Sunday, June 30, 2024

7th Pay Commission HRA Revised Order

  Wisdom News       Sunday, June 30, 2024
Hedding ; 7th Pay Commission HRA Revised Order...


ಕರ್ನಾಟಕದ ಸರ್ಕಾರಿ ನೌಕರರು, ನಿವೃತ್ತ ನೌಕರರು ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಸರ್ಕಾರ ಯಾವಾಗ ಜಾರಿಗೊಳಿಸುತ್ತದೆ? ಎಂದು ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರ ಮನೆ ಬಾಡಿಗೆ ಭತ್ಯೆ ಪರಿಷ್ಕರಣೆ ಮಾಡಿ ಆದೇಶಿಸಿದೆ.


ಈ ಕುರಿತು ಕರ್ನಾಟಕದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ. 7ನೇ ವೇತನ ಆಯೋಗದ ವರದಿ ಅನ್ವಯ ಅಖಿಲ ಭಾರತ ಸೇವೆಯ ನೌಕರರ ಮನೆ ಬಾಡಿಗೆ ಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಎಷ್ಟು ಹೆಚ್ಚಳವಾಗಲಿದೆ? ಎಂದು ಆದೇಶದಲ್ಲಿ ವಿವರಣೆ ನೀಡಲಾಗಿದೆ.

7ನೇ ವೇತನ ಆಯೋಗದ ವರದಿ ಅನ್ವಯ ಮನೆ ಬಾಡಿಗೆ ಭತ್ಯೆಯನ್ನು ಹೆಚ್ಚಳ ಮಾಡುವ ಕುರಿತು ಎಂದು ಆದೇಶದಲ್ಲಿ ತಿಳಿಸಲಾಗಿದೆ. 1/1/2024ಕ್ಕೆ ಅನ್ವಯವಾಗುವಂತೆ ಕರ್ನಾಟಕ ಕೇಡರ್‌ನ ಅಖಿಲ ಭಾರತ ಸೇವೆಯ ನೌಕರರ ಮನೆ ಬಾಡಿಗೆ ಭತ್ಯೆ ಪರಿಷ್ಕರಣೆ ಮಾಡಲಾಗಿದೆ.


ಕರ್ನಾಟಕದಲ್ಲಿ ಕಾರ್ಯ ನಿರ್ವಹಣೆ ಮಾಡುವ ಅಖಿಲ ಭಾರತ ಸೇವೆಯ ನೌಕರರು ಎಂದರೆ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳ ಮನೆ ಬಾಡಿಗೆ ಭತ್ಯೆ ಪರಿಷ್ಕರಣೆಯಾಗಿದೆ.

ಎಷ್ಟು ಹೆಚ್ಚಳವಾಗಿದೆ?: ಅಖಿಲ ಭಾರತ ಸೇವೆಯ ನೌಕರರ ಮನೆ ಬಾಡಿಗೆ ಭತ್ಯೆಯನ್ನು ನಗರ/ ಪಟ್ಟಣ X, Y ಮತ್ತು Z ಎಂದು ವರ್ಗೀಕರಣ ಮಾಡಿ ಪರಿಷ್ಕರಣೆ ಮಾಡಲಾಗಿದೆ. ಮೊದಲು X ವಲಯಕ್ಕೆ ಶೇ 27, Y ವಲಯಕ್ಕೆ ಶೇ 18 ಮತ್ತು Z ವಲಯಕ್ಕೆ 9ರಷ್ಟು ಮನೆ ಬಾಡಿಗೆ ಭತ್ಯೆ ಇತ್ತು.

7ನೇ ವೇತನ ಆಯೋಗದ ವರದಿಯಂತೆ ಮನೆ ಬಾಡಿಗೆ ಭತ್ಯೆಯನ್ನು X ವಿಭಾಗಕ್ಕೆ ಶೇ 30, Y ವರ್ಗಕ್ಕೆ ಶೇ 20 ಮತ್ತು Z ವರ್ಗಕ್ಕೆ ಶೇ 10ರಷ್ಟು ಪರಿಷ್ಕರಣೆ ಮಾಡಲಾಗಿದೆ.

1/1/2024ರಿಂದಲೇ ಅನ್ವಯವಾಗುವಂತೆ ಅಖಿಲ ಭಾರತ ಸೇವೆಯ ನೌಕರರ ಮನೆ ಬಾಡಿಗೆ ಭತ್ಯೆ ಪರಿಷ್ಕರಣೆಯ ಬದಲಾವಣೆ ಬಗ್ಗೆ ಹೆಚ್‌ಆರ್‌ಎಂಎಸ್‌ನಲ್ಲಿ ಬದಲಾವಣೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

28/5/2024ರಂದು ಅಖಿಲ ಭಾರತ ಸೇವೆಯ ನೌಕರರ ಕಛೇರಿ ಅಕೌಂಟೆಟ್‌ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯಕದರ್ಶಿಗಳಿಗೆ ಮನೆ ಬಾಡಿಗೆ ಭತ್ಯೆಯನ್ನು ಪರಿಷ್ಕರಣೆ ಮಾಡಬೇಕು ಎಂದು ಪತ್ರವನ್ನು ಬರೆದಿದ್ದರು.

ಕರ್ನಾಟಕ ಕೇಡರ್‌ನ ಅಖಿಲ ಭಾರತ ಸೇವೆಯ ನೌಕರರ ಮನೆ ಬಾಡಿಗೆ ಭತ್ಯೆಯನ್ನು ಪರಿಷ್ಕರಣೆ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದರು. 7ನೇ ವೇತನ ಆಯೋಗದ ವರದಿ ಅನ್ವಯ 1/1/2024ರಿಂದಲೇ ಜಾರಿಯಾಗಬೇಕು ಎಂದು ಹೇಳಿದ್ದರು. 7/7/20217ರ ಕೇಂದ್ರ ಸರ್ಕಾರದ ಆದೇಶವನ್ನು ಉಲ್ಲೇಖಿಸಿದ್ದರು


ಕೇಂದ್ರ ಸರ್ಕಾರದ ಆದೇಶದ ಅನ್ವಯ ತುಟ್ಟಿಭತ್ಯೆ ಶೇ 50ರಷ್ಟು ಆಗುವುದರಿಂದ ಕೇಂದ್ರ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ ಶೇ 30, 20 ಮತ್ತು ಶೇ 10ರಷ್ಟು ಏರಿಕೆಯಾಗಬೇಕಿದೆ. ತುಟ್ಟಿಭತ್ಯೆ 1/1/2024ರಂತೆ ಶೇ 50ಕ್ಕೆ ಏರಿಕೆಯಾಗಿದೆ. ಆದ್ದರಿಂದ ಮನೆ ಬಾಡಿಗೆ ಭತ್ಯೆಯನ್ನು ಪರಿಷ್ಕರಣೆ ಮಾಡಿ ಎಂದು ಪತ್ರದಲ್ಲಿ ಸೂಚಿಸಲಾಗಿತ್ತು.


logoblog

Thanks for reading 7th Pay Commission HRA Revised Order

Previous
« Prev Post

No comments:

Post a Comment