 2024ರ ಡಿಸೆಂಬರ್ ಅಂತ್ಯಕ್ಕೆ ಖಾಲಿಯಾಗುವ ಹುದ್ದೆಗಳನ್ನು ಪರಿಗಣಿಸಿ ಗ್ರೂಪ್ ಬಿ ವೃಂದದ ಅರ್ಹ ಅಭ್ಯರ್ಥಿಗಳು ಈ ಕೆಳಕಂಡ ಮಾಹಿತಿಗಳೊಂದಿಗೆ ನಿಗಧಿತ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ದಿನಾಂಕ: 24.07.2024ರ ಒಳಗೆ ಪ್ರಸ್ತಾವನೆಯನ್ನು ಸಲ್ಲಿಸಲು ಕೋರಿದೆ.
1. 2019-20 ರಿಂದ 2023-24ನೇ ಸಾಲಿನ ವರೆಗೆ 05ವರ್ಷಗಳ ಕಾರ್ಯನಿರ್ವಹಣಾ ವರದಿಗಳಲ್ಲಿ ಕಡ್ಡಾಯವಾಗಿ ಅಂಗೀಕರಿಸುವ ಷರಾ ಮತ್ತು ಸಹಿಯನ್ನು ನಮೂದಿಸಿ ಸಲ್ಲಿಸುವುದು, ತಪ್ಪಿದಲ್ಲಿ ಅಂತಹ ಪ್ರಸ್ತಾವನೆಗಳನ್ನು ಪುರಸ್ಕರಿಸಲಾಗುವುದಿಲ್ಲ.
2. ಸಂಬಂಧಿಸಿದ ಅಧಿಕಾರಿಯು ಸೇವಾವಿವರವನ್ನು ಈ ಪತ್ರದೊಂದಿಗೆ ಅನುಬಂಧಿಸಿರುವ ನಮೂನೆಯಲ್ಲಿ ಕಡ್ಡಾಯವಾಗಿ ಸಲ್ಲಿಸತಕ್ಕದ್ದು
3. ದೂರು/ಇಲಾಖಾ ವಿಚಾರಣೆ/ ನ್ಯಾಯಾಲಯ ಪ್ರಕರಣ ಇಲ್ಲದಿರುವ/ ಇರುವ ಬಗ್ಗೆ ದೃಢೀಕರಣ
4. ಈ ಪತ್ರದಲ್ಲಿ ಅನುಬಂಧಿಸಿದ ಅಧಿಕಾರಿಗಳ ಸಂಪೂರ್ಣ ಪ್ರಸ್ತಾವನೆಯನ್ನು ಆಯಾ ಜಿಲ್ಲಾ ಉಪನಿರ್ದೇಶಕರು ಪರಿಶೀಲಿಸಿ ಘೋಷಿಯಾರ್ ನಲ್ಲಿ ಶಿಫಾರಸ್ಸಿನೊಂದಿಗೆ ಸಲ್ಲಿಸುವುದು.
5. ಅನುಬಂಧದ ಪಟ್ಟಿಯಲ್ಲಿ ಹೆಸರಿಲ್ಲದೆ ಜೇಷ್ಠತೆಯಲ್ಲಿ ಹಿರಿಯರಾದ ಅಧಿಕಾರಿಗಳಿದ್ದಲ್ಲಿ ಅವರುಗಳ ಕಾರ್ಯನಿವರ್ಹಣಾ ವರದಿಗಳನ್ನು ಹಾಗೂ ಇತರೆ ದಾಖಲೆಗಳನ್ನು ಸಹ ಸಲ್ಲಿಸುವುದು. (ಕಛೇರಿ ಟಿಪ್ಪಣಿ ಮಾನ್ಯ ಆಯುಕ್ತರಿಂದ ಅನುಮೋದಿಸಲ್ಪಟ್ಟಿದೆ.
ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದಕ್ಕೆ ಕನಾಸೇ ನಿಯಮ 32ರ ಅಡಿ ಸ್ವತಂತ್ರ ಪ್ರಭಾರದಲ್ಲಿರಿಸಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾದ ಅಧಿಕಾರಿಗಳ ಪಟ್ಟಿ ಈ ಕೆಳಗಿನ ಲಿಂಕ್ ಅಲ್ಲಿ ಇದೆ.

No comments:
Post a Comment