ದ್ವಿತೀಯ ಪಿಯುಸಿಯಲ್ಲಿ ಶೇ. 80ಕ್ಕಿಂತ ಹೆಚ್ಚಿನ ಅಂಕ
ಪಡೆದಿರುವ ಮತ್ತು 3ವರ್ಷಗಳ ಪದವಿ ವ್ಯಾಸಂಗ ಮಾಡಲಿಚ್ಚಿಸುವ ವಿದ್ಯಾರ್ಥಿಗಳಿಂದ ಕೇಂದ್ರದ ಉನ್ನತ ಶಿಕ್ಷಣ ಇಲಾಖೆಯು ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಪಿ.ಎಂ. ಉಷಾ ಹೆಸರಿನಲ್ಲಿ 2024-25ನೇ ಸಾಲಿನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಜಾಲತಾಣ www.scholarships.gov.in ಮೂಲಕ ನ್ಯಾಷನಲ್ ಇ ಸ್ಕಾಲರ್‌ಶಿಪ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು, ಫ್ರೆಶ್ ಬ್ಯಾಚ್ ಮತ್ತು ನವೀಕೃತ ಬ್ಯಾಚ್‌ನ ಅರ್ಜಿಗಳನ್ನು ಅ. 31ರವರೆಗೆ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೊದಲ ಮೂರು ವರ್ಷ ತಲಾ 12 ಸಾವಿರ ರೂ. ಮತ್ತು ಕೊನೆಯ ಎರಡು ವರ್ಷ ತಲಾ 20 ಸಾವಿರ ರೂ. ನೀಡಲಾಗುತ್ತದೆ. ಮಾಹಿತಿಗೆ 080- 23311330 ಸಂಪರ್ಕಿಸಬಹುದು.
⚫ ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿಗೆ ಮೊದಲ ವರ್ಷ 12,000 ನಂತರ 2 ವರ್ಷ 20,000 Scholarship ಸಿಗುತ್ತದೆ.!!
⚫ ಹೆಚ್ಚಿನ ಮಾಹಿತಿಗಾಗಿ:
080-23311330 ಸಂಪರ್ಕಿಸಿ


No comments:
Post a Comment