Sunday, July 28, 2024

Full details of Question and Answer in House on KSP Recruitment.

  Wisdom News       Sunday, July 28, 2024
Hedding ; Full details of Question and Answer in House on KSP Recruitment...


ರಾಜ್ಯದಲ್ಲಿ ಪೊಲೀಸ್ ಹುದ್ದೆ ಆಕಾಂಕ್ಷಿಗಳಾಗಿದ್ದಂತವರಿಗೆ ಸಿಹಿಸುದ್ದಿಯೊಂದು ಹೊರ ಬಿದ್ದಿದೆ. ಖಾಲಿ ಇರುವಂತ 3,815 ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುತ್ತಿದೆ.

ಈ ಕುರಿತಂತೆ ವಿಧಾನಪರಿಷತ್ತಿನಲ್ಲಿ ಸದಸ್ಯ ಶಶೀಲ್ ಜಿ ನಮೋಶಿ ಅವರು ಗೃಹ ಇಲಾಖೆಯಲ್ಲಿನ ಯಾವ ಯಾವ ಹುದ್ದೆಗಳ ಮತ್ತು ಎಷ್ಟು ಹುದ್ದೆಗಳ ನೇಮಕಾತಿಗಾಗಿ ಆರ್ಥಿಕ ಇಲಾಖೆಯು ಅನುಮೋದನೆ ನೀಡಿದೆ ಅಂತ ಪ್ರಶ್ನಿಸಿದ್ದಾರೆ.

ಇದಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಉತ್ತರಿಸಿದ್ದು, 2023-24 ಮತ್ತು 2024-25ನೇ ಸಾಲಿನಲ್ಲಿ ಡಿವೈಎಸ್ಪಿ ಸಿವಿಲ್ 10 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿ ಇರುತ್ತದೆ. 2021-22ನೇ ಸಾಲಿನಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಸಿವಿಲ್ 4000 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದ್ದು, ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಅಂತ ತಿಳಿಸಿದ್ದಾರೆ.


2021-22ನೇ ಸಾಲಿನಲ್ಲಿ ಕೆ ಎಸ್ ಆರ್ ಪಿಯ ಪಾಲೋಯರ್ಸ್ 250 ಹುದ್ದೆಗಳ ನೇಮಕಾತಿ ಪೂರ್ಣಗೊಂಡಿದೆ. 2022-23ನೇ ಸಾಲಿನ ಪಿಸಿ ಸಿವಿಲ್ 3000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. 2022-23ನೇ ಸಾಲಿನ ಎಪಿಸಿ ಸಿಎಆರ್, ಡಿಎಆರ್ 1500 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ ಅಂತ ಹೇಳಿದ್ದಾರೆ.

ಇನ್ನೂ 2023-24ನೇ ಸಾಲಿನಲ್ಲಿ ಎಪಿಸಿ ಸಿಎಆರ್, ಡಿಎಆರ್ 2000 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಬೇಕಾಗಿರುತ್ತದೆ. 2023-24ನೇ ಸಾಲಿನ ಸ್ಪೆ.ಆರ್ ಪಿಸಿ ಕೆ ಎಸ್ ಆರ್ ಪಿ 1500 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಬೇಕಾಗಿರುತ್ತದೆ. 2022-23ನೇ ಸಾಲಿನ 300 ಪಿಎಸ್‌ಐ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಬೇಕಾಗಿರುತ್ತದೆ ಅಂತ ತಿಳಿಸಿದ್ದಾರೆ.

2023-24ನೇ ಸಾಲಿನ 300 ಪಿಎಸ್‌ಐ, 2024-25ನೇ ಸಾಲಿನ 15 ಡಿಎಸ್‌ಐ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಬೇಕಾಗಿರುತ್ತದೆ ಎಂದಿದ್ದಾರೆ.

ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಗ್ರೂಪ್-ಸಿ ವೃಂದದ 07 ಪ್ರಥಮ ದರ್ಜೆ ಸಹಾಯಕರು, 7 ದ್ವಿತೀಯ ದರ್ಜೆ ಸಹಾಯಕರು ಮತ್ತು 43 ಶೀಘ್ರಲಿಪಿಗಾರರ ಹುದ್ದೆಗಳನ್ನು ನೇರ ನೇಮಕಾತಿಗಾಗಿ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.


ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಲ್ಲಿ ಖಾಲಿಯಿರುವ ಸಹಾಯಕ ಅಧೀಕ್ಷಕರುಗಳ ಹುದ್ದೆ, 197 ವೀಕ್ಷಕರ ಹುದ್ದೆ ಹಾಗೂ 22 ದ್ವಿತೀಯ ದರ್ಜೆ ಬೋಧಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅನುಮೋದನೆಯನ್ನು ನೀಡಲಾಗಿರುತ್ತದೆ ಎಂದಿದ್ದಾರೆ.


logoblog

Thanks for reading Full details of Question and Answer in House on KSP Recruitment.

Previous
« Prev Post

No comments:

Post a Comment