Friday, June 14, 2024

Regarding fixation of pay scale of untrained Government Primary School Teachers

  Wisdom News       Friday, June 14, 2024
Hedding ; Regarding fixation of pay scale of trained Government Primary School Teachers to untrained Government Primary School Teachers....


ತರಬೇತಿ ಹೊಂದದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ ಹೊಂದಿದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿಯನ್ನು ನಿಗಧಿಪಡಿಸುವ ಬಗ್ಗೆ.

ತರಬೇತಿ ಹೊಂದದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ ಹೊಂದಿದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿಯನ್ನು ನಿಗಧಿಪಡಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ವಿಷಯಕ್ಕೆ ಸಂಬಂಧಿಸಿದಂತೆ, ಸರ್ಕಾರಿ ಪ್ರಾಥಮಿಕ ಶಾಲಾ ತರಬೇತಿ ರಹಿತ ಶಿಕ್ಷಕರ ಪಿಂಚಣಿಯನ್ನು ನಿಯಮಾನುಸಾರ ನಿರ್ಧರಿಸಿರುವುದನ್ನು ಹಂತ ಹಂತವಾಗಿ ವಿವರಿಸಲಾಗಿರುತ್ತದೆ.

ಪ್ರಯುಕ್ತ, ಉಲ್ಲೇಖ(2)ರ ಅನುಬಂಧ-02 ರಲ್ಲಿನ ಸೂಚನೆಗಳನ್ನಯ ಸರ್ಕಾರಿ ಪ್ರಾಥಮಿಕ ಶಾಲಾ ತರಬೇತಿ ರಹಿತ ಶಿಕ್ಷಕರ ಪಿಂಚಣಿಯನ್ನು ನಿಯಮಾನುಸಾರ ಸರಿಯಾಗಿ ನಿರ್ಧರಿಸಿ ಮಹಾಲೇಖಪಾಲರಿಗೆ ಕೂಡಲೇ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲು ಪಿಂಚಣಿ ಪ್ರಾಧಿಕಾರಿಯಾದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಕ್ತ Accordingly, it is also requested that a MODEL PAY FIXATION MAY BE ISSUED TO ALL THE BLOCK EDUCATION OFFICERS clearly detailing the step-by-step procedure/methodology to fix the pay in the light of the Government oders issued from time to time. duly endorseing a copy to this office ಎಂಬುದಾಗಿ ಉಲ್ಲೇಖ-02 ರಪತ್ರದಲ್ಲಿ ಮಹಾಲೇಖಪಾಲರು ಕೋರಿರುತ್ತಾರೆ.

ಈ ಸಂಬಂಧ ಉಲ್ಲೇಖ-01ರ ದಿನಾಂಕ: 27-02-2024 ರ ಸರ್ಕಾರದ ಪತ್ರದಲ್ಲಿ ಮಹಾಲೇಖಪಾಲರು ಕೋರಿರುವಂತೆ ಪಿಂಚಣಿ ಪ್ರಾಧಿಕಾರಿಯಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮೇಲ್ಕಂಡ ಪ್ರಕರಣದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ತರಬೇತಿ ರಹಿತ ಶಿಕ್ಷಕರ ಪಿಂಚಣಿಯನ್ನು ನಿಯಮಾನುಸಾರ ಸರಿಯಾಗಿ ನಿರ್ಧರಿಸಿ ಕ್ರಮವಹಿಸಲು ಸೂಚನೆ ನೀಡಲು ತಿಳಿಸಲಾಗಿದೆ.

ಪ್ರಸ್ತುತ ಉಲ್ಲೇಖ-01 ರ ಸರ್ಕಾರದ ಪತ್ರದಲ್ಲಿ ನೀಡಿರುವ ನಿರ್ದೇಶನದಂತೆ ತರಬೇತಿ ರಹಿತ ಶಿಕ್ಷಕರ ಪಿಂಚಣಿ ಪ್ರಸ್ತಾವನೆಯನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಸಂಬಂಧ ಪಿಂಚಣಿ ಸಕ್ಷಮ ಪ್ರಾಧಿಕಾರಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತರಬೇತಿ ರಹಿತ ಶಿಕ್ಷಕರ ವೇತನ ಶ್ರೇಣಿಯನ್ನು ತರಬೇತಿ ಹೊಂದಿದ ಶಿಕ್ಷಕರ ವೇತನ ಶ್ರೇಣಿಯಲ್ಲಿ ವೇತನ ನಿಗದಿಪಡಿಸಿ ಮಾನ್ಯ ಮಹಾಲೇಖಪಾಲರು ಕೋರಿರುವಂತೆ MODEL PAY FIXATION ತಃಖ್ಯೆಯನ್ನು ಕೆಳಕಂಡಂತೆ ನೀಡಲಾಗಿದೆ.


ಉದಾಹರಣೆಗೆ X ಎಂಬ ಶಿಕ್ಷಕ 03-11-1979 ರಲ್ಲಿ ನೇಮಕಾತಿ ಹೊಂದಿರುವುದಾಗಿ ಭಾವಿಸಿ ತರಬೇತಿ ಹೊಂದಿದ ಶಿಕ್ಷಕರ ವೇತನ/ ವೇತನ ಶ್ರೇಣಿ ಕಾಲಂ (A) ನಲ್ಲಿ ಮತ್ತು ತರಬೇತಿ ರಹಿತ ಶಿಕ್ಷಕರ ವೇತನ/ ವೇತನ ಶ್ರೇಣಿಯನ್ನು ಕಾಲಂ (8) ನಲ್ಲಿ ನಿಯಮ 43 ರಡಿಯಲ್ಲಿ ಸರ್ಕಾರದ ಆದೇಶ ದಿನಾಂಕ: 20-1-2011 ರಂತೆ ನಿಗಧಿಪಡಿಸಿದೆ.

logoblog

Thanks for reading Regarding fixation of pay scale of untrained Government Primary School Teachers

Previous
« Prev Post

No comments:

Post a Comment