24-07-2024ರಂದು ಸದನದಲ್ಲಿ ಮಾನ್ಯ ಸದಸ್ಯರು ಗುರುರಾಜ್ ಶೆಟ್ಟಿ ಬೈಂದೂರು ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹುದ್ದೆಗಳ ಕುರಿತು ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಿಗೆ ಕೇಳಿದ ಪ್ರಶ್ನೆ ಇಲ್ಲಿದೆ.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಒಟ್ಟು ಹಾಸ್ಟೆಲ್‌ಗಳಿಗೆ ಮಂಜೂರಾಗಿರುವ ಒಟ್ಟು ವಾರ್ಡನ್‌ಗಳ ಸಂಖ್ಯೆ ಎಷ್ಟು ( ಜಿಲ್ಲಾವಾರು ಅಂಕಿ ಅಂಶ ನೀಡುವುದು.
ಉತ್ತರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಒಟ್ಟು 2446 ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರ ಬಾಲಕ /ಬಾಲಕಿಯರ ವಿದ್ಯಾರ್ಥಿ ನಿಲಯಗಳು ಕಾರ್ಯನಿರ್ವಹಿಸುತ್ತಿದ್ದು ಪ್ರತಿ ನಿಲಯಕ್ಕೆ ತಲಾ ಒಂದು ನಿಲಯ ಪಾಲಕರು / ನಿಲಯ ಮೇಲ್ವಿಚಾರಕರ ಹುದ್ದೆಯಂತೆ ಒಟ್ಟು 2446 ನಿಲಯ ಪಾಲಕರ / ನಿಲಯ ಮೇಲ್ವಿಚಾರಕರ ಹುದ್ದೆಗಳು ಮಂಜೂರಾಗಿರುತ್ತದೆ. ಜಿಲ್ಲಾವಾರು ಮಾಹಿತಿಯನ್ನು ಅನುಬಂಧ-1 ರಲ್ಲಿ ನೀಡಲಾಗಿದೆ.
ಈ ಹುದ್ದೆಗಳ ಪೈಕಿ ಎಷ್ಟು ಹುದ್ದೆಗಳು ಭರ್ತಿಯಾಗಿದೆ; ಎಷ್ಟು ಹುದ್ದೆಗಳು ಖಾಲಿ ಇವೆ.
ಉತ್ತರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಮಂಜೂರಾಗಿರುವ, ಭರ್ತಿಯಾಗಿರುವ ಹಾಗೂ ಖಾಲಿ ಇರುವ ಹುದ್ದೆಗಳ ವಿವರ ಕೆಳಕಂಡಂತಿರುತ್ತದೆ.

No comments:
Post a Comment