2023-24ನೇ ಸಾಲಿಗೆ UPSC ನಾಗರಿಕ ಸೇವೆ ಹಾಗೂ Banking P.O ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಇಲಾಖಾ ವೆಬ್-ಸೈಟ್ https://bcwd.karnataka.gov.in ನಲ್ಲಿ ಪ್ರಕಟಿಸಲಾಗಿದೆ. ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಆಯಾ ಇಲಾಖೆಯಿಂದ ತರಬೇತಿ ನೀಡುತ್ತಿರುವ ಕಾರಣ ಆಯಾ ಇಲಾಖೆಯನ್ನು ಸಂಪರ್ಕಿಸುವುದು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಪ್ರವರ್ಗವಾರು, ಮೀಸಲಾತಿ, ಮೆರಿಟ್ ಮತ್ತು ವಯೋಮಿತಿಯನ್ನು ಅನುಸರಿಸಿ ಮಾಡಲಾಗಿರುತ್ತದೆ.
ಪ್ರವರ್ಗವಾರು ಮೀಸಲಾತಿ ವಿವರ
ಮಹಿಳಾ ಅಭ್ಯರ್ಥಿಗಳಿಗೆ ಶೇ.33 ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ ಶೇ.5 (ಶೇ.50 ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಮತ್ತು ಶೇ.50 ರಷ್ಟು ಸಾಮಾನ್ಯ) ರ ಮೀಸಲಾತಿ ನೀಡಲಾಗಿದೆ.
ಒಂದೇ ಪ್ರವರ್ಗ, ಮೀಸಲಾತಿ ಮತ್ತು ಮೆರಿಟ್ ಹೊಂದಿರುವ ಅಭ್ಯರ್ಥಿಗಳಿದ್ದಲ್ಲಿ, ವಯೋಮಿತಿಯಲ್ಲಿ ಜೇಷ್ಠತೆ ಹೊಂದಿರುವ ಅಭ್ಯರ್ಥಿಗಳಿಗೆ ಆಯ್ಕೆಯಲ್ಲಿ ಆದ್ಯತೆ ನೀಡಲಾಗಿರುತ್ತದೆ.
No comments:
Post a Comment