Tuesday, June 4, 2024

RTE 2024 Eligibility List

  Wisdom News       Tuesday, June 4, 2024
Hedding ; RTE 2024 Eligibility List...


RTE ಅಡಿಯಲ್ಲಿ ಮಕ್ಕಳ ದಾಖಲಾತಿಗಾಗಿ ಸೀಟು ಹಂಚಿಕೆ ಪ್ರಕ್ರಿಯೆ ನಾಳೆ ಆನ್ ಲೈನ್ ಮೂಲಕ ನಡೆಯಲಿದೆ. ಈ ಮೂಲಕ ಮೊದಲ ಸುತ್ತಿನಲ್ಲಿ ಆರ್ ಟಿಇ ಅಡಿಯಲ್ಲಿ ದಾಖಲಾತಿಗೆ ನಾಳೆ ಸೀಟು ಹಂಚಿಕೆಯನ್ನು ಶಆಲಾ ಶಿಕ್ಷಣ ಇಲಾಖೆ ಮಾಡಲಿದೆ.

ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣ ವಿಭಾಗದ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009 ರ ಸೆಕ್ಷನ್ 12(1)(ಬಿ) ಮತ್ತು 12(1)(ಸಿ) ಅಡಿ 2024-25ನೇ ಸಾಲಿಗೆ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ದಾಖಲಾತಿಗೆ ಮೊದಲ ಸುತ್ತಿನ ಆನ್‌ಲೈನ್ ಸೀಟು ಹಂಚಿಕೆ ಪ್ರಕ್ರಿಯೆಯನ್ನು ನಡೆಸಲು ದಿನಾಂಕ: 05.06.2024 ನಿಗದಿಪಡಿಸಲಾಗಿತ್ತು ಎಂದಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಆರ್.ಟಿ.ಇ ಮೊದಲ ಸುತ್ತಿನ ಆನ್‌ಲೈನ್ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಮುಂದೂಡಿದ್ದು ದಿನಾಂಕ :07.06.2024ರಂದು ನಡೆಸಲಾಗುವುದು. ಹೆಚ್ಚಿನ ವಿವರಗಳಿಗೆ ಇಲಾಖಾ ಅಧಿಕೃತ ವೆಬ್‌ಸೈಟ್ https://schooleducation.karnataka.gov.in/en ಜಾಲತಾಣಕ್ಕೆ ಭೇಟಿ ನೀಡಿ, ಮಾಹಿತಿ ಪಡೆಯಬಹುದಾಗಿ ಎಂದು ತಿಳಿಸಿದ್ದಾರೆ.

logoblog

Thanks for reading RTE 2024 Eligibility List

Previous
« Prev Post

No comments:

Post a Comment