Saturday, May 4, 2024

VAO Recruitment Application Date Extended

  Wisdom News       Saturday, May 4, 2024
Hedding ; VAO Recruitment Application Date Extended...


ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡುವ ಮತ್ತು ಶುಲ್ಕ ಪಾವತಿ ಮಾಡುವ ದಿನಾಂಕವನ್ನು ವಿಸ್ತರಣೆ ಮಾಡಿದೆ.

ಈ ಮೊದಲು ಏಪ್ರಿಲ್ 3, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಬಳಿಕ ಅರ್ಜಿ ಸಲ್ಲಿಕೆ ದಿನಾಂಕವನ್ನು ಮೇ 4ಕ್ಕೆ ವಿಸ್ತರಿಸಲಾಗಿತ್ತು. ಮತ್ತೆ ಆ ದಿನಾಂಕವನ್ನು ಮೇ 15 ರವರೆಗೆ ವಿಸ್ತರಿಸಲಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಎಲ್ಲೆಲ್ಲಿ ಎಷ್ಟು ಹುದ್ದೆಗಳಿವೆ?
ಬೆಂಗಳೂರು ನಗರ- 32
ಬೆಂಗಳೂರು ಗ್ರಾಮಾಂತರ- 34
ಚಿತ್ರದುರ್ಗ -32
ಕೋಲಾರ- 45
ತುಮಕೂರು-73
ರಾಮನಗರ -51
ಚಿಕ್ಕಬಳ್ಳಾಪುರ -42
ಶಿವಮೊಗ್ಗ -31
ಮೈಸೂರು 66
ಚಾಮರಾಜನಗರ -55
ಮಂಡ್ಯ -60
ಹಾಸನ -54
ಚಿಕ್ಕಮಗಳೂರು -23
ಕೊಡಗು -6
ಉಡುಪಿ 22
ದಕ್ಷಿಣ ಕನ್ನಡ -50
ಬೆಳಗಾವಿ-64
ವಿಜಯಪುರ- 7
ಬಾಗಲಕೋಟೆ- 22
ಧಾರವಾಡ -12
ಗದಗ -30
ಹಾವೇರಿ- 34
ಉತ್ತರ ಕನ್ನಡ- 2
ಕಲಬುರಗಿ-67
ರಾಯಚೂರು 4
ಕೊಪ್ಪಳ -19
ಬಳ್ಳಾರಿ- 17
ಬೀದರ್- 24
ಯಾದಗಿರಿ- 9
ವಿಜಯನಗರ- 3

ಶೈಕ್ಷಣಿಕ ಅರ್ಹತೆ:
ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ದ್ವಿತೀಯ ಪಿಯುಸಿ, ಡಿಪ್ಲೊಮಾ, ITI ಪೂರ್ಣಗೊಳಿಸಿರಬೇಕು.

ವಯೋಮಿತಿ:
ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
2A, 2B, 3A, 3B ಅಭ್ಯರ್ಥಿಗಳು 03 ವರ್ಷಗಳು
SC/ST ಅಭ್ಯರ್ಥಿಗಳು 05 ವರ್ಷಗಳು

ಅರ್ಜಿ ಶುಲ್ಕ:
2A, 2B, 3A, 3B ಅಭ್ಯರ್ಥಿಗಳು 750/-
SC/ST ಅಭ್ಯರ್ಥಿಗಳು 500/-

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್ನ್ನು ಈ ಕೆಳಗೆ ನೀಡಲಾಗಿದೆ.

ಆನ್ಲೈನ್ ಮೂಲಕ ಅರ್ಜಿ ಹಾಕಲು

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಏಪ್ರಿಲ್ 5, 2024
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 15, 2024
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಮೇ 18, 2024


logoblog

Thanks for reading VAO Recruitment Application Date Extended

Previous
« Prev Post

No comments:

Post a Comment