Friday, June 21, 2024

Regarding those working in the posts of CRP, BRP Primary and Secondary, ECO Primary and Secondary, BRC, APC, Subject Inspector, and Assistant Director should not be office-bearers of any association.

  Wisdom News       Friday, June 21, 2024
Hedding ; Regarding those working in the posts of CRP, BRP Primary and Secondary, ECO Primary and Secondary, BRC, APC, Subject Inspector, and Assistant Director should not be office-bearers of any association...



ಹುದ್ದೆ(ಸಿಆರ್‌ಪಿ, ಬಿಆರ್‌ಪಿ ಪ್ರಾಥಮಿಕ ಮತ್ತು ಪ್ರೌಢ, ಇಸಿಓ ಪ್ರಾಥಮಿಕ ಮತ್ತು ಪ್ರೌಢ, ಬಿಆರ್‌ಸಿ, ಎಪಿಸಿ, ವಿಷಯ ಪರಿವೀಕ್ಷಕರರು, ಹಾಗೂ ಸಹಾಯಕ ನಿರ್ದೇಶಕರು(ಮ.ಉ.ಯೋಜನೆ)) ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಯಾವುದೇ ಸಂಘ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿರಬಾರದು ಎಂಬುದರ ಕುರಿತು.

ಉಲ್ಲೇಖ: ಮಾನ್ಯ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ರವರ ដ ដ 0:43(4) 2....77/2020-21

2:07/12/2021.

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ನಿರ್ದಿಷ್ಟ ಪಡಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದು, ಪರೀಕ್ಷೆ ಬರೆದು ಅರ್ಹತೆ ಪಡೆದು ಕೌನ್ಸಿಲಿಂಗ್‌ನಲ್ಲಿ ಸ್ಥಳ ಆಯ್ಕೆ ಮಾಡಿಕೊಂಡಿರುತ್ತಾರೆ. ಸದರ ಹುದ್ದೆಗಳಿಗೆ ಆಯ್ಕೆಯಾಗಲು ಇರಬೇಕಾದ ಅರ್ಹತೆಗಳಲ್ಲಿ "ಈ ಹುದ್ದೆಗಳಿಗೆ ಆಯ್ಕೆ ಬಯಸುವ ಅಭ್ಯರ್ಥಿಗಳು ಯಾವುದೇ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿರಬಾರದು. ಒಂದು ವೇಳೆ ಪದಾಧಿಕಾರಿಗಳಾಗಿದ್ದಲ್ಲಿ ಆ ಹುದ್ದೆಯನ್ನು ತ್ಯಜಿಸಿ ಆ ಬಗ್ಗೆ ಲಿಖಿತ ಮುಚ್ಚಳಿಕೆಯನ್ನು ನೀಡಿದ ನಂತರ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಹುದ್ದೆಗೆ ವರದಿ ಮಾಡಿಕೊಳ್ಳತಕ್ಕದ್ದು. ಸದರಿ ಹುದ್ದೆಯ ಅವಧಿಯಲ್ಲಿ ಯಾವುದೇ ಸಂಘ ಸಂಸ್ಥೆಯ ಪದಾಧಿಕಾರಿಗಳಾಗಲು ಅವಕಾಶವಿರುವುದಿಲ್ಲ" ಎಂದು ಮಾನ್ಯ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ರವರ ಉಲ್ಲೇಖದ ಪತ್ರದಲ್ಲಿ ತಿಳಿಸಿರುತ್ತಾರೆ.

ಕೆಲವು ಅಭ್ಯರ್ಥಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳ ಹುದ್ದೆಯನ್ನು ತ್ಯಜಿಸದೇ ನಿರ್ದಿಷ್ಟ ಪಡಿಸಿದ ಹುದ್ದೆಯಲ್ಲಿ ಮುಂದುವರೆದಿರುವುದಾಗಿ ತಿಳಿದು ಬಂದಿದೆ. ಪ್ರಯುಕ್ತ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಹುದ್ದೆಯನ್ನು ತ್ಯಜಿಸಿ, ಕೌನ್ಸಿಲಿಂಗ್‌ನಲ್ಲಿ ಆಯ್ದುಕೊಂಡ ನಿರ್ದಿಷ್ಟಪಡಿಸಿದ ಹುದ್ದೆಯಲ್ಲಿ ಮುಂದುವರೆಯುವಂತೆ ತಿಳಿಸುವುದು. ಹಾಗೂ ನಿರ್ದಿಷ್ಟಪಡಿಸಿದ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಯಾವುದೇ ಸಂಘ ಸಂಸ್ಥೆಯ ಪದಾಧಿಕಾರಿಗಳಾಗಲು ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ. ಪ್ರಸ್ತುತ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಹುದ್ದೆಯನ್ನು ತ್ಯಜಿಸದಿದ್ದಲ್ಲಿ ಅಥವಾ ನಿರ್ದಿಷ್ಟಪಡಿಸಿದ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಯಾವುದೇ ಸಂಘ ಸಂಸ್ಥೆಯ ಪದಾಧಿಕಾರಿಗಳಾದಲ್ಲಿ ಸದರಿಯವರ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದು.



Regarding those working in the posts of CRP, BRP Primary and Secondary, ECO Primary and Secondary, BRC, APC, Subject Inspector, and Assistant Director should not be office-bearers of any association.









logoblog

Thanks for reading Regarding those working in the posts of CRP, BRP Primary and Secondary, ECO Primary and Secondary, BRC, APC, Subject Inspector, and Assistant Director should not be office-bearers of any association.

Previous
« Prev Post

No comments:

Post a Comment