Tuesday, July 9, 2024

KSET Document Verification Time Table 2023

  Wisdom News       Tuesday, July 9, 2024
Hedding ; KSET Document Verification Time Table 2023...


ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2023 (ಕೆಸೆಟ್-2023) ಅರ್ಹತಾ ಪರೀಕ್ಷೆಗೆ ಪ್ರಾಧಿಕಾರವು ದಿನಾಂಕ11-09-2023ರಂದು ಅಧಿಸೂಚನೆ ಹೊರಡಿಸಿ ದಿನಾಂಕ:30.09.2023ರವರೆಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಸ್ವೀಕರಿಸಲಾಗಿರುತ್ತದೆ. ಅರ್ಜಿ ಸಲ್ಲಿಸಲಾದ ಅಭ್ಯರ್ಥಿಗಳಿಗೆ ದಿನಾಂಕ:13.01.2024ರಂದು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2023 ನಡೆಸಲಾಗಿದ್ದು, ಅಭ್ಯರ್ಥಿಗಳ ಮಾಹಿತಿಗಾಗಿ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿ ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಅಭ್ಯರ್ಥಿಗಳಿಂದ ಸ್ವೀಕರಿಸಲಾದ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಯ ವರದಿಯನ್ನು ಆಧಾರಿಸಿ ಅಂತಿಮ ಕೀ ಉತ್ತರಗಳನ್ನು ಮತ್ತು ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳನ್ನು ಮತ್ತು ಕಟ್‌ ಆಫ್ ಅಂಕಗಳನ್ನು ದಿನಾಂಕ:02.05.2024ರಂದು ಪ್ರಾಧಿಕಾರದ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ.

ದಿನಾಂಕ:28.05.2024 ರಂದು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಕೆಸೆಟ್-2023 ತಾತ್ಕಾಲಿಕ ಅರ್ಹ មក ដ (https://cetonline.karnataka.gov.in/kea/kset2023) ದಾಖಲೆಗಳ ಪರಿಶೀಲನೆಯ ವೇಳಾಪಟ್ಟಿಯನ್ನು ಅನುಬಂಧ-1 ರಲ್ಲಿ ನೀಡಲಾಗಿದೆ. ವಿಷಯವಾರು ಪಟ್ಟಿಯಲ್ಲಿರುವ ಅನುಕ್ರಮ ಸಂಖ್ಯೆಯನ್ನು ಆಧರಿಸಿ ನಿಗಧಿತ ದಿನಾಂಕ ಮತ್ತು ಸಮಯದಂದು ಅವಶ್ಯಕ ದಾಖಲೆಗಳೊಂದಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಲು ಸೂಚಿಸಲಾಗಿದೆ.


ದಾಖಲಾತಿ ಪರಿಶೀಲನೆಗೆ ಹಾಜರಾಗುವ ಕೆಸೆಟ್-2023ರ ಅಭ್ಯರ್ಥಿಗಳಿಗೆ ಸೂಚನೆಗಳನ್ನು ಈ ಕೆಳಗೆ ನೀಡಲಾಗಿದೆ.

ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾರ್ಗಸೂಚಿಗಳು.

1. ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳು, ಪ್ರಾಧಿಕಾರದಿಂದ ನಿಗದಿಪಡಿಸಿದ ದಿನಾಂಕದಂದೇ ಹಾಜರಾಗತಕ್ಕದ್ದು. ನಿಗದಿ ಪಡಿಸಿದ ದಿನಾಂಕದಂದು ಹಾಜರಾಗದ ಅಭ್ಯರ್ಥಿಗಳಿಗೆ ಇತರೆ ದಿನಾಂಕದಂದು ಮೂಲ ದಾಖಲೆಗಳ ಪರಿಶೀಲನೆಗೆ ಅವಕಾಶ ನೀಡಲಾಗುವುದಿಲ್ಲ.

2. ಅಭ್ಯರ್ಥಿಗಳು ಸಲ್ಲಿಸುವ ಎಲ್ಲಾ ಮೂಲ ದಾಖಲೆಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಜಾರಿಯಾಗಿರತಕ್ಕದ್ದು,

3. ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಕಡ್ಡಾಯವಾಗಿ ಮೂಲ ದಾಖಲೆಗಳನ್ನು ಹಾಜರು ಪಡಿಸತಕ್ಕದ್ದು.

ಅಭ್ಯರ್ಥಿಗಳು ಈ ಕೆಳಕಂಡ ಮೂಲ ದಾಖಲೆಗಳನ್ನು ಮತ್ತು ಮೂಲ ದಾಖಲೆಗಳ ಎರಡು ಜೆರಾಕ್ಸ್ ಪ್ರತಿಗಳಿಗೆ ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ದಾಖಲೆಗಳ ಪರಿಶೀಲನಾ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು.

a. ಪರೀಕ್ಷೆಯ ಪ್ರವೇಶ ಪತ್ರ,

b. ಜಾರಿಯಲ್ಲಿರುವ ಆಧಾರ್ ಕಾರ್ಡ್ ಗುರುತಿನ ಚೀಟಿ,

C. ಸ್ನಾತಕೋತ್ತರ ಪದವಿಯ ಎಲ್ಲಾ ವರ್ಷಗಳ / ಸೆಮಿಸ್ಟರ್‌ಗಳ ಅಂಕ ಪಟ್ಟಿ ಮತ್ತು ಪ್ರಮಾಣ ಪತ್ರ


ಅಭ್ಯರ್ಥಿಗಳು ಅನ್‌ಲೈನ್ ಅರ್ಜಿಯಲ್ಲಿ ಈ ಕೆಳಕಂಡ ಮೀಸಲಾತಿಗಳನ್ನು ಕೋರಿದ್ದಲ್ಲಿ ಮಾತ್ರ ಈ ಕೆಳಕಂಡ ಮೂಲ ದಾಖಲೆಗಳನ್ನು ಒದಗಿಸತಕ್ಕದ್ದು. ಆನ್‌ಲೈನ್ ಅರ್ಜಿಯಲ್ಲಿ ಯಾವುದೇ ಮೀಸಲಾತಿ ಕೋರಿರದಿದ್ದಲ್ಲಿ, ಈ ಹಂತದಲ್ಲಿ ಯಾವುದೇ ಮೀಸಲಾತಿ ನೀಡಲು ಅಥವಾ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ.

d. ಅರ್ಜಿಯಲ್ಲಿ ಕೋರಿರುವ ಮೀಸಲಾತಿ ಅನುಸಾರ ಅಭ್ಯರ್ಥಿಯ ಹೆಸರಿನಲ್ಲಿ ಪಡೆದ ಜಾತಿ ಪ್ರಮಾಣ ಪತ್ರ / ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು.

1. ಪರಿಶಿಷ್ಟ ಜಾತಿ ಮತ್ತು ಪ.ಪಂಗಡ ಅಭ್ಯರ್ಥಿಗಳು Form-D ನಮೂನೆಯಲ್ಲಿ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು.

2. ಪ್ರವರ್ಗ-1 ರ ಅಭ್ಯರ್ಥಿಗಳು Form- E ನಮೂನೆಯಲ್ಲಿ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು.

3. 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು Form- F ನಮೂನೆಯಲ್ಲಿ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು. (ವಿವಾಹಿತ ಅಭ್ಯರ್ಥಿಗಳು ಒಟ್ಟು ಕುಟುಂಬ ಆದಾಯವನ್ನು ಘೋಷಿಸಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದು ಸಲ್ಲಿಸತಕ್ಕದ್ದು ಹಾಗೂ ವಿವಾಹಿತ ಮಹಿಳಾ ಅಭ್ಯರ್ಥಿಗಳು ತಮ್ಮ ಹೆಸರಿನೊಂದಿಗೆ ಅವರ ಪತಿಯ ಹೆಸರಿನಲ್ಲಿ ಜಾರಿಯಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದು ಸಲ್ಲಿಸತಕ್ಕದ್ದು)


e. ವಿಕಲಚೇತನ ಅಭ್ಯರ್ಥಿಗಳು ವಿವಿಧ ವೈಕಲ್ಯತೆಯ ಶೇ 40ಕ್ಕೆ ಕಡಿಮೆ ಇಲ್ಲದಿರುವ ಬಗ್ಗೆ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಸಿಆಸುಇ 115 ಸೆನೆನಿ 2005ರಲ್ಲಿ ನಿಗದಿ ಪಡಿಸಿದ ನಮೂನೆಯಲ್ಲಿ ಅಂಗವಿಕಲತೆ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ನೀಡಲಾದ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.

f. ತೃತೀಯ ಲಿಂಗ ಮೀಸಲಾತಿ ಕೋರಿರುವ ಅಭ್ಯರ್ಥಿಗಳು, ತೃತೀಯ ಲಿಂಗ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಅಧಿನಿಯಮ 2019ರ ಕೇಂದ್ರ ಅಧಿನಿಯಮ 2019 ರ ಸೆಕ್ಷನ್ 6 ರ ಖಂಡ (1) ರಲ್ಲಿ ನಿರ್ದೇಶಿಸಿದಂತೆ, ಸಂಬಂಧ ಪಟ್ಟ, ಜಿಲ್ಲಾ ದಂಡಾಧಿಕಾರಿಗಳು ಜಾರಿಮಾಡಿರುವ ತೃತೀಯ ಲಿಂಗ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.

ದಾಖಲಾತಿ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಸೂಚನೆಗಳು

ಸೂಚನೆ:

1. ಅಭ್ಯರ್ಥಿಗಳು ಸಲ್ಲಿಸಿರುವ ಮಾಹಿತಿ / ದಾಖಲೆಗಳು, ಸುಳ್ಳು / ತಿದ್ದುಪಡಿ ಮಾಡಿದ/ Tampered / forged / fabricated ದಾಖಲೆಗಳಾಗಿದ್ದಲ್ಲಿ ಅಂತಹ ಅಭ್ಯರ್ಥಿಯ ಅಭ್ಯರ್ಥಿತ್ವವನ್ನು ಯಾವುದೇ ಮುನ್ಸೂಚನೆ ಇಲ್ಲದೆ ರದ್ದುಗೊಳಿಸಲಾಗುವುದು ಹಾಗೂ ಅವರ ಅರ್ಹತೆಯನ್ನು ಯಾವುದೇ ಸಮಯದಲ್ಲಾದರೂ ರದ್ದುಪಡಿಸಲಾಗುವುದು ಮತ್ತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

2. ಮೂಲ ದಾಖಲೆಗಳ ಪರಿಶೀಲನೆಗೆ ಅಭ್ಯರ್ಥಿಯು ಖುದ್ದು ಹಾಜರಾಗತಕ್ಕದ್ದು.

(ಒಂದು ವೇಳೆ ಅಭ್ಯರ್ಥಿಗೆ ಪ್ರಯಾಣ ಮಾಡಲು ವೈದ್ಯರ ಸಲಹೆ ಮೂಲಕ ನಿಷೇದಿಸಿದ್ದಲ್ಲಿ, ಸೂಕ್ತ ವೈದ್ಯಕೀಯ ಪ್ರಮಾಣ ಪತ್ರ, ಮತ್ತು ಅಭ್ಯರ್ಥಿಯ ಒಪ್ಪಿಗೆ ಪತ್ರದೊಂದಿಗೆ ಅಭ್ಯರ್ಥಿಯ ಹತ್ತಿರದ ಸಂಬಂಧಿಗಳು ಮೂಲ ದಾಖಲೆಗಳೊಂದಿಗೆ ಹಾಜರಾಗಬಹುದು.)

3. ಪ್ರಾಧಿಕಾರವು ನಿಗದಿಪಡಿಸಿದ ದಿನಾಂಕದಂದು ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗದಿದ್ದಲ್ಲಿ, ಅಂತಹ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಅವಕಾಶ ನೀಡಲಾಗುವುದಿಲ್ಲ ಹಾಗೂ ಪ್ರಮಾಣ ಪತ್ರಗಳನ್ನು ಸಲ್ಲಿಸಲೂ ಸಹ ಮತ್ತೊಮ್ಮೆ ಕಾಲಾವಕಾಶ ನೀಡಲಾಗುವುದಿಲ್ಲ.


4. ಅಭ್ಯರ್ಥಿಗಳು, ಮೂಲ ದಾಖಲೆಗಳ ಸಮಯದಲ್ಲಿ ಸಂಬಂಧಪಟ್ಟ ಪ್ರಮಾಣ ಪತ್ರಗಳನ್ನು ಹಾಜರುಪಡಿಸದಿದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ಅರ್ಹರೆಂದು ಪರಿಗಣಿಸಲಾಗುವುದಿಲ್ಲ.

5. ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಲು ಪ್ರತ್ಯೇಕ ಮಾಹಿತಿ ನೀಡಲಾಗುವುದಿಲ್ಲ, ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರಾಧಿಕಾರದ ಅಂತರ್ಜಾಲದಿಂದ ಮಾಹಿತಿ ಪಡೆಯತಕ್ಕದ್ದು.

6. ಮೂಲ ದಾಖಲೆಗಳ ಪರಿಶೀಲನೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಛೇರಿ, 18ನೇ ಕ್ರಾಸ್, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560012 ರಲ್ಲಿ ನಡೆಸಲಾಗುವುದು.


logoblog

Thanks for reading KSET Document Verification Time Table 2023

Previous
« Prev Post

No comments:

Post a Comment