ಕರ್ನಾಟಕ ರಾಜ್ಯ ಅಗ್ನಿಶಾಮಕ & ತುರ್ತು ಸೇವಾ ಇಲಾಖೆಯಲ್ಲಿ 975 ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಇದೀಗ ಸರಕಾರದ ಮಂಜೂರಾತಿಯನ್ನು ಕೋರಲಾಗಿದೆ.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ 975 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುವಂತೆ ಕೋರಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ಪಿಸಿಎಎಸ್), ಒಳಡಾಳಿತ ಇಲಾಖೆ ಇವರಿಗೆ ಪತ್ರವನ್ನು ಬರೆಯಲಾಗಿದೆ.
ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರ್ದೇಶಕರು, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆಯ ನಿರ್ದೆಶನಾಲಯ ಇವರು ಈ ಕುರಿತು ಪತ್ರವನ್ನು ಬರೆದಿದ್ದಾರೆ.
ಈ ಪತ್ರವು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆಯಲ್ಲಿ ಖಾಲಿಯಿರುವ ವಿವಿಧ ವೃಂದದ ಒಟ್ಟು 975 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಮಂಜೂರಾತಿ ನೀಡುವಂತೆ ಕೋರುವ ಬಗ್ಗೆ ಎಂದು ವಿಷಯ ಪ್ರಸ್ತಾಪಿಸಲಾಗಿದೆ. ಕರ್ನಾಟಕ ಸರ್ಕಾರದ ಒಳಾಡಳಿತ ಇಲಾಖೆಯ ಅಧಿಸೂಚನೆಯನ್ನು ಉಲ್ಲೇಖ ಮಾಡಲಾಗಿದೆ.
ಹುದ್ದೆಗಳ ವಿವರ: ಸರ್ಕಾರದ ಅಧಿಸೂಚನೆಯಲ್ಲಿ ಅಧಿಸೂಚಿಸಿರುವಂತೆ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಕೆಳ ಹಂತದ ನೇರ ನೇಮಕಾತಿ ಹುದ್ದೆಗಳಿಂದ ಮೇಲ್ದರ್ಜೆ ಹುದ್ದೆಗಳಿಗೆ ನೀಡಲಾದ ಪದೋನ್ನತಿ, ವಯೋನಿವೃತ್ತಿ ಮತ್ತು ವಿವಿಧ ಕಾರಣಗಳಿಂದ ಸ್ವಯಂ ನಿವೃತ್ತಿ ಹಾಗೂ ಇನ್ನಿತರ ಕಾರಣಗಳಿಂದ ಮರಣ ಹೊಂದಿದ್ದರಿಂದ, ನೇರ ನೇಮಕಾತಿ ಹುದ್ದೆಗಳು ಖಾಲಿಯಿರುತ್ತವೆ ಎಂದು ವಿವರಿಸಲಾಗಿದೆ.
ಅಲ್ಲದೇ ರಾಜ್ಯದಲ್ಲಿ ಹೊಸದಾಗಿ ಅಗ್ನಿಶಾಮಕ ಠಾಣೆಗಳ ಪ್ರಾರಂಭಿಸಲಾಗಿದ್ದು, ಈ ಠಾಣೆಗಳಿಗೆ ಸೃಜಿಸಲಾದ ಬಹುತೇಕ ಹುದ್ದೆಗಳು ಖಾಲಿಯಿದ್ದು, ಈ ಖಾಲಿಯಿರುವ ಹುದ್ದೆಗಳಿಂದಾಗಿ ಅಗ್ನಿಶಮನ ಹಾಗೂ ರಕ್ಷಣಾ ಕಾರ್ಯಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಲಾಗಿದೆ.
ಆದ್ದರಿಂದ ಇಲಾಖೆಯಲ್ಲಿ ಖಾಲಿಯಿರುವ ಅಧಿಕಾರಿ ಮತ್ತು ಸಿಬ್ಬಂದಿ ಹುದ್ದೆಗಳ ಕೊರತೆಯನ್ನು ಒಟ್ಟಾರೆಯಾಗಿ ಸರಿದೂಗಿಸಲು ನೇರ ನೇಮಕಾತಿ ಮಾಡಿಕೊಳ್ಳುವುದು ಬಹಳ ಅವಶ್ಯಕವಾಗಿದ್ದು, ಅದರಂತೆ ಪ್ರಸ್ತುತ ಇಲಾಖೆಗೆ ಮಂಜೂರಾಗಿರುವ, ಭರ್ತಿಯಾಗಿರುವ ಮತ್ತು ಖಾಲಿಯಿರುವ ನೇರ ನೇಮಕಾತಿ ಹುದ್ದೆಗಳ ವಿವರಗಳನ್ನು ನೀಡಲಾಗಿದೆ.
2020ನೇ ಸಾಲಿನ ನೇಮಕಾತಿಯಲ್ಲಿ ನೇಮಕಾತಿ ಹೊಂದಿದ ರಿಕ್ತ ಸ್ಥಾನಗಳ ಸಂಖ್ಯೆ ಚಾಲಕ ತಂತ್ರಜ್ಞ 14, ಅಗ್ನಿಶಾಮಕ ಚಾಲಕ 11, ಅಗ್ನಿಶಾಮಕ 52 ಸೇರಿ ಒಟ್ಟು 77 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.
ಪ್ರಸ್ತುತ ಅಗ್ನಿ ಶಾಮಕ ಠಾಣಾಧಿಕಾರಿ 64, ಚಾಲಕ ತಂತ್ರಜ್ಞ 27, ಅಗ್ನಿಶಾಮಕ ಚಾಲಕ 153, ಅಗ್ನಿಶಾಮಕ 731 ಸೇರಿ ಒಟ್ಟು 975 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ಕೋರಲಾಗಿದೆ.
ಇಲಾಖೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ವಯೋನಿವೃತ್ತಿ, ಮರಣ ಹೊಂದಿರುವ ಮತ್ತು 2020ನೇ ಸಾಲಿನ ನೇಮಕಾತಿಯಲ್ಲಿ ನೇಮಕಾತಿ ಹೊಂದದೇ ಉಳಿದ ರಿಕ್ತಸ್ಥಾನಗಳು ಹಾಗೂ ಇನ್ನಿತರೆ ಕಾರಣದಿಂದ ಖಾಲಿಯಾದ ಹುದ್ದೆಗಳು ಮತ್ತು ಹೊಸದಾಗಿ ಪ್ರಾರಂಭಗೊಂಡ ಅಗ್ನಿಶಾಮಕ ಠಾಣೆಗಳಿಗೆ ಸೃಜಿಸಲಾದ ಹುದ್ದೆಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಯವರ ಕೊರತೆ ಉಂಟಾಗಿರುತ್ತವೆ.
ಪ್ರಸ್ತುತ ಇಲಾಖೆಯಲ್ಲಿ 2024ರ ಮಾರ್ಚ ತಿಂಗಳ ಅಂತ್ಯಕ್ಕೆ ವಿವಿಧ ವೃಂದದ ಒಟ್ಟು 975 ನೇರ ನೇಮಕಾತಿ ಹುದ್ದೆಗಳು ಖಾಲಿ ಇದ್ದು, ಈ ಖಾಲಿ ಹುದ್ದೆಗಳನ್ನು ಭರ್ತಿಮಾಡುವುದು ಅತ್ಯವಶ್ಯಕವಾಗಿರುತ್ತದೆ.
ಆದ್ದರಿಂದ ಸರ್ಕಾರದ ಅಧಿಸೂಚನೆಯಲ್ಲಿ ಅಧಿಸೂಚಿಸಿರುವಂತೆ ಪ್ರಸ್ತುತ ಇಲಾಖೆಯಲ್ಲಿ ಖಾಲಿಯಿರುವ 975 ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರದ ಮಂಜೂರಾತಿ ನೀಡುವಂತೆ ಪತ್ರದ ಮೂಲಕ ಕೋರಲಾಗಿದೆ.
No comments:
Post a Comment