Wednesday, May 15, 2024

Teachers transfer information:Rollback option is provided

  Wisdom News       Wednesday, May 15, 2024
Hedding ; Teachers transfer information:Rollback option is provided...



ಶಿಕ್ಷಕರ ವರ್ಗಾವಣೆ: 24ಕ್ಕೆ ಅರ್ಹರ ಅಂತಿಮ ಪಟ್ಟಿ👇👇👇👇👇👇👇👇👇👇👇👇👇👇👇👇👇👇👇👇👇


ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರು–ಮುಖ್ಯ ಶಿಕ್ಷಕರ ವರ್ಗಾವಣೆಗೆ ಶಾಲಾ ಶಿಕ್ಷಣ ಇಲಾಖೆ ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದು, ವರ್ಗಾವಣೆಗೆ ಅರ್ಹರಾದ ಶಿಕ್ಷಕರ ಅಂತಿಮ ಪಟ್ಟಿ ಇದೇ 24ರಂದು ಪ್ರಕಟವಾಗಲಿದೆ. 

ಒಂದೇ ಸ್ಥಳ–ಒಂದೇ ಹುದ್ದೆಯಲ್ಲಿ ಕನಿಷ್ಠ ಮೂರು ಹಾಗೂ ಗರಿಷ್ಠ ಐದು ವರ್ಷ ಪೂರೈಸಿದ (ಇದೇ ಮೇ 31ಕ್ಕೆ ಅನ್ವಯವಾಗುವಂತೆ) ಶಿಕ್ಷಕರು ವರ್ಗಾವಣೆಗೆ ಅರ್ಹರಾಗಿರುತ್ತಾರೆ. 



ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ಸೇವಾ ವಿವರಗಳನ್ನು ಪಡೆದು, ಸೇವಾ ಪುಸ್ತಕದ ವಿವರಗಳನ್ನು ಪರಿಶೀಲಿಸಿದ ನಂತರ ಇದೇ 19ರ ಒಳಗೆ ಅಪ್‌ಲೋಡ್‌ ಮಾಡುವರು. 20ರಂದು ತಾತ್ಕಾಲಿಕ ಕರಡು ಪಟ್ಟಿ ಪ್ರಕಟಿಸಲಾಗುವುದು. ಆಕ್ಷೇಪಣೆಗಳಿದ್ದಲ್ಲಿ ಶಿಕ್ಷಕರು 22ರ ಒಳಗೆ ಸಲ್ಲಿಸಬೇಕು.


23ರಂದು ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ 24ರಂದು ವಲಯವಾರು ವರ್ಗಾವಣೆಗೆ ಅರ್ಹರಾದ ಶಿಕ್ಷಕರ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಶೇ 4ರಷ್ಟು (ಶೈಕ್ಷಣಿಕ ತಾಲ್ಲೂಕಿನ ಒಳಗೆ) ವಲಯವಾರು, ಜಿಲ್ಲೆಯ ಒಳಗೆ ಶೇ 7ರಷ್ಟು ಕೋರಿಕೆ ವರ್ಗಾವಣೆ, ಶೇ 2ರಷ್ಟು ವಿಭಾಗವಾರು ವರ್ಗಾವಣೆ, ವಿಭಾಗದ ಹೊರಗೆ ಶೇ 2ರಷ್ಟು ಕೋರಿಕೆ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ.


 ಶಾಲೆ ಆರಂಭವಾಗುವ ಮೇ 29ರ ಒಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಆಯುಕ್ತೆ ಬಿ.ಬಿ. ಕಾವೇರಿ ರವರು ತಿಳಿಸಿದ್ದಾರೆ.


ರಾಜ್ಯದ ಪ್ರಾಥಮಿಕ ಶಾಲಾ ಮತ್ತು ಪ್ರೌಢ ಶಾಲಾ ಶಿಕ್ಷಕರು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ವರ್ಗಾವಣೆ (Teacher Transfer) ಪ್ರಕ್ರಿಯೆಯನ್ನು ಶಾಲಾ ಶಿಕ್ಷಣ ಇಲಾಖೆಯು ಮತ್ತೆ ಆರಂಭಿಸಿದ್ದು, ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿ ಪ್ರಕಟಿಸಿದೆ.

ಈ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ರಾಜ್ಯ ಸರ್ಕಾರ ಮೇ. 31 ರಂದು ಒಪ್ಪಿಗೆ ನೀಡಿತ್ತು. ಇದರ ಬೆನ್ನಲ್ಲೇ ಇಲಾಖೆಯ ವರ್ಗಾವಣೆ ಪ್ರಕ್ರಿಯೆ ಆರಂಭಿಸಿದ್ದು, ಈಗ ವೇಳಾಪಟ್ಟಿ ಪ್ರಕಟಿಸಿದೆ. ಇದರಿಂದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು/ ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು / ತತ್ಸಮಾನ ವೃಂದದ ಶಿಕ್ಷಕರ ವರ್ಗಾವಣೆಗೆ ಕೊನೆಗೂ ದಿನ ಕೂಡಿಬಂದಂತಾಗಿದೆ.


ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯು ಜೂನ್‌ 6 ರಿಂದ ಜುಲೈ 31 ರವರೆಗೆ ನಡೆಯಲಿದೆ. ಜೂನ್‌6 ರಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹೆಚ್ಚುವರಿ ಶಿಕ್ಷಕರ ಪರಿಷ್ಕೃತ ಕರಡು ಪಟ್ಟಿ ಪ್ರಕಟವಾಗಲಿದೆ. ಜೂನ್‌ 10 ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಜೂನ್‌ 6 ಮತ್ತು 10 ರೊಳಗೆ ವರ್ಗಾವಣೆ ತಂತ್ರಾಂಶದ ಮೂಲಕ ಆದ್ಯತೆ ಕೋರಿ ಅರ್ಜಿ, ದಾಖಲೆ ಅಪ್‌ಲೋಡ್‌ ಮಾಡಲು ಅವಕಾಶ ನೀಡಲಾಗುತ್ತದೆ. ಜೂನ್‌ 14ಕಕ್ಕೆ ಕರಡು ಜೇಷ್ಠತಾ ಪಟ್ಟಿ ಪ್ರಕಟವಾಗಲಿದೆ.

ಜೂನ್‌ 17 ಕ್ಕೆ ಕೌನ್ಸಿಲಿಂಗ್ಗೆ ಲಭ್ಯವಿರುವ ವೃಂದವಾರು ವಿಷಯವಾರು ಖಾಲಿ ಹುದ್ದೆಗನ್ನು ಪ್ರಕಟಿಸಲಾಗುತ್ತದೆ. ಜುಲೈ 27 ಕ್ಕೆ ಅಂತಿಮ ಆದ್ಯತಾ ಪಟ್ಟಿಯಂತೆ ಪರಸ್ಪರ ವರ್ಗಾವಣೆಗಳ ಗಣಕೀಕೃತ ಕೌನ್ಸೆಲಿಂಗ್‌ ಮೂಲಕ ಸ್ಥಳ ನಿಯುಕ್ತಿ ನಡೆಯಲಿದೆ.

ಕಳೆದ ವರ್ಷ ಜಾರಿಗೆ ಬಂದ ಹೊಸ ವರ್ಗಾವಣೆ ನಿಯಮದಂತೆ ಈ ವರ್ಗಾವಣೆ ನಡೆಯಲಿದ್ದು, ಪರಸ್ಪರ ವರ್ಗಾವಣೆಗೆ ಇದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಇದುವರೆಗೆ ಒಂದು ಬಾರಿ ಮಾತ್ರ ಈ ರೀತಿಯ ವರ್ಗಾವಣೆ ಮಾಡಿಕೊಳ್ಳಬಹುದಾಗಿತ್ತು. ಒಮ್ಮೆ ವರ್ಗಾವಣೆಯಾದ ಬಳಿಕ ಮತ್ತೆ ಮೂರು ವರ್ಷ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂಬ ನಿಯಮವೂ ಇದರಲ್ಲಿ ಸೇರಿದೆ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು, ಮಲೆನಾಡು ವಲಯ ಹಾಗೂ ನಂಜುಂಡಪ್ಪ ವರದಿಯ ಅನ್ವಯ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಎಂದು ಗುರುತಿಸಲಾಗಿರುವ ತಾಲೂಕುಗಳಿಗೆ ಹೋಗ ಬಯಸುವವರಿಗೆ ವಿಶೇಷ ಆದ್ಯತೆ ದೊರೆಯಲಿದೆ.


ಸಾರ್ವತ್ರಿಕ ವರ್ಗಾವಣೆ ಒಟ್ಟು ವೃಂದ ಬಲದ ಶೇ.11ರಷ್ಟು ಮಿತಿ ಇರುತ್ತದೆ. ವಿಶೇಷ ಆದ್ಯತೆಯಡಿ ವರ್ಗಾವಣೆ ಬಯಸುವವರಿಗೆ ಈ ನಿಯಮ ಅನ್ವಯವಾಗದು. 



ಯಾವುದೇ ಒಂದು ಘಟಕ ಹಾಗೂ ವೃಂದದಲ್ಲಿ ಕನಿಷ್ಠ 10 ವರ್ಷ ಅಥವಾ ಎಲ್ಲ ವೃಂದಗಳೂ ಸೇರಿ 15 ವರ್ಷ ಕೆಲಸ ಮಾಡಿದ ಶಿಕ್ಷಕರನ್ನು ಶೇ.25 ರಷ್ಟು ಮಿತಿಯ ಒಳಗೆ ಖಾಲಿ ಹುದ್ದೆಗಳಿರುವ ತಾಲೂಕಿಗೆ ವರ್ಗಾವಣೆಗೆ ಅವಕಾಶವಿರುತ್ತದೆ. ಈಗಾಗಲೇ ಶಿಕಕ್ಷರ ವರ್ಗಾವಣೆ ಮಾರ್ಗಸೂಚಿಯಲ್ಲಿರುವಂತೆ ಶಿಕ್ಷಕರ ವೇಯ್ಟೆಡ್‌ ಅಂಕಗಳ (ಸೇವಾ ಅಂಕಳಗ) ಲೆಕ್ಕಾಚಾರವನ್ನು ಹೊಸ ನಿಯಮಾವಳಿಗೆ ಸೇರಿಸಲಾಗಿದೆ.



logoblog

Thanks for reading Teachers transfer information:Rollback option is provided

Previous
« Prev Post

No comments:

Post a Comment