Tuesday, July 9, 2024

Civil PSI 402 Posts Written Examination Eligible Candidates List

  Wisdom News       Tuesday, July 9, 2024
Hedding ; Civil PSI 402 Posts Written Examination Eligible Candidates List...


ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 402 ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಸಿವಿಲ್) (ಪುರುಷ ಮತ್ತು ಮಹಿಳಾ) ಹಾಗೂ ಸೇವೆಯಲ್ಲಿರುವವರ (ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕದ ಪ್ರದೇಶದ ಸ್ಥಳೀಯ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು.

ಈ ಹುದ್ದೆಗಳಿಗೆ ಪರೀಕ್ಷೆ ಬರೆಯಲು ಅರ್ಹತೆ ಪಡೆದಂತ ಅಭ್ಯರ್ಥಿಗಳ ಪಟ್ಟಿಯನ್ನು ಕೆಇಎ ಪ್ರಕಟಿಸಿದೆ.

ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 402 ಪಿಎಸ್‌ಐ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಮೇ.8ರಂದು ಲಿಖಿತ ಪರೀಕ್ಷೆಯನ್ನು ನಿಗದಿ ಪಡಿಸಿತ್ತು. ಆದ್ರೇ ಲೋಕಸಭಾ ಚುನಾವಣೆಯ ಕಾರಣ ಮುಂದೂಡಿಕೆ ಮಾಡಲಾಗಿತ್ತು. ಆ ಬಳಿಕೆ ಸೆಪ್ಟೆಂಬರ್.22, 2024ರಂದು ಲಿಖಿತ ಪರೀಕ್ಷೆಗೆ ಮರು ದಿನಾಂಕ ನಿಗದಿ ಪಡಿಸಿ ಪ್ರಕಟಿಸಲಾಗಿತ್ತು.

ಇದೀಗ 402 ಹುದ್ದೆಗಳ ನೇಮಕಾತಿಗೆ ಪರೀಕ್ಷೆ ಬರೆಯಲು ಅರ್ಹತೆಯನ್ನು ಪಡೆದಂತ ಪಟ್ಟಿಯನ್ನು ಕೆಇಎ ಪ್ರಕಟಿಸಿದೆ. 402 ಪಿಎಸ್‌ಐ ನೇಮಕಾತಿ ಹುದ್ದೆಗಳಿಗೆ ಬರೋಬ್ಬರಿ 66,990 ಮಂದಿ ಪರೀಕ್ಷೆಯನ್ನು ಬರೆಯಲು ಅರ್ಹತೆಯನ್ನು ಪಡೆದಿದ್ದಾರೆ.

logoblog

Thanks for reading Civil PSI 402 Posts Written Examination Eligible Candidates List

Previous
« Prev Post

No comments:

Post a Comment