Monday, July 22, 2024

Jantri which tells you how much your salary will increase with the implementation of 7th Pay Commission.

  Wisdom News       Monday, July 22, 2024
Hedding ; Jantri which tells you how much your salary will increase with the implementation of 7th Pay Commission 2024....



7th pay commission : ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ನಾವು ಈ ಲೇಖನದ ಮೂಲಕ ತಿಳಿಸುವ ಮಾಹಿತಿ ಏನೆಂದರೆ 7ನೆಯ ವೇತನ ಆಯೋಗದ ಬಗ್ಗೆ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಬಿಗ್ ಅಪ್ಡೇಟ್ ನೀಡಿದೆ.


 ಅದು ಯಾವ ಅಪ್ಡೇಟ್, ಈ 7ನೆಯ ವೇತನ ಆಯೋಗದ ಉದ್ದೇಶವೇನು, ಈ 7ನೆಯ ವೇತನ ಆಯೋಗದ ಮೂಲಕ ನೌಕರ ವೇತನ ಮತ್ತು ಪಿಂಚಣಿಯಲ್ಲಿ ಎಷ್ಟು ಹಣ ಹೆಚ್ಚಳ ಆಗುತ್ತದೆ, 7ನೆಯ ವೇತನ ಆಯೋಗವನ್ನು ಯಾವಾಗ ಜಾರಿ ಮಾಡಲಾಗುತ್ತದೆ ಎಂಬ ವಿಷಯಗಳ ಕುರಿತು ಈ ಲೇಖನದಲ್ಲಿ ನಿಮಗೆ ಮಾಹಿತಿ ನೀಡಲಾಗಿದೆ. ಅದ್ದರಿಂದ ಈ ವಿಷಯದ ಬಗ್ಗೆ ವಿಧ್ಯಾರ್ಥಿಗಳು, ಸರ್ಕಾರಿ ನೌಕರಿಗಾಗಿ ತಯಾರಿ ಮಾಡುತ್ತಿರುವವರು ಮತ್ತು ಈಗಾಗಲೇ ಸರ್ಕಾರಿ ನೌಕರಿಯನ್ನು ಮಾಡುತ್ತಿರುವವರು ಪ್ರತಿಯೊಬ್ಬರೂ ಈ ಮಾಹಿತಿಯ ಬಗ್ಗೆ ಕಡ್ಡಾಯವಾಗಿ ತಿಲಿದುಕೊಳ್ಳಬೇಕಾಗಿದ್ದು, ತಪ್ಪದೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿರಿ.

ಸ್ನೇಹಿತರೆ ಈ 7 ನೆಯ ವೇತನ ಆಯೋಗಕ್ಕೆ ಸಚಿವ ಸಂಪುಟ ಸಭೆಯಲ್ಲಿ ಸದಸ್ಯರಿಂದ ಈಗಾಗಲೇ ಒಪ್ಪಿಗೆ ಸಿಕ್ಕಿದ್ದು, ರಾಜ್ಯದ ಹಣಕಾಸು ಸಚಿವರಾಗಿರುವ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯ ಅವರು ಈ ವಿಷಯದ ಬಗ್ಗೆ ಘೋಷಣೆಯನ್ನು ಕೂಡ ಮಾಡಿದ್ದಾರೆ. ಸರ್ಕಾರವು ಈ 7 ನೆಯ ವೇತನ ಆಯೋಗದ ಶಿಫಾರಸ್ಸನ್ನು ಆಗಸ್ಟ್ 1 ನೆಯ ತಾರಿಕಿನಿಂದ ಜಾರಿಗೆ ತರಲು ನಿರ್ಧರಿಸಿದ್ದು, ಇದಕ್ಕೆ ಬೇಕಾಗುವ ಸುಮಾರು 20 ಸಾವಿರ ಕೋಟಿಗೂ ಹೆಚ್ಚಿನ ಹೆಚ್ಚುವರಿ ಹಣವನ್ನು ಸರ್ಕಾರ ನೀಡಬೇಕಿದೆ. 



ಇಷ್ಟೆಲ್ಲಾ ಸರ್ಕಾರ ಒಪ್ಪಿಗೆ ನೀಡಿದರು ಸಹ, ಸರ್ಕಾರಿ ನೌಕರರು ತಮ್ಮ ಮುಷ್ಕರವನ್ನು ನಿಲ್ಲಿಸುತ್ತಲೇ ಇಲ್ಲಾ . ಸರ್ಕಾರದ ವಿರುದ್ಧ ಬಿಡದೆ ನಿರಂತರವಾಗಿ ಪ್ರತಿಭಟನೆ ಮತ್ತು ಹೋರಾಟವನ್ನು ಮಾಡುತ್ತಿದ್ದಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೆಳಗೆ ನೀಡಲಾಗಿದೆ.


ನಾವು ನಮ್ಮ ಈ ಕರ್ನಾಟಕ ಸೇವಾ ಪೋರ್ಟಲ್ ಮಾಧ್ಯಮದ ಮೂಲಕ ಜನರಿಗೆ ಬೇಕಾಗುವ ಹಲವು ಉಪಯುಕ್ತ ಮಾಹಿತಿಗಳನ್ನು ಒದಗಿಸುತ್ತೇವೆ. ಈ ಲೇಖನದಲ್ಲಿ ಸರ್ಕಾರಿ ನೌಕರರಿಗೆ 7ನೆಯ ವೇತನ ಆಯೋಗ ಜಾರಿ ಮಾಡುವುದರ ಕುರಿತು ಮಾಹಿತಿ ನೀಡಲಾಗಿದೆ. 



(7th pay commission) 7ನೆಯ ವೇತನ ಆಯೋಗದ ಬಗ್ಗೆ ವಿವರಣೆ :
ರಾಜ್ಯ 7ನೆಯ ವೇತನ ಆಯೋಗ ಸರ್ಕಾರಿ ನೌಕರರ ವೇತನ ಭತ್ಯೆ ಮಾಡಲು ಶಿಫಾರಸು ಮಾಡಿದ್ದ ವಿಷಗಳನ್ನೆಲ್ಲ ಯಥಾವತ್ತಾಗಿ ಮತ್ತೆ ಜಾರಿಗೆ ತರಬೇಕೆಂದು ರಾಜ್ಯದ ಸಂಪುಟ ಸಭೆಯಲ್ಲಿ ಬೇಡಿಕೆಯನ್ನು ಇಡಲಾಗಿದೆ. 




ಈ ಎಲ್ಲಾ ಬೇಡಿಕೆಗಳಿಗೆ ಈಗಾಗಲೇ ಒಪ್ಪಿಗೆ ನೀಡಲಾಗಿದ್ದು, ಯಾವ ಎಲ್ಲಾ ಬೇಡಿಕೆಗಳನ್ನು ಪೂರ್ಣಗೊಳಿಸುತ್ತಾರೆ ಎಂದು ಸರ್ಕಾರಿ ನೌಕರರ ಕಾದು ನೋಡಬೇಕಿದೆ. ತಾವು ನೀಡಿದ ಎಲ್ಲಾ ಬೇಡಿಕೆಗಳನ್ನು ಪೂರೈಸದಿದ್ದರೆ ಮತ್ತೆ ಹೋರಾಟ, ಪ್ರತಿಭಟನೆ ಪ್ರಾರಂಭ ಮಾಡುತ್ತೇವೆ ಎಂದು ಸರ್ಕಾರಿ ನೌಕರರು ಸಭೆಸೇರಿ ನಿರ್ಧಾರ ಮಾಡಿದ್ದಾರೆ. ಇದರ ಬಗ್ಗೆ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ನೀಡಲಾಗಿದೆ. ಅದನ್ನು ಕೂಡ ತಪ್ಪದೆ ಓದಿ.

 


7th pay commission) ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳು ಏನಿವೆ?
ಸರ್ಕಾರಿ ನೌಕರರು ರಾಜ್ಯ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅದಕ್ಕಾಗಿ ಇನ್ನು ಪ್ರತಿಭಟನೆಯನ್ನು ನಿಲ್ಲಿಸುತ್ತಿಲ್ಲ. ಈ ಬೇಡಿಕೆಗಳು ಎನಿವೇ ಅನ್ನುವ ಮಾಹಿತಿ ಇಲ್ಲಿದೆ.

7ನೆಯ ವೇತನ ಆಯೋಗವು ರಾಜ್ಯ ಸರ್ಕಾರಕ್ಕೆ ಹೇಗೆ ವರದಿಗಳನ್ನು ನೀಡಿದೆಯೋ ಅದೇ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಅನ್ನುವುದು.
NPS ಅನ್ನು ರದ್ದುಮಾಡಿ, ಮತ್ತೆ ಹಳೆಯ ಪಿಂಚಣಿ ಆಯೋಗವನ್ನು ಜಾರಿಗೆ ತರಬೇಕು ಅನ್ನುವುದು.
ಆರೋಗ್ಯ ಸಂಜೀವಿನಿ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೆ ತರುವುದು.
ನೌಕರರ ಪ್ರಮುಖವಾದ ಬೇಡಿಕೆ ಅಂದರೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಮಾಡಿ ಮತ್ತೆ ಹಳೆಯ ಪಿಂಚಣಿ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರಬೇಕು ಅನ್ನುವುದು.



ಮಾಹಿತಿಗಳ ಪ್ರಕಾರ ಈ ಹಿಂದಿನ ಸರ್ಕಾರವು ಸರ್ಕಾರಿ ನೌಕರರ ಕುಟುಂಬದ ಸದಸ್ಯರಿಗೆ ಉಚಿತ ಚಿಕಿತ್ಸೆಯನ್ನು ನೀಡುವ ಆರೋಗ್ಯ ಸಂಜ್ಜೆವಿನಿ ಎಂಬ ಯೋಜನೆಯನ್ನು ಅನುಮೋದನೆ ಮಾಡಿ 2 ವರ್ಷಗಳಾಗಿವೆ, ಆದರೆ ಇದನ್ನು ಇನ್ನು ಜಾರಿಗೆ ತರಲಾಗಿಲ್ಲ. ಇದು ಕೂಡ ಸರ್ಕಾರಿ ನೌಕರರ ಒಂದು ಬೇಡಿಕೆಯಾಗಿದೆ. ಇದನ್ನು ಜಾರಿ ಮಾಡಬಹುದು ಎಂಬ ನಿರೀಕ್ಷೆಯನ್ನು ನೌಕರರ ಸಂಘ ಹೊಂದಿದೆ. ಇದೆಲ್ಲದರ ಬಗ್ಗೆ ಸರಕಾರದ ನಿಲುವು ಏನಿದೆ ಎಂದು ಕಾದು ನೋಡಬೇಕಿದೆ.

7th pay commission) 7ನೆಯ ವೇತನ ಆಯೋಗದ ಜಾರಿ ತಡವಾದಲ್ಲಿ ಮತ್ತೆ ಹೋರಾಟ ಹಾಗೂ ಪ್ರತಿಭಟನೆಗೆ ಸಂಘ ಸಿದ್ದ :
ಸರಕಾರವು 7ನೆಯ ವೇತನ ಆಯೋಗದ ಬಗ್ಗೆ ಬೇಗ ಆದೇಶ ಹೊರಡಿಸಿಲ್ಲ, ವಿಳಂಬ ಮಾಡಿತು ಅಂದರೆ ಸರ್ಕಾರಿ ನೌಕರರ ಸಂಘವು ಮತ್ತೆ ಹೋರಾಟವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಸಿದ್ಧವಾಗಿದೆ. 23/07/2024 ನೆಯ ತಾರೀಖಿನ ದಿನ ಸರ್ಕಾರಿ ನೌಕರಿಗೆ ಸೇರ್ಪಡುವ ಎಲ್ಲಾ ಕ್ಷೇತ್ರದ ಸರ್ಕಾರಿ ನೌಕರಿಗೆ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಸಭೆ ಸೇರುವ ಮಾಹಿತಿ ಕೂಡ ಬಂದಿದೆ.

ಇದರ ಜೊತೆಗೆ ನೌಕರರ ಸಂಘವು ಸರ್ಕಾರಕ್ಕೆ ನೀಡಿರುವ ಎಲ್ಲಾ ಬೇಡಿಕೆಗಳ ಬಗ್ಗೆ ಆದಷ್ಟು ಬೇಗ ಆದೇಶ ನೀಡದೆ ಹೋದರೆ, ನಮ್ಮ ಹೋರಾಟವನ್ನು ಮುಂದಿನ ಹಂತಕ್ಕೆ ಸಾಗಿಸುತ್ತೇವೆ ಎಂದಿದ್ದಾರೆ ಮತ್ತು ಇದಕ್ಕೆ ಪೂರಕವಾಗಿ 29/07/2024 ನೆಯ ತಾರಿಕಿನಿಂದ ಎಲ್ಲಾ ಸರಕಾರಿ ಕಚೇರಿಗಳಿಗೆ ನೌಕರರು ಗೈರು ಹಾಜರಾಗುತ್ತೇವೆ, ಯಾವುದೇ ಸರ್ಕಾರಿ ಕೆಲಸವನ್ನು ಆದೇಶ ಬರುವ ತನಕ ಮುಂದುವರಿಸುವುದಿಲ್ಲ, ಅದಕ್ಕಾಗಿ ಈ ಹೋರಾಟವನ್ನು ಮುಂದುವರೆಸಲು ದಾರಿ ಮಾಡಿಕೊಡದೆ ಸರಕಾರವು ಆದಷ್ಟು ಬೇಗ ಆದೇಶವನ್ನು ನೀಡಲಿ ಎಂದು ರಾಜ್ಯದ ನೌಕರರ ಸಂಘ ಹೇಳಿದೆ.

ರಾಜ್ಯ 7ನೆಯ ವೇತನ ಆಯೋಗದ ಬಗ್ಗೆ ತಮಗೆ ಕೆಲವೊಂದು ಪ್ರಮುಖ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿಸಿದ್ದೇನೆ ಎಂದು ಭಾವಿಸುತ್ತೇನೆ. ಇದೆ ರೀತಿಯ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮವನ್ನು ಭೇಟಿ . ಇಲ್ಲಿಯ ವರೆಗೆ ಲೇಖನವನ್ನು ಓದಿದಕ್ಕೆ ತಮಗೆ ಧನ್ಯವಾದಗಳು.


ಸ್ನೇಹಿತರೆ ಇದರ ಜೊತೆಗೆ ನೀವೇನಾದರೂ ವಿಧ್ಯಾರ್ಥಿಗಳು ಆಗಿದ್ದರೆ ಸರ್ಕಾರದಿಂದ ವಿಧ್ಯಾರ್ಥಿಗಳಿಗೆ ನೀಡುವ ಸ್ಕಾಲರ್ಷಿಪ್ ನ ಬಗ್ಗೆ ಮಾಹಿತಿ, ಎಕ್ಸಾಮ್ ಡೇಟ್, ಎಕ್ಸಾಮ್ ರಿಸಲ್ಟ್ ಹಾಗೂ ವಿಧ್ಯಾರ್ಥಿಗಳು ತಮ್ಮ ಇಚ್ಛೆಯ ಹಾಗೆ ಒಳ್ಳೆಯ ಕೋರ್ಸ್ ಅನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಅನ್ನುವ ಮಾಹಿತಿ ಮತ್ತು ಕೆಲಸ ಹುಡುಕುವವರಿಗೆ, ಸರ್ಕಾರಿ ಉದ್ಯೋಗಕ್ಕಾಗಿ ವರ್ಷಗಳಿಂದ ಪರೀಕ್ಷೆ ತಯಾರಿ ನಡೆಸುತ್ತಿರುವವರಿಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಎಲ್ಲಾ ಹುದ್ದೆಗಳ ನೇಮಕಾತಿಯ ಅಧಿಸೂಚನೆಯ ಬಗ್ಗೆ ಮಾಹಿತಿ ನಿಮಗೆ ನೀಡಲಾಗುತ್ತದೆ.



logoblog

Thanks for reading Jantri which tells you how much your salary will increase with the implementation of 7th Pay Commission.

Previous
« Prev Post

No comments:

Post a Comment