ಶಿಕ್ಷಕರ ವಾರ್ಷಿಕ ಬಡ್ತಿ ತಡೆ ಹಿಡಿಯುವ ಆದೇಶವನ್ನು ಹಿಂಪಡೆಯುವ ಕುರಿತು.
ಈ ಬಾರಿ ಎಸ್ಎಸ್ಎಲ್ಸಿ ಫಲಿತಾಂಶ ಕಳಪೆಯಾಗಿರುವುದು ಶಿಕ್ಷಕರಿಗೆ ದುಬಾರಿಯಾಗಲಿದೆ. ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರ ವಾರ್ಷಿಕ ಬಡ್ತಿಗೆ ತಡೆ ನೀಡುವ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿತ್ತು.
ಇದಕ್ಕೆ ಉದಾಹರಣೆಯಾಗಿ, ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಒ ಜಿಲ್ಲೆಯ ಶಿಕ್ಷಕರ ಬಡ್ತಿಗೆ ತಡೆ ನೀಡಿ ಆದೇಶ ಹೊರಡಿಸಿದ್ದರು.
ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ದೊರೆತ ಕಾರಣ ಪ್ರೌಢಶಾಲೆ ಶಿಕ್ಷಕರಿಗೆ ಜಿ.ಪಂ ಸಿಇಓ ಗರೀಮಾ ಫನ್ವಾರ್ ಶಾಕ್ ನೀಡಿದ್ದರು. ಶಿಕ್ಷಕರ ವಾರ್ಷಿಕ ಬಡ್ತಿಗೆ (ಇಂಕ್ರಿಮೆಂಟ್) ತಡೆ ನೀಡಿ ಸಿಇಓ ಗರೀಮಾ ಫನ್ವಾರ್ ಆದೇಶ ಹೊರಡಿಸದ್ದರು. ಫಲಿತಾಂಶ ಸುಧಾರಣೆಗೆ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಎಲ್ಲಾ ರೀತಿಯ ಸವಲತ್ತು ನೀಡಲಾಗಿದೆ. ಆದರೂ ಫಲಿತಾಂಶವು ತೃಪ್ತಿಕರವಾಗಿಲ್ಲ. ಇದರಿಂದ ಯಾದಗಿರಿ ಜಿಲ್ಲೆ ಕೊನೆ ಸ್ಥಾನ ಬಂದಿದೆ. ಜಿಲ್ಲೆಯ ಫಲಿತಾಂಶವು ಸರಾಸರಗಿಂತ ಶೇ 54.43 ರಷ್ಟು ಕಡಿಮೆ ಬಂದಿದೆ. ಜೊತೆಗೆ ವಿಷಯವಾರುಗಿಂತಲೂ ಕಡಿಮೆ ಫಲಿತಾಂಶ ಬಂದಿದೆ. ಹಾಗಾಗಿ ಈ ಬಾರಿ ಯಾದಗಿರಿ ಜಿಲ್ಲೆಯು ಕಳಪೆ ಫಲಿತಾಂಶ ದಾಖಲಾಗಿದೆ ಎಂದು 24-06-2024ರ ಆದೇಶದಲ್ಲಿ ಅವರು ಉಲ್ಲೇಖಿಸಿದ್ದರು.
ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಷಯವಾರು ಶಿಕ್ಷಕರಿಗೆ ಒಂದು ವರ್ಷದ ಬಡ್ತಿಯನ್ನು ತಡೆ ನೀಡಿ 24-06-2024ರಂದು ಆದೇಶ ಹೊರಡಿಸಿದ್ದರು. ಸಂಬಂಧಪಟ್ಟ ಪ್ರೌಢಶಾಲಾ ಮುಖ್ಯಶಿಕ್ಷಕರ ಹಂತದಲ್ಲಿ ಕ್ರಮವಹಿಸಲು ಗರೀಮಾ ಫನ್ವಾರ್ ಆದೇಶ ಹೊರಡಿಸಿದ್ದರು.
ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಬೆಂಗಳೂರು ಇವರ ಸೂಚನೆಯಂತೆ 24-06-2024ರಂದು ಹೊರಡಿಸಿದ ಆದೇಶವನ್ನು 27-06-2024ರಂದು ಹಿಂಪಡೆದು ಆದೇಶ ಹೊರಡಿಸಿದ್ದಾರೆ.

No comments:
Post a Comment